ಮುಂಬೈ : ಕೊರೊನಾ ಸೋಂಕಿಗೆ ಒಳಗಾದವರಿಗೆ ಚಿಕಿತ್ಸೆ ನೀಡಲು ಬಳಸಲಾಗುವ ರೆಮ್‌ಡೆಸಿವಿರ್ (Remdesivir) ಇಂಜೆಕ್ಷನ್‌ನ ಬೆಲೆಯನ್ನು ಮಹಾರಾಷ್ಟ್ರ ಸರ್ಕಾರ ನಿಗದಿ ಪಡಿಸಿದೆ.
ಎಲ್ಲಾ ಪ್ರಮುಖ ನಗರಗಳು, ಪಟ್ಟಣಗಳು ಮತ್ತು ಜಿಲ್ಲೆಗಳನ್ನು ಒಳಗೊಂಡ 59 ಔಷಧೀಯ ಮಳಿಗೆಗಳಲ್ಲಿ ಈ ಇಂಜೆಕ್ಷನ್ ಮಾರಾಟಕ್ಕೆ ಸರ್ಕಾರ ಅನುವು ಮಾಡಿಕೊಟ್ಟಿದೆ ಎಂದು ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಪ್ರದೀಪ್ ವ್ಯಾಸ್ ಮಾಹಿತಿ ನೀಡಿದ್ದಾರೆ.
ಈ ಚುಚ್ಚುಮದ್ದು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಿದೆ. ಆದರೆ, ಖಾಸಗಿ ಆಸ್ಪತ್ರೆಗಳು ಸಹ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದರಿಂದ ಇಂಜೆಕ್ಷನ್‌ನ ಒಂದು ಡೋಸ್‌ನ ಬೆಲೆಯನ್ನು 2,360 ರೂ.ಗೆ ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.