ETV Bharat / bharat

ಗರ್ಭಿಣಿಯನ್ನು ಒತ್ತೆಯಾಳಾಗಿಸಿ ಮಕ್ಕಳ ಮುಂದೆಯೇ ಅತ್ಯಾಚಾರ ಎಸಗಿದ ದುರುಳರು - ಬಂದರ್​ಗಢ್​ ಗರ್ಭಿಣಿಯನ್ನು ಒತ್ತೆಯಾಳಾಗಿಸಿ ಮಕ್ಕಳ ಮುಂದೇ ಅತ್ಯಾಚಾರ ಎಸಗಿದ ಪಾಪಿಗಳು

ದುಷ್ಕರ್ಮಿಗಳು ಗರ್ಭಿಣಿಯನ್ನು ಒತ್ತೆಯಾಳಾಗಿಸಿ ಮಕ್ಕಳ ಮುಂದೆಯೇ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ಛತ್ತರ್​ಪುರ ಜಿಲ್ಲೆಯಲ್ಲಿ ನಡೆದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ರಜೆ ಕೇಳಿದ್ದೇ ಮಾಲೀಕನ ಈ ದುರ್ವರ್ತನೆಗೆ ಕಾರಣವಾಯ್ತಂತೆ.

Pregnant woman held hostage and raped in front of her children  Chhatarpur district  Dabangg Patel  Lakhan Ahirwar  pregnant woman rape in madhya pradesh  ಗರ್ಭಿಣಿಯನ್ನು ಒತ್ತೆಯಾಳಾಗಿಸಿ ಮಕ್ಕಳ ಮುಂದೇ ಅತ್ಯಾಚಾರ ಎಸಗಿದ ಪಾಪಿಗಳು  ಬಂದರ್​ಗಢ್​ ಗರ್ಭಿಣಿಯನ್ನು ಒತ್ತೆಯಾಳಾಗಿಸಿ ಮಕ್ಕಳ ಮುಂದೇ ಅತ್ಯಾಚಾರ ಎಸಗಿದ ಪಾಪಿಗಳು  ಬಂದರ್​ಗಢ್​ ಅತ್ಯಾಚಾರ ಸುದ್ದಿ
ಗರ್ಭಿಣಿಯನ್ನು ಒತ್ತೆಯಾಳಾಗಿಸಿ ಮಕ್ಕಳ ಮುಂದೇ ಅತ್ಯಾಚಾರ ಎಸಗಿದ ಪಾಪಿಗಳು
author img

By

Published : May 27, 2021, 11:51 AM IST

ಛತ್ತರ್‌ಪುರ (ಮಧ್ಯಪ್ರದೇಶ): ಗರ್ಭಿಣಿಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದೇ ಆಕೆಯ ಗಂಡ ಮತ್ತು ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿರುವ ಕ್ರೂರ ಘಟನೆ ಬಂದರ್‌ಗಢ್ ಗ್ರಾಮದಲ್ಲಿ ನಡೆದಿದೆ.

ಘಟನೆಯ ವಿವರ

ಇಲ್ಲಿನ ಬೈಜ್ನಾಥ್​ ಎಂಬ ವ್ಯಕ್ತಿ ದಬಾಂಗ್ ಪಟೇಲ್ ಎಂಬವರ ಹೊಲದಲ್ಲಿ ಕೆಲಸ ಮಾಡುತ್ತಿದ್ದ. ಅನಾರೋಗ್ಯದಿಂದ ಬಳಲುತ್ತಿದ್ದ ಈತ ತನ್ನ ಮಾಲೀಕನಿಗೆ ರಜೆ ಕೋರಿದ್ದಾನೆ. ಇದರಿಂದ ಕೋಪಗೊಂಡ ಪಟೇಲ್ ರೈತ ಬೈಜ್ನಾಥ್​ ಮತ್ತು ಆತನ ಸಹೋದರ ಲಖನ್ ಅಹಿರ್ವಾರ್ ಮೇಲೆ ಹಲ್ಲೆ ಮಾಡಿದ್ದಾನೆ. ತಮ್ಮ ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಈ ಸಹೋದರರಿಬ್ಬರು ಗ್ರಾಮ ಬಿಟ್ಟು ಹೋದರು. ಇದು ಇಷ್ಟಕ್ಕೆ ಮುಗಿಯಲಿಲ್ಲ. ಪಟೇಲ್ ಅಹಿರ್ವಾರ್, ರೈತನ ಮನೆಗೆ ದುಷ್ಕರ್ಮಿಗಳನ್ನು ಕಳುಹಿಸಿದ್ದಾನೆ. ಈ ಪಾಪಿಗಳ ಪಡೆಯ ಸದಸ್ಯರು ಐದು ತಿಂಗಳ ಗರ್ಭಿಣಿಯನ್ನು ಆಕೆಯ ಮಕ್ಕಳು ಮತ್ತು ವಯಸ್ಸಾದ ಅತ್ತೆಯ ಎದುರೇ ಅತ್ಯಾಚಾರ ಮಾಡಿದ್ದಾರೆ. ಬಳಿಕ ಅವರೆಲ್ಲರನ್ನು ಒತ್ತೆಯಾಳಾಗಿಯೂ ಇಟ್ಟುಕೊಂಡಿದ್ದಾರೆ. ಹಲ್ಲೆ ಮತ್ತು ಅತ್ಯಾಚಾರದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಂತೆ ದುಷ್ಕರ್ಮಿಗಳು ಮಹಿಳೆಗೆ ಪ್ರಾಣ ಬೆದರಿಕೆಯೊಡ್ಡಿದ್ದಾರೆ. ಅಷ್ಟೇ ಅಲ್ಲದೇ ಮಹಿಳೆ ಮತ್ತು ಆಕೆಯ ಕುಟುಂಬಕ್ಕೆ ನಾಲ್ಕು ದಿನಗಳಿಂದ ಆಹಾರ ನೀಡದೇ ಚಿತ್ರಹಿಂಸೆಯನ್ನೂ ಕೊಟ್ಟಿದ್ದಾರಂತೆ.

ಈ ಬಗ್ಗೆ ಸಂತ್ರಸ್ತೆ ಧೈರ್ಯದಿಂದ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲೋಕೇಂದ್ರ ವರ್ಮಾ, ಸಂಸದ ವಿ.ಡಿ.ಶರ್ಮಾ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಛತ್ತರ್​ಪುರ ಜಿಲ್ಲೆ ಮತ್ತು ಪೊಲೀಸ್ ಆಡಳಿತದ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ. ಪ್ರಕರಣದ ಆರೋಪಿಗಳನ್ನು 24 ಗಂಟೆಗಳಲ್ಲಿ ಬಂಧಿಸುವಂತೆಯೂ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.