ETV Bharat / bharat

ಇಂದು 29 ಸಾಧಕರಿಗೆ 2020-21ನೇ ಸಾಲಿನ ನಾರೀಶಕ್ತಿ ಪುರಸ್ಕಾರ ಪ್ರದಾನ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ರಾಷ್ಟ್ರಪತಿ ರಾಮನಾಥ ಕೋವಿಂದ್​ ಒಟ್ಟು 29 ಸಾಧಕರಿಗೆ 2020-21ನೇ ಸಾಲಿನ ನಾರೀ ಶಕ್ತಿ ಪುಸ್ಕಾರವನ್ನು ಇಂದು ಪ್ರದಾನ ಮಾಡಲಿದ್ದಾರೆ.

author img

By

Published : Mar 8, 2022, 10:27 AM IST

Nari Shakthi Puraskar Awardees with PM
ಪ್ರಧಾನಿ ಮೋದಿಯೊಂದಿಗೆ ಸಂವಾದದಲ್ಲಿ ಭಾಗವಹಿಸಿದ ನಾರೀ ಶಕ್ತಿ ಪುರಸ್ಕರತರು

ನವದೆಹಲಿ: ಮಹಿಳಾ ಸಬಲೀಕರಣಕ್ಕಾಗಿ ಅದರಲ್ಲೂ ದುರ್ಬಲ ಮಹಿಳೆಯರ ಪ್ರಗತಿಗಾಗಿ ದುಡಿದ 29 ಸಾಧಕರಿಗೆ 2020-21ನೇ ಸಾಲಿನ ನಾರೀಶಕ್ತಿ ಪುರಸ್ಕಾರವನ್ನು ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಇಂದು ಪ್ರದಾನ ಮಾಡಲಿದ್ದಾರೆ. 2020ನೇ ಸಾಲಿನ 14 ಹಾಗೂ 2021ನೇ ಸಾಲಿನ 14 ಒಟ್ಟು 28 ಪ್ರಶಸ್ತಿಗಳನ್ನು 29 ಸಾಧಕರಿಗೆ ನೀಡಿ ಗೌರವಿಸಲಾಗುವುದು. ನಾರಿ ಶಕ್ತಿ ಪುರಸ್ಕಾರವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ ಯಾವುದೇ ಅಸಾಧರಣ ಕೊಡುಗೆ ನೀಡಿದ, ಸಮಾಜದಲ್ಲಿ ಧನಾತ್ಮಕ ಬೆಳವಣಿಗೆಗೆ ಕಾರಣವಾದ ವ್ಯಕ್ತಿಗಳಿಗೆ ಅಥವಾ ಸಂಸ್ಥೆಗಳಿಗೆ ನೀಡಲಾಗುತ್ತದೆ.

ಈ ಬಾರಿ ಮರ್ಚೆಂಟ್ ನೇವಿ ಕ್ಯಾಪ್ಟನ್ ರಾಧಿಕಾ ಮೆನನ್, ಸಾಮಾಜಿಕ ಉದ್ಯಮಿ ಅನಿತಾ ಗುಪ್ತಾ, ಸಾವಯವ ಕೃಷಿಕರು ಮತ್ತು ಬುಡಕಟ್ಟು ಜನಾಂಗದ ಹೋರಾಟಗಾರ್ತಿ ಉಷಾಬೆನ್ ದಿನೇಶ್​ಭಾಯಿ ವಾಸವಾ, ನವೋದ್ಯಮಿ ನಾಸಿರಾ ಅಖ್ತರ್, ಇಂಟೆಲ್ ಇಂಡಿಯಾ ಮುಖ್ಯಸ್ಥೆ ನಿವೃತ್ತಿ ರೈ, ಡೌನ್ ಸಿಂಡ್ರೋಮ್ ಪೀಡಿತ ಕಥಕ್ ನರ್ತಕಿ ಸೇಲಿ ನಂದಕಿಶೋರ್, ಮೊದಲ ಮಹಿಳಾ ಉರಗ ರಕ್ಷಕಿ ವನಿತಾ ಜಗದೇವ್​ ಬೊರಾಡೆ ಮತ್ತು ಗಣಿತ ತಜ್ಞೆ ನೀನಾ ಗುಪ್ತಾ ಮುಂತಾದವರು ಪ್ರಶಸ್ತಿ ಪುರಸ್ಕೃತರ ಸಾಲಿನಲ್ಲಿದ್ದಾರೆ.

