ETV Bharat / bharat

2 ಕಿಮೀ ಕಾಲ್ನಡಿಗೆಯಲ್ಲೇ ಸಾಗಿ ಪುರಿ ಜಗನ್ನಾಥನ ದರ್ಶನ ಪಡೆದ ದ್ರೌಪದಿ ಮುರ್ಮು.. ವಿಡಿಯೋ

ಎರಡು ದಿನಗಳ ಕಾಲ ಒಡಿಶಾ ರಾಜ್ಯ ಪ್ರವಾಸದಲ್ಲಿರುವ ದ್ರೌಪದಿ ಮುರ್ಮು ಅವರು ಮೊದಲ ದಿನವಾದ ಇಂದು ಪುರಿ ಜಗನ್ನಾಥನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸುವ ಮೂಲಕ ರಾಜ್ಯ ಪ್ರವಾಸ ಆರಂಭಿಸಿದರು.

President Walks 2
ಕಾಲ್ನಡಿಗೆ ಮೂಲಕ ಪುರಿ ಜಗನ್ನಾಥನ ದರ್ಶನ ಪಡೆದ ದ್ರೌಪದಿ ಮುರ್ಮು
author img

By

Published : Nov 10, 2022, 10:18 PM IST

Updated : Nov 11, 2022, 9:06 AM IST

ಭುವನೇಶ್ವರ್​: ಇಂದಿನಿಂದ ಎರಡು ದಿನಗಳ ಕಾಲ ಒಡಿಶಾ ರಾಜ್ಯ ಪ್ರವಾಸದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮ ಅವರು ಇಂದು ಪುರಿ ಕ್ಷೇತ್ರ ತಲುಪಿ ಕಾಲ್ನಡಿಗೆ ಮೂಲಕ ಸುಮಾರು 2ಕಿ.ಮಿವರೆಗೆ ಕ್ರಮಿಸಿ ಜಗನ್ನಾಥನ ದರ್ಶನ ಪಡೆದರು. ಜುಲೈನಲ್ಲಿ ದೇಶದ ಉನ್ನತ ಹುದ್ದೆ ರಾಷ್ಟ್ರಪತಿ ಪಟ್ಟವನ್ನು ಅಲಂಕರಿಸಿದ ನಂತರ ಇದೇ ಮೊದಲ ಬಾರಿಗೆ ಅವರು ತಮ್ಮ ತವರು ರಾಜ್ಯಕ್ಕೆ ಭೇಟಿ ನೀಡಿದ್ದು, ಜಗನ್ನಾಥನ ದರ್ಶನ ಪಡೆಯುವ ಮೂಲಕ ರಾಜ್ಯದ ಪ್ರವಾಸ ಪ್ರಾರಂಭಿಸಿದ್ದಾರೆ.

ಇನ್ನು ಪುರಿ ಕ್ಷೇತ್ರ ಪ್ರವೇಶಿದ ಮುರ್ಮು ಅವರು, ನಗರದ ಗ್ರ್ಯಾಂಡ್ ರಸ್ತೆಯ ಬಲಗಂಡಿ ಚೌಕ್​ ಬಳಿ ವಾಹನದಿಂದ ಇಳಿದು ದೇವಸ್ಥಾನಕ್ಕೆ ಕಾಲ್ನಡಿಗೆ ಆರಂಭಿಸಿದರು. ಅವರೊಂದಿಗೆ ಅವರ ಮಗಳು, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಬಿಜೆಪಿ ನಾಯಕ ಸಂಬಿತ್​ ಪಾತ್ರ ಸೇರಿದಂತೆ ಹಿರಿಯ ಅಧಿಕಾರಿಗಳು ಹೆಜ್ಜೆ ಹಾಕತೊಡಗಿದರು.

