ETV Bharat / bharat

75ನೇ ಸ್ವಾತಂತ್ರ್ಯೋತ್ಸವ 'ಸನಾತನ ಭಾರತದ ಹೆಮ್ಮೆಯ ಪ್ರತಿಬಿಂಬ': ಪ್ರಧಾನಿ ಮೋದಿ

75ನೇ ಸ್ವಾತಂತ್ರ್ಯ ದಿನಾಚರಣೆ ಅರ್ಥಪೂರ್ಣವಾಗಿ ಆಚರಣೆ ಮಾಡಲು ನಿರ್ಧರಿಸಿರುವ ಕೇಂದ್ರ ಸರ್ಕಾರ ಇಂದು ಮೋದಿ ನೇತೃತ್ವದ ಉನ್ನತ ಮಟ್ಟದ ರಾಷ್ಟ್ರೀಯ ಸಮಿತಿ ಜತೆ ಮೊದಲ ಹಂತದ ಸಂವಾದ ನಡೆಸಿತು. ಇದರಲ್ಲಿ 259 ಸದಸ್ಯರಿದ್ದಾರೆ.

pm modi
pm modi
author img

By

Published : Mar 8, 2021, 6:59 PM IST

ನವದೆಹಲಿ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳಾಗುತ್ತಿರುವ ಈ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ 259 ಸದಸ್ಯರ ರಾಷ್ಟ್ರೀಯ ಸಮಿತಿ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದರು.

75 ವರ್ಷಗಳ ಸ್ವಾತಂತ್ರ್ಯ ಸಂಭ್ರಮದ ವೇಳೆ ಸನಾತನ ಭಾರತದ ಹೆಮ್ಮೆ ಮತ್ತು ಆಧುನಿಕ ಭಾರತದ ಹೊಳಪು ವಿಲೀನಗೊಳ್ಳಲಿದೆ ಎಂದು ನಮೋ ಹೇಳಿದ್ದಾರೆ. ಜತೆಗೆ ಈ ದಿನಾಚರಣೆ ಸ್ವಾತಂತ್ರ್ಯ ಹೋರಾಟದ ಉತ್ಸಾಹ ಮತ್ತು ತ್ಯಾಗದ ಭಾವನೆಯ ಪ್ರತಿಬಿಂಬವಾಗಿದ್ದು, ಹುತಾತ್ಮರಿಗೆ ಗೌರವ ಸಲ್ಲಿಸಬೇಕು. ದೇಶ ಮತ್ತು ಅವರ ಕನಸುಗಳ ಭಾರತವನ್ನ ನಿರ್ಮಿಸುವ ಸಂಕಲ್ಪ ತೆಗೆದುಕೊಳ್ಳಬೇಕಾಗಿದ್ದು, ಇದು ಸನಾತನ ಭಾರತದ ಹೆಮ್ಮೆಯ ನೋಟ ಮತ್ತು ಆಧುನಿಕ ಭಾರತದ ಹೊಳಪು ಹೊಂದಿದೆ ಎಂದಿದ್ದಾರೆ.

ಮೋದಿ ನೇತೃತ್ವದ ಉನ್ನತ ಮಟ್ಟದ ರಾಷ್ಟ್ರೀಯ ಸಮಿತಿ ಜತೆ ಸಂವಾದ

75ನೇ ಸ್ವಾತಂತ್ರ್ಯೋತ್ಸವದಲ್ಲಿ ಜನರ ಭಾಗವಹಿಸುವಿಕೆಯ ಅಗತ್ಯದ ಬಗ್ಗೆ ಒತ್ತಿ ಹೇಳಿದ ನಮೋ, ನಾವು 130 ಕೋಟಿ ದೇಶವಾಸಿಗಳನ್ನ ಒಟ್ಟಿಗೆ ಕರೆದುಕೊಂಡು ಈ ಹಬ್ಬ ಆಚರಿಸಬೇಕಾಗಿದೆ. ಇದರಲ್ಲಿ ಯಾರದೇ ಕೊಡುಗೆ ನಿರಾಕರಣೆ ಮಾಡಲು ಸಾಧ್ಯವಿಲ್ಲ. ಎಲ್ಲರ ಕೊಡುಗೆ ಸ್ವೀಕರಿಸುವ ಜತೆಗೆ ಗೌರವಿಸಬೇಕಾಗಿದೆ ಎಂದರು.

75ನೇ ವರ್ಷದ ಸ್ವಾತಂತ್ರ್ಯ ಹೋರಾಟ, 75ರ ಯೋಜನೆಗಳು, 75ರ ಸಾಧನೆಗಳು, 75ರ ಕ್ರಿಯೆಗಳು ಮತ್ತು 75 ಪರಿಹಾರ ಎಂಬ ಐದು ಅಂಶಗಳೊಂದಿಗೆ ನಾವು ಮುಂದುವರಿಯಬೇಕಾಗಿದೆ. ಇವೆಲ್ಲವೂ ದೇಶದ 130 ಕೋಟಿ ಜನರ ಆಲೋಚನೆಗಳು ಮತ್ತು ಭಾವನೆ ಒಳಗೊಂಡಿರಬೇಕು ಎಂದು ನಮೋ ತಿಳಿಸಿದರು.

ರಾಷ್ಟ್ರಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯಾವುದೇ ಮಗ ಅಥವಾ ಮಗಳು ಇಲ್ಲದ ಯಾವುದೇ ಸ್ಥಳ ಅಥವಾ ಮೂಲೆ ದೇಶದಲ್ಲಿ ಇಲ್ಲ ಎಂದಿರುವ ನಮೋ, ಈ ತ್ಯಾಗಗಳು ಮತ್ತು ಅವರ ಕಥೆಗಳು ಬೆಳಕಿಗೆ ಬಂದಾಗ ಎಲ್ಲರಿಗೂ ದೊಡ್ಡ ಮಟ್ಟದ ಸ್ಫೂರ್ತಿಯಾಗಲಿದೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಮಿತಿಯ ಭಾರತದ ಸ್ವಾತಂತ್ರ್ಯದ 75 ವರ್ಷಗಳ ಸ್ಮರಣಾರ್ಥವಾಗಿ ಆಜಾದಿ ಕಾ ಅಮೃತ್​ ಮಹೋತ್ಸವ ಎಂಬ ಶೀರ್ಷಿಕೆಯ ಮೊದಲ ಸಭೆ ಇಂದು ನಡೆದಿದ್ದು, ಇದರಲ್ಲಿ ಈನಾಡು ಸಮೂಹ ಸಂಸ್ಥೆಗಳ ಮುಖ್ಯಸ್ಥ ರಾಮೋಜಿ ರಾವ್​ ಕೂಡ ಭಾಗಿಯಾಗಿದ್ದರು.

ಜನವರಿ 31ರಂದು ನಮೋ ಅವರ 2021ರ ಮೊದಲ ಮನ್​ ಕಿ ಬಾತ್​ನಲ್ಲಿ ದೇಶದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಹಾಗೂ ಮತ್ತು ಈ ದಿನಾಚರಣೆ ಗುರುತಿಸುವ ಹೋರಾಟದ ಕಥೆ ಬರೆಯುವಂತೆ ಮನವಿ ಮಾಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.