ಮಹಿಳಾ ದಿನಾಚರಣೆಯ ಹಿಂದಿನ ದಿನ ಪ್ರಧಾನಿ ನರೇಂದ್ರ ಮೋದಿ ಅವರು ನಾರೀಶಕ್ತಿ ಪುರಸ್ಕೃತರ ಜೊತೆ ಸಂವಾದ ನಡೆಸಿದರು. ಸಂವಾದ ವೇಳೆ ಸಾಧಕರನ್ನು ಶ್ಲಾಘಿಸಿದ ಪ್ರಧಾನಮಂತ್ರಿ, ಇಂದು ಮಹಿಳೆಯರು ತಮ್ಮ ಛಾಪು ಮೂಡಿಸಿ ದೇಶ ಹೆಮ್ಮೆ ಪಡುವಂತೆ ಮಾಡದ ಕ್ಷೇತ್ರಗಳೇ ಇಲ್ಲ. ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರ ಹೆಜ್ಜೆ ಗುರುತುಗಳಿವೆ. ರಾಜ್ಯ ಹಾಗೂ ದೇಶಕ್ಕೆ ಕೊಡುಗೆ ನೀಡುತ್ತಿರುವ ಈ ಎಲ್ಲ ಸಾಧಕರು ಮಾಡುತ್ತಿರುವ ಕೆಲಸಗಳಲ್ಲಿ ಸೇವಾ ಮನೋಭಾವವಿದ್ದರೂ, ಅವರ ಕೆಲಸದಲ್ಲಿ ಹೊಸತನ ಗೋಚರಿಸುತ್ತದೆ ಎಂದರು.

ಆರ್ಥಿಕ ಸ್ವಾವಲಂಬಿಗಳಾಗಿ ಗುರುತಿಸಿಕೊಳ್ಳಿ: ಸ್ಥಳೀಯರಿಗೆ ಧ್ವನಿಯಾಗುವಂತಹ' ಸರ್ಕಾರದ ಹೊಸ ಪ್ರಯತ್ನಗಳ ಯಶಸ್ಸು ಮಹಿಳೆಯರ ಕೊಡುಗೆ ಮೇಲೆ ಅವಲಂಬಿತವಾಗಿದೆ. ಮಹಿಳೆಯರ ಸಾಮರ್ಥ್ಯ ಅರಿಯುವಲ್ಲಿ ಹಾಗೂ ಆ ಸಾಮರ್ಥ್ಯಗಳನ್ನು ಗುರುತಿಸಲು ಸಾಧ್ಯವಾಗುವಂತಹ ಯೋಜನೆಗಳನ್ನು ರೂಪಿಸುವಲ್ಲಿಯೂ ಸರ್ಕಾರ ಕೆಲಸ ಮಾಡುತ್ತಿದೆ. ತಮ್ಮ ಕುಟುಂಬದ ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳುವಂತಹ ಸ್ಥಿತಿಗೆ ಮಹಿಳೆ ಬರಬೇಕು. ಈ ಮೂಲಕ ಮಹಿಳೆ ಆರ್ಥಿಕ ಸ್ವಾವಲಂಬಿಯಾಗಿ ಗುರುತಿಸಿಕೊಳ್ಳಬೇಕು ಎಂದ ಅವರು, ಸ್ವಾತಂತ್ರ್ಯ ದಿನಾಚರಣೆಯ ಅಮೃತಮಹೋತ್ಸವ ವರ್ಷಾಚರಣೆಯ ಈ ಸಂದರ್ಭದಲ್ಲಿ ಸರ್ಕಾರದ 'ಸಬ್​ಕಾ ಪ್ರಯಾಸ್​' ಕಾರ್ಯಕ್ರಮದ ಬಗ್ಗೆಯೂ ನರೇಂದ್ರ ಮೋದಿ ಮಾತನಾಡಿದರು.

ಖುಷಿಯಾದ ಪುರಸ್ಕೃತರು: ದೇಶದ ಪ್ರಧಾನಿಯನ್ನು ಭೇಟಿಯಾಗುವ ಹಾಗೂ ಅವರೊಂದಿಗೆ ಮಾತನಾಡುವಂತಹ ಅವಕಾಶ ಸಿಗುವುದು ನಮ್ಮ ಕನಸಾಗಿತ್ತು. ಆದರೆ, ಆ ಕನಸು ಇಷ್ಟು ಬೇಗ ನನಸಾಗಿದೆ. ದೇಶದ ಉನ್ನತ ನಾಯಕನೊಂದಿಗೆ ಸಂವಾದದಲ್ಲಿ ಭಾಗವಹಿಸುವಂತಹ ಅವಕಾಶ ನೀಡಿ, ಕನಸು ನನಸು ಮಾಡಿದ್ದಕ್ಕಾಗಿ ಪುರಸ್ಕೃತರು ಪ್ರಧಾನಿ ಮೋದಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದರು. ಜೊತೆಗೆ ಸರ್ಕಾರದ ಕಾರ್ಯಕ್ರಮಗಳನ್ನು ಶ್ಲಾಘಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.