ETV Bharat / bharat

15 ವರ್ಷಗಳ ಬಳಿಕ ಟ್ರೈನ್​ ಹತ್ತಿದ ರಾಷ್ಟ್ರಪತಿ... ಕಲಾಂ ಬಳಿಕ ಕೋವಿಂದ್​ ರೈಲು ಪ್ರಯಾಣ! - ರಾಷ್ಟ್ರಪತಿ ರೈಲು ಪ್ರಯಾಣ ಸುದ್ದಿ

ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ನಾಲ್ಕು ದಿನಗಳ ಉತ್ತರ ಪ್ರದೇಶ ಪ್ರವಾಸ ಕೈಗೊಂಡಿದ್ದು, ಮಾಜಿ ರಾಷ್ಟ್ರಪತಿ ಅಬ್ದುಲ್​ ಕಲಾಂ ಬಳಿಕ ರೈಲಿನಲ್ಲಿ ಪ್ರಯಾಣಿಸುತ್ತಿರುವ ಎರಡನೇ ರಾಷ್ಟ್ರಪತಿಯಾಗಿದ್ದಾರೆ.

President kovind to visit his native, President kovind to visit his native up village, President kovind to visit his native up village in Rail, President Rail travel, President Rail travel news, ಸ್ವಗ್ರಾಮಕ್ಕೆ ಭೇಟಿ ನೀಡಲಿರುವ ರಾಷ್ಟ್ರಪತಿ ಕೋವಿಂದ್​, ರೈಲಿನ ಮೂಲಕ ಸ್ವಗ್ರಾಮಕ್ಕೆ ಭೇಟಿ ನೀಡಲಿರುವ ರಾಷ್ಟ್ರಪತಿ ಕೋವಿಂದ್, ಉತ್ತರಪ್ರದೇಶದ ಸ್ವಗ್ರಾಮಕ್ಕೆ ಭೇಟಿ ನೀಡಲಿರುವ ರಾಷ್ಟ್ರಪತಿ ಕೋವಿಂದ್, ರಾಷ್ಟ್ರಪತಿ ರೈಲು ಪ್ರಯಾಣ, ರಾಷ್ಟ್ರಪತಿ ರೈಲು ಪ್ರಯಾಣ ಸುದ್ದಿ,
15 ವರ್ಷಗಳ ಬಳಿಕ ಟ್ರೈನ್​ ಹತ್ತಿದ ರಾಷ್ಟ್ರಪ
author img

By

Published : Jun 25, 2021, 1:05 PM IST

ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ನಾಲ್ಕು ದಿನಗಳ ಉತ್ತರ ಪ್ರದೇಶ ಪ್ರವಾಸ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ಜೂ.27ರಂದು ತಮ್ಮ ಸ್ವಗ್ರಾಮಕ್ಕೆ ರೈಲಿನ ಮೂಲಕ ಭೇಟಿ ನೀಡಲಿದ್ದು, ಮಾಜಿ ರಾಷ್ಟ್ರಪತಿ ಅಬ್ದುಲ್​ ಕಲಾಂ ಬಳಿಕ ರೈಲಿನಲ್ಲಿ ಪ್ರಯಾಣಿಸುತ್ತಿರುವ ಮೊದಲ ರಾಷ್ಟ್ರಪತಿ ರಾಮನಾಥ​ ಕೋವಿಂದ್​ ಆಗಿದ್ದಾರೆ.

ರಾಷ್ಟ್ರಪತಿಯಾದ ಬಳಿಕ ಸ್ವಗ್ರಾಮ ಕಾನ್ಪುರದ ಪರೌಖ್​ಗೆ ರಾಮನಾಥ​ ಕೋವಿಂದ್​ ಅವರು ಭೇಟಿ ನೀಡುತ್ತಿರುವುದು ಇದೇ ಮೊದಲು. ಇಂದು ವಿಶೇಷ ರೈಲಿನಲ್ಲಿ ದೆಹಲಿಯ ಸಫ್ದರ್ಜಂಗ್ ರೈಲ್ವೆ ನಿಲ್ದಾಣದಿಂದ ಕಾನ್ಪುರಕ್ಕೆ ಕೋವಿಂದ್‌ ಪ್ರಯಾಣ ಬೆಳೆಸುತ್ತಾರೆ. ಜೂನ್ 26ರಂದು ಚುನಾಯಿತ ಸದಸ್ಯರು, ಉದ್ಯಮಿಗಳು, ವೈದ್ಯರು, ಸಾಮಾಜಿಕ ಕಾರ್ಯಕರ್ತರು ಮತ್ತು ತಮ್ಮ ಹಳೆಯ ಸ್ನೇಹಿತರನ್ನು ಅವರು ಭೇಟಿ ಮಾಡಲಿದ್ದಾರೆ.

ಇನ್ನೂ ವಿಶೇಷವೆಂದರೆ, ಕಳೆದ 15 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದೇಶದ ರಾಷ್ಟ್ರಪತಿಯೊಬ್ಬರು ರೈಲು ಪ್ರಯಾಣ ಮಾಡುತ್ತಿದ್ದಾರೆ. ಡೆಹ್ರಾಡೂನ್‌ನ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ (ಐಎಂಎ) ಕೆಡೆಟ್‌ಗಳ ಪಾಸಿಂಗ್ ಔಟ್ ಪೆರೇಡ್‌ನಲ್ಲಿ ಪಾಲ್ಗೊಳ್ಳಲು ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರು 2006 ರಲ್ಲಿ ದೆಹಲಿಯಿಂದ ವಿಶೇಷ ರೈಲಿನಲ್ಲಿ ಪ್ರಯಾಣಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.