ETV Bharat / bharat

ರಾಷ್ಟ್ರಪತಿ ದ್ರೌಪದಿ ಮುರ್ಮು ಘಟಿಕೋತ್ಸವದ ಭಾಷಣದ ವೇಳೆ ಪವರ್​ ಕಟ್​..! - ಮಹಾರಾಜ ರಾಮಚಂದ್ರ ಭಂಜಾ ದೇವು ವಿವಿ ಘಟಿಕೋತ್ಸವ

ರಾಷ್ಟ್ರಪತಿ ದ್ರೌಪದಿ ಮುರ್ಮು ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ವಿದ್ಯುತ್​ ಕೈಕೊಟ್ಟಿತು. ಆದರೆ, ಅದಕ್ಕೆ ಜಗ್ಗದ ರಾಷ್ಟ್ರಪತಿಯವರು ಕತ್ತಲೆಯಲ್ಲಿ ತಮ್ಮ ಮಾತುಗಳನ್ನು ಮುಂದುವರೆಸಿದ ಘಟನೆ ನಡಯಿತು.

President Murmu
ರಾಷ್ಟ್ರಪತಿ ದ್ರೌಪದಿ ಮುರ್ಮು
author img

By

Published : May 6, 2023, 4:41 PM IST

ಮಯೂರ್‌ಭಂಜ್ (ಒಡಿಶಾ): ಇಲ್ಲಿನ ಮಹಾರಾಜ ರಾಮಚಂದ್ರ ಭಂಜದೇಯೊ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಭಾಷಣ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಕರೆಂಟ್​ ಕೈಕೊಟ್ಟಿದ್ದರಿಂಂದ ವಿದ್ಯುತ್​ ದೀಪಗಳೆಲ್ಲವೂ ಆರಿದವು. ವಿಶ್ವವಿದ್ಯಾನಿಲಯದ ಇಡೀ ಸಭಾಂಗಣವೇ ಕತ್ತಲೆಯಲ್ಲಿ ಮುಳುಗಿ ಹೋಯಿತು. ಹೌದು, ವಿದ್ಯುತ್ ವ್ಯತ್ಯಯದಿಂದ ರಾಷ್ಟ್ರಪತಿಗಳ ಭಾಷಣಕ್ಕೆ ಅಡ್ಡಿಯಾಯಿತು.

ಮಯೂರ್‌ಭಂಜ್‌ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಮೂರು ದಿನಗಳ ಪ್ರವಾಸ ಕೈಗೊಂಡಿದ್ದರು. ಇಂದು ಅವರು ಪ್ರವಾಸದ ಕೊನೆಯ ದಿನವಾಗಿತ್ತು. ರಾಷ್ಟ್ರಪತಿಗಳು ಇಂದು ನಡೆದ ಮಹಾರಾಜ ಶ್ರೀರಾಮಚಂದ್ರ ಭಂಜಾ ದೇವು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿ ಸ್ಥಾನ ವಹಿಸಿದ್ದರು.

ರಾಷ್ಟ್ರಪತಿ ಭಾಷಣದ ವೇಳೆ ಪವರ್​ ಕಟ್​: ವೇದಿಕೆಯಲ್ಲಿ ರಾಷ್ಟ್ರಪತಿಗಳು ಭಾಷಣ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ವಿದ್ಯುತ್ ಕೈಕೊಟ್ಟಿತು. ಆದರೆ, ರಾಷ್ಟ್ರಪತಿಗಳು ಮಾತ್ರ ಅದಕ್ಕೆ ಜಗ್ಗಲಿಲ್ಲ. ಕತ್ತಲಲ್ಲೆ ತಮ್ಮ ಭಾಷಣವನ್ನು ಮುಂದುವರೆಸಿದರು. ಅವರು ತಮ್ಮ ಉಂಟಾದ ಅಸಮಾಧಾನವನ್ನು ಬೇರೆಯೇ ರೀತಿಯಲ್ಲಿ ವ್ಯಕ್ತಪಡಿಸಿರುವುದು ಕಂಡುಬಂತು. ಅಧಿಕಾರ ಎಂಬುದು ಕಣ್ಣಾಮುಚ್ಚಾಲೆ ಆಡುತ್ತಿದೆ ಎಂದು ರಾಷ್ಟ್ರಪತಿ ಮುರ್ಮು ಹೇಳಿದರು. ಅವರ ಈ ಮಾತುಗಳನ್ನು ಪ್ರೇಕ್ಷಕರು ತಾಳ್ಮೆಯಿಂದಲೇ ಕುಳಿತು ಕೇಳಿದರು.