ಕಾಲ್ನಡಿಯಲ್ಲೇ ಸಾಗಿ ಪುರಿ ಜಗನ್ನಾಥನ ದರ್ಶನ ಪಡೆದ ದ್ರೌಪದಿ ಮುರ್ಮು

ದೇವಸ್ಥಾನಕ್ಕೆ ಚಲಿಸುವ ಮಾರ್ಗದಲ್ಲಿ ಜನರು ಘೋಷಣೆ ಕೂಗುತ್ತ ಮುರ್ಮು ಅವರನ್ನು ಸ್ವಾಗತಿಸಿದರು. ಅಲ್ಲದೇ ಶಾಲಾ ಮಕ್ಕಳು ಸಹ ಘೋಷಣೆ ಕೂಗುತ್ತ ಮುರ್ಮ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡರು. ಸುಮಾರು 2 ಕಿ.ಮೀ ವರಗೆ ಕ್ರಮಿಸಿ ಜಗನ್ನಾಥ ದೇವಸ್ಥಾನವನ್ನು ತಲುಪಿದ ಮುರ್ಮು ಅವರು, ಮೊದಲು ದೇವಸ್ಥಾನದ ಅರುಣ ಸ್ತಂಭವನ್ನು ಸ್ಪರ್ಶಿಸಿ ದೇಗುಲ ಪ್ರವೇಶಿಸಿದರು.

ಬಳಿಕ ದೇವಸ್ಥಾನದಲ್ಲಿ ಜಗನ್ನಾಥ ದೇವರು, ಬಲಭದ್ರ ಮತ್ತು ದೇವಿ ಸುಭದ್ರೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಸುಮಾರು 30 ನಿಮಿಷಗಳ ಕಾಲ ದೇವಸ್ಥಾನದಲ್ಲೇ ಕಾಲ ಕಳೆದ ಮುರ್ಮು ಅವರು ಬಳಿಕ ಪುರಿ ರಾಜಭವನಕ್ಕೆ ತೆರಳಿ ಪ್ರಸಾದ ಸ್ವೀಕರಿಸಿದರು.

ಇನ್ನು ಇಂದು ಬೆಳಗ್ಗೆ ರಾಷ್ಟ್ರಪತಿ ಅವರು ವಿಶೇಷ ವಿಮಾನದ ಮೂಲಕ ಭುವನೇಶ್ವರಕ್ಕೆ ಆಗಮಿಸಿದ್ದು, ಅವರನ್ನು ಗವರ್ನರ್ ಗಣೇಶಿ ಲಾಲ್, ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮತ್ತು ಇತರ ಉನ್ನತ ಅಧಿಕಾರಿಗಳು ಸ್ವಾಗತಕೋರಿದರು.

ನಾಳೆ ಮುರ್ಮು ಅವರು ಭುವನೇಶ್ವರದಲ್ಲಿರುವ ತಪೋಬನ್ ಪ್ರೌಢಶಾಲೆ, ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮತ್ತು ಕುಂತಲಾ ಕುಮಾರಿ ಸಬತ್ ಆದಿವಾಸಿ ಬಾಲಕಿಯರ ಹಾಸ್ಟೆಲ್​ಗೆ ಭೇಟಿ ನೀಡಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ಸಂವಾದ ನಡೆಸಲಿದ್ದಾರೆ. ಬಳಿಕ ಮಧ್ಯಾಹ್ನ ಕೇಂದ್ರ ಶಿಕ್ಷಣ ಸಚಿವಾಲಯದ ವಿವಿಧ ಯೋಜನೆಗೆಳಿಗೆ ಚಾಲನೆ ನೀಡಿ ನವ ದೆಹಲಿಗೆ ಹಿಂತಿರುಗಲಿದ್ದಾರೆ.

ಇದನ್ನೂ ಓದಿ: ಮಾರಣಾಂತಿಕ ಕಾಯಿಲೆ.. ಮಗಳಿಗೆ 'ಶ್ರೀಕೃಷ್ಣ'ನೊಂದಿಗೆ ಮದುವೆ ಮಾಡಿಸಿದ ತಂದೆ

Last Updated : Nov 11, 2022, 9:06 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.