ನವದೆಹಲಿ: ಕೊರೊನಾ ಹಿನ್ನೆಲೆ ಆರೋಗ್ಯದ ವಿವಿಧ ಅಂಶಗಳ ಬಗ್ಗೆ ದೇಶಗಳ ನಡುವೆ ಹೆಚ್ಚಿನ ಸಹಯೋಗದ ಅಗತ್ಯವನ್ನು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಒತ್ತಿ ಹೇಳಿದ್ದಾರೆ.
ಕೊರೊನಾ ಸಾಂಕ್ರಾಮಿಕ ಹಿನ್ನೆಲೆ ಡಬ್ಯುಹೆಚ್ಒನ ಪೂರ್ವ ಮೆಡಿಟರೇನಿಯನ್ ಪ್ರದೇಶದಲ್ಲಿ ಆರೋಗ್ಯ ಭದ್ರತೆ ಮತ್ತು ಶಾಂತಿಗಾಗಿ ಒಂದು ಕರೆ ಎಂಬ ಸಮಾವೇಶದಲ್ಲಿ ಅವರು ತಮ್ಮ ವಾಸ್ತವ ಭಾಷಣದಲ್ಲಿ ಈ ರೀತಿ ಮಾತನಾಡಿದ್ದಾರೆ ಎಂದು ಎಂದು ಆರೋಗ್ಯ ಸಚಿವಾಲಯದ ತಿಳಿಸಿದೆ.
ಕೊರೊನಾವನ್ನು ಅಂತಾರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದಾಗಿನಿಂದ ಇದರ ಒಂದು ವರ್ಷದ ಬೆಳವಣಿಗೆಗಳನ್ನು ತೆರೆದಿಟ್ಟರು. ಹಾಗೆ ಆರೋಗ್ಯದ ವಿವಿಧ ಅಂಶಗಳ ಬಗ್ಗೆ ದೇಶಗಳ ನಡುವೆ ಹೆಚ್ಚಿನ ಸಹಯೋಗದ ಅಗತ್ಯದ ಬಗ್ಗೆ ತಿಳಿಸಿದರು. ಜಾಗತಿಕ ಬಿಕ್ಕಟ್ಟಿನ ಇಂತಹ ಸಮಯದಲ್ಲಿ, ಅಪಾಯ ನಿರ್ವಹಣೆ ಹಾಗೂ ಸೋಂಕು ತಗ್ಗಿಸುವುದಕ್ಕೆ ಜಾಗತಿಕ ಸಾರ್ವಜನಿಕ ಆರೋಗ್ಯದಲ್ಲಿ ಆಸಕ್ತಿ ಮತ್ತು ಹೂಡಿಕೆ ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಜಾಗತಿಕ ಸಹಭಾಗಿತ್ವ ಇನ್ನಷ್ಟು ಆಳಗೊಳಿಸುವ ಅಗತ್ಯವಿದೆ ಎಂದು ನಾವು ಒಪ್ಪಿಕೊಳ್ಳಬೇಕಿದೆ.
ನಾವು ಪರಸ್ಪರರ ಸಾಮರ್ಥ್ಯ ಒಟ್ಟುಗೂಡಿಸುವ ಮೂಲಕ ಎದುರಾಳಿಯಾದ ಕೊರೊನಾ ಜಯಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೊರೊನಾ ನಮಗೆ ಕಲಿಸಿದ ಒಂದು ಪ್ರಮುಖ ಪಾಠ ಎಂದರೆ, ಸನ್ನದ್ಧತೆ ಕೊರತೆ ಹಾಗೂ ಅಪಾರ ಪ್ರಮಾಣದಲ್ಲಿ ಖರ್ಚಾಗುವ ಸಾಮಾಜಿಕ ಭದ್ರತಾ ವೆಚ್ಚವೇ ಆಗಿದೆ. ನಮಗೆ ತಿಳಿದಿರುವಂತೆ ಈ ಕೊರೊನಾ ಎಲ್ಲರ ಜೀವನವನ್ನೂ ಹೈರಾಣು ಮಾಡಿತು. ಆದರೆ, ನಮ್ಮೆಲ್ಲರಿಗೂ ಹೆಚ್ಚು ಚೇತರಿಸಿಕೊಳ್ಳಲು ಹಾಗೂ ಭವಿಷ್ಯಕ್ಕಾಗಿ ಉತ್ತಮವಾಗಿ ಸನ್ನದ್ಧವಾಗಿರುವಂತೆ ಎಚ್ಚರಿಕೆ ಪಾಠದ ಜತೆಗೆ ಸರಿಯಾದ ಪಾಠವನ್ನು ಕಲಿಸಿ, ಮಾನಸಿಕ ಧೈರ್ಯವನ್ನು ತುಂಬಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಆದರೆ, ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕಿರುವುದು ಏನೆಂದರೆ, ಸವಾಲುಗಳನ್ನು ಹಂಚಿಕೆಯ ಪ್ರಯತ್ನಗಳ ಮೂಲಕ ಮಾತ್ರ ನಿವಾರಿಸಲು ಸಾಧ್ಯ. ಯಾವುದೇ ದೇಶವು ಒಂದೇ ಬಾರಿಗೆ ಇದನ್ನು ಹೆದರಿಸಲು ಅಥವಾ ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎಂದಿದ್ದಾರೆ. ಭಾರತದ ಫೆಡರಲ್ ರಚನೆ ಮತ್ತು ನಂತರದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯು ಇಲ್ಲಿನ ವ್ಯಾಪಕವಾದ ವೈವಿಧ್ಯತೆಯಿಂದಾಗಿ ವಿವಿಧ ಸವಾಲುಗಳನ್ನು ಒಡ್ಡಿದೆ. ಇದನ್ನು ಪರಿಗಣಿಸಿ ಭಾರತದ ಸಾಂಕ್ರಾಮಿಕ ನಿರ್ವಹಣೆ ಕೇಂದ್ರೀಕೃತ ಮೇಲ್ವಿಚಾರಣೆ ಕೂಡ ವಿಕೇಂದ್ರೀಕೃತ ಅನುಷ್ಠಾನ ವಿಧಾನವನ್ನು ಆಧರಿಸಿದೆ ಎಂದು ಎತ್ತಿ ಹೇಳಿದರು.
ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ಎದುರಿಸಲು ಕೇಂದ್ರ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಡಿಜಿಟಲ್ ಶಕ್ತಗೊಂಡ ಕೊರೊನಾ ವಾರ್ರೂಂ ಕೊಠಡಿಗಳನ್ನು ಸ್ಥಾಪಿಸಿತು ಎಂದು ಮಾಹಿತಿ ನೀಡಿದರು.
ಬ್ಲ್ಯಾಕ್ ಫಂಗಸ್ ಸಾಂಕ್ರಾಮಿಕ ರೋಗ ಎಂದು ಆದೇಶ ಹೊರಡಿಸಿ: ಕೇಂದ್ರ ಆರೋಗ್ಯ ಇಲಾಖೆ
ಬ್ಲ್ಯಾಕ್ ಫಂಗಸ್ ಒಂದು ಸಾಂಕ್ರಮಿಕ ರೋಗ ಎಂದು ಕೇಂದ್ರ ಆರೋಗ್ಯ ಇಲಾಖೆ ಘೋಷಣೆ ಹೊರಡಿಸುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದೆ. 1897ರ ಕಾಯ್ದೆ ಅನ್ವಯ ಇದೊಂದು ಎಪಿಡಿಮಿಕ್ ಡಿಸೀಸಸ್ ಎಂದು ಹೇಳಿದ್ದು, ಎಲ್ಲ ಸರ್ಕಾರಿ ಆಸ್ಪತ್ರೆಗಳು ಆರೋಗ್ಯ ಇಲಾಖೆಯ ನಿಯಮಗಳಂತೆ ಹಾಗೂ ಸುತ್ತೋಲೆ ಅನ್ವಯ ಈ ರೋಗಕ್ಕೆ ಚಿಕಿತ್ಸೆ ನೀಡಬೇಕು ಎಂದು ಸೂಚಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಮ್ಯೂಕೋಮೈಕೋಸಿಸ್ ಎಂಬ ಶಿಲೀಂಧ್ರ ಸೋಂಕಿನ ರೂಪದಲ್ಲಿ ಹೊಸ ಸವಾಲಾಗಿ ಹೊರಹೊಮ್ಮಿದೆ. ಮತ್ತೊಂದು ಕಡೆ ಕೋವಿಡ್ -19 ರೋಗಿಗಳಲ್ಲೇ ಈ ಕಪ್ಪು ಶಿಲೀಂದ್ರ ಕಾಣಿಸಿಕೊಳ್ಳುತ್ತಿದೆ. ಈ ರೋಗದ ಬಗ್ಗೆ ಹಲವು ರಾಜ್ಯಗಳಿಂದ ನಿತ್ಯವೂ ವರದಿ ಆಗುತ್ತಿದೆ. ವಿಶೇಷವಾಗಿ ಸ್ಟೀರಾಯ್ಡ್ ಚಿಕಿತ್ಸೆ ಮತ್ತು ಸಕ್ಕರೆ ಕಾಯಿಲೆ ಇರುವವರಲ್ಲಿ ಈ ರೋಗ ಕಾಣಿಸಿಕೊಳ್ಳುತ್ತಿದೆ. ಈ ಶಿಲೀಂಧ್ರ ಸೋಂಕು ಕೋವಿಡ್ 19 ರೋಗಿಗಳಲ್ಲಿ ದೀರ್ಘಕಾಲದ ಕಾಯಿಲೆ ಮತ್ತು ಮರಣಕ್ಕೆ ಕಾರಣವಾಗಿದೆ ”ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ಪತ್ರದಲ್ಲಿ ತಿಳಿಸಿದ್ದಾರೆ.