ETV Bharat / bharat

ಡೋಲಿಯಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮಗುವಿಗೆ ಜನ್ಮ ನೀಡಿದ ಮಹಿಳೆ; ಮುಖ್ಯಮಂತ್ರಿ ದತ್ತು ಪಡೆದ ಗ್ರಾಮದಲ್ಲಿ ಘಟನೆ!

author img

By ETV Bharat Karnataka Team

Published : Oct 2, 2023, 7:56 PM IST

Updated : Oct 2, 2023, 9:26 PM IST

ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನು ಡೋಲಿಯಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಮಗುವಿಗೆ ಜನ್ಮ ನೀಡಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

pregnant-tribal-woman-carried-in-dholi-gives-birth-in-transit-in-thane
ಡೋಲಿಯಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮಗುವಿಗೆ ಜನ್ಮ ನೀಡಿದ ಮಹಿಳೆ; ಮುಖ್ಯಮಂತ್ರಿ ದತ್ತು ಪಡೆದ ಗ್ರಾಮದಲ್ಲಿ ಘಟನೆ!

ಥಾಣೆ (ಮಹಾರಾಷ್ಟ್ರ) : ಬುಡಕಟ್ಟು ಮಹಿಳೆಯೊಬ್ಬರನ್ನು ಡೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಹೆರಿಗೆ ಆಗಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ. ಶಾಹಾಪುರ್ ತಾಲೂಕಿನ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಡೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ಕರೆತರಲಾಗುತ್ತಿತ್ತು. ಆದರೆ, ಮಹಿಳೆ ಮಾರ್ಗಮಧ್ಯೆ ಮಗುವಿಗೆ ಜನ್ಮ ನೀಡಿದ್ದಾರೆ.

ಗ್ರಾಮಕ್ಕೆ ