ಪಶ್ಚಿಮ ಗೋದಾವರಿ: ಆಲಯದಲ್ಲಿ ಪೂಜೆ ಮಾಡಿಕೊಂಡು, ಯಾವಾಗಲೂ ಆಧ್ಯಾತ್ಮಿಕ ಚಿಂತನೆಯಲ್ಲಿ ಇರುವ ಪುರೋಹಿತರು ಮೈದಾನದಲ್ಲಿ ಸಿಕ್ಸ್ ಮತ್ತು ಬೌಂಡರಿಗಳ ಸುರಿಮಳೆಗೈಯುತ್ತಿದ್ದಾರೆ.
ಹೌದು, ಭೀಮಾವರಂನಲ್ಲಿ ಅರ್ಚಕರಿಗಾಗಿಯೇ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. ಇಲ್ಲಿನ ಎಸ್ಆರ್ಕೆಆರ್ ಎಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದ್ದು, ತೆಲಂಗಾಣದಿಂದ ಒಟ್ಟು 19 ತಂಡಗಳು ಭಾಗಿಯಾಗಿವೆ.
ಈ ಪಂದ್ಯಾವಳಿ ನಾಳೆ ಮುಕ್ತಾಯವಾಗಲಿದ್ದು, ಪ್ರಥಮ ಬಹುಮಾನ 60 ಸಾವಿರ ನಗದು ಮತ್ತು ಟ್ರೋಫಿ, ಎರಡನೇ ಬಹುಮಾನ 30 ಸಾವಿರ ನಗದು ಮತ್ತು ಟ್ರೋಫಿ ನೀಡಲಾಗುವುದೆಂದು ಆಯೋಜಕರು ತಿಳಿಸಿದ್ದಾರೆ.
ಒಟ್ನಲ್ಲಿ ಬರೀ ಪೂಜೆ, ಪುನಸ್ಕಾರ ಎಂದು ದೇವಾಲಯದಲ್ಲೇ ಕಾಲ ಕಳೆಯುವ ಪುರೋಹಿತರಿಗೆ ಈ ಕ್ರಿಕೆಟ್ ಪಂದ್ಯಾವಳಿ ಉತ್ಸಾಹ ತಂದಿದೆ.