ಇದನ್ನೂ ಓದಿ: ಗಾಯಗೊಂಡ ಬಾಲಕನಿಗೆ ಫೆವಿಕ್ವಿಕ್ ಬಳಸಿ ಚಿಕಿತ್ಸೆ: ಖಾಸಗಿ ವೈದ್ಯಕೀಯ ಸಿಬ್ಬಂದಿ ವಿರುದ್ಧ ಆರೋಪ

ಬೆಳಗ್ಗೆ 11.56ರಿಂದ ಮಧ್ಯಾಹ್ನ 12.05ರವರೆಗೆ ವಿದ್ಯುತ್​ ಕಡಿತ: ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ರೈರಂಗಪುರದವರಾದ ಮುರ್ಮು ಅವರನ್ನು ಮಣ್ಣಿನ ಮಗಳು ಎಂದು ಕರೆಯಲಾಗುತ್ತದೆ. ಮಾಹಿತಿಯ ಪ್ರಕಾರ, ರಾಷ್ಟ್ರಪತಿ ದ್ರೌಪದಿ ಮುರ್ಮು ತನ್ನ ಭಾಷಣವನ್ನು ಪ್ರಾರಂಭಿಸಿದ ಒಂಬತ್ತು ನಿಮಿಷಗಳ ನಂತರ ವಿದ್ಯುತ್ ಸ್ಥಗಿತಗೊಂಡಿತು. ಬೆಳಗ್ಗೆ 11.56ರಿಂದ ಮಧ್ಯಾಹ್ನ 12.05ರವರೆಗೆ ವಿದ್ಯುತ್ ಇರಲಿಲ್ಲ. ನಂತರ ಒಡಿಶಾ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ವಿದ್ಯುತ್ ಕಡಿತವನ್ನು ದೃಢಪಡಿಸಲಾಯಿತು.

ಇದನ್ನೂ ಓದಿ: ಮಧುರೈ ಕಲ್ಲಜಗರ್ ದೇವರ ಚಿತ್ತಿರೈ ಉತ್ಸವದಲ್ಲಿ ಕಾಲ್ತುಳಿತ: ಐವರ ಸಾವು

ವಿದ್ಯುತ್ ವೈಫಲ್ಯಕ್ಕೆ ಕಾರಣರಾದ ವ್ಯಕ್ತಿಗಳ ವಿರುದ್ಧ ಕ್ರಮ-ಉಪಕುಲಪತಿ: ಟಾಟಾ ಪವರ್, ಉತ್ತರ ಒಡಿಶಾ ಪವರ್ ಡಿಸ್ಟ್ರಿಬ್ಯೂಷನ್ ಲಿಮಿಟೆಡ್‌ನ ಸಿಇಒ ಭಾಸ್ಕರ್ ಸರ್ಕಾರ್ ಅವರು, ''ಸಭಾಂಗಣದಲ್ಲಿ ವಿದ್ಯುತ್​ ವಿತರಣೆ ಯಾವುದೇ ವ್ಯತ್ಯಯವಾಗಿಲ್ಲ ಮತ್ತು ವಿದ್ಯುತ್ ವೈರಿಂಗ್‌ನಲ್ಲಿನ ಕೆಲವು ದೋಷಗಳಿಂದಾಗಿ ದೋಷ ಉಂಟಾಗಿದೆ'' ಎಂದು ಸಮಜಾಯಿಸಿ ನೀಡಿದ್ದಾರೆ. ಉಪಕುಲಪತಿ ಸಂತೋಷ್ ಕುಮಾರ್ ತ್ರಿಪಾಠಿ ಅವರು, ರಾಷ್ಟ್ರಪತಿ ಭಾಷಣದ ವೇಳೆ ಆದ ವಿದ್ಯುತ್​ ಸಮಸ್ಯೆಗೆ ಕ್ಷಮೆಯನ್ನೂ ಯಾಚಿಸಿದ್ದಾರೆ. ''ದುರದೃಷ್ಟಕರ ಘಟನೆಗಾಗಿ ನಾನು ತುಂಬಾ ವಿಷಾದಿಸುತ್ತೇನೆ. ವಿದ್ಯುತ್ ವೈಫಲ್ಯದಿಂದ ನಮಗೆ ನಾಚಿಕೆಯಾಗುತ್ತಿದೆ. ಘಟನೆಯ ಕುರಿತು ತನಿಖೆಗೆ ಆದೇಶಿಸುತ್ತೇವೆ. ವಿದ್ಯುತ್ ವೈಫಲ್ಯಕ್ಕೆ ಕಾರಣರಾದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಉಪಕುಲಪತಿ ಸಂತೋಷ್ ಕುಮಾರ್ ತ್ರಿಪಾಠಿ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ನಡು ರಸ್ತೆಯಲ್ಲಿ ಯುವಕನಿಗೆ ಅಮಾನುಷವಾಗಿ ಥಳಿಸಿದ ದುಷ್ಕರ್ಮಿಗಳು: ವೈರಲ್​ ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.