ಸೋನ್ಭದ್ರ (ಉ.ಪ್ರ): ಬುಡಕಟ್ಟು ಜನಾಂಗದವರ ಸಭೆಯಲ್ಲಿ ಪಾಲ್ಗೊಳ್ಳಲು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಇಂದು ಬೆಳಗ್ಗೆ 10.40 ಕ್ಕೆ ಸೋನ್ಭದ್ರದ ಭಭಾನಿ ಪ್ರದೇಶದಲ್ಲಿರುವ ಸೇವಾ ಕುಂಜ್ ಆಶ್ರಮಕ್ಕೆ ಆಗಮಿಸಲಿದ್ದಾರೆ.
ರಾಷ್ಟ್ರಪತಿ ಆಗಮನ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಡಿಎಂ ಅಭಿಷೇಕ್ ಸಿಂಗ್ ಮತ್ತು ಎಸ್ಪಿ ಅಮರೇಂದ್ರ ಪ್ರಸಾದ್ ಸಿಂಗ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಇದನ್ನು ಓದಿ: ಚಿಕ್ಕಬಳ್ಳಾಪುರದಲ್ಲಿ ಅನಾಹುತ: ಕುರಿಗಳ ಶೆಡ್ಗೆ ಬೆಂಕಿ, 60 ಕುರಿಗಳು,20 ಮೇಕೆ, 4 ಹಸುಗಳು ಭಸ್ಮ
ಈ ಕಾರ್ಯಕ್ರಮದಲ್ಲಿ 20 ಸಾವಿರ ಬುಡಕಟ್ಟು ಜನಾಂಗದವರು ಭಾಗವಹಿಸುವ ಸಾಧ್ಯತೆಯಿದೆ. ಇನ್ನು ಸಭೆಯ ಬಳಿಕ ರಾಷ್ಟ್ರಪತಿಗಳು ಸೇವಾ ಕುಂಜ್ ಆಶ್ರಮದ ವಿದ್ಯಾರ್ಥಿಗಳ ವಸತಿ ನಿಲಯವನ್ನು ಉದ್ಘಾಟಿಸಲಿದ್ದಾರೆ.