ಮುಂಬೈ: ಅಕ್ಟೋಬರ್ 25 ಮತ್ತು 27ರ ನಡುವೆ ದರಗಳಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. ಆದರೆ ಆ ಬಳಿಕ ಸತತ ಐದನೇ ದಿನವೂ ಇಂಧನ ದರ ಹೆಚ್ಚಳವಾಗಿದೆ. ಇಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 31 ರಿಂದ 39 ಪೈಸೆ ಹಾಗೂ ಡೀಸೆಲ್ ಮೇಲೆ 35 ರಿಂದ 40 ಪೈಸೆಯನ್ನು ತೈಲ ಕಂಪನಿಗಳು ಹೆಚ್ಚಿಸಿವೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 35 ಪೈಸೆ ಏರಿಕೆಯೊಂದಿಗೆ ಲೀಟರ್ ಪೆಟ್ರೋಲ್ ದರ 109.69 ರೂ. ಹಾಗೂ 35 ಪೈಸೆ ಹೆಚ್ಚಳದೊಂದಿಗೆ ಡೀಸೆಲ್ ದರ 98.42 ರೂ.ಗೆ ಏರಿಕೆಯಾಗಿದೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ 113.56 ಹಾಗೂ ಡೀಸೆಲ್ ದರ 104.50 ರೂ.ಗೆ ಏರಿಕೆಯಾಗಿದೆ. ಮಧ್ಯಪ್ರದೇಶದ ಅನೇಕ ನಗರಗಳಲ್ಲಿ ಲೀಟರ್ ಪೆಟ್ರೋಲ್ ಬೆಲೆ ನಿನ್ನೆಯೇ 120 ರೂ. ಗಡಿ ದಾಟಿದೆ.
ಇದನ್ನೂ ಓದಿ: 'ಬೆಲೆ ಏರಿಕೆಯನ್ನ ಜನ್ರು ಒಪ್ಪಲೇಬೇಕು, ಎಲ್ಲಾ ಫ್ರೀ ನೀಡಲು ಸರ್ಕಾರಕ್ಕೆ ಆಗಲ್ಲ' ಎಂದ ಬಿಜೆಪಿ ಸಚಿವ
ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಸೇರಿದಂತೆ ತೈಲ ಕಂಪನಿಗಳು ಅಬಕಾರಿ ಸುಂಕಗಳ ಆಧಾರದ ಮೇಲೆ ಇಂಧನ ದರವನ್ನು ಹೆಚ್ಚಿಸುತ್ತಿರುತ್ತವೆ. ದೇಶದ ಪ್ರಮುಖ ಐದು ಮೆಟ್ರೋ ನಗರಗಳಲ್ಲಿನ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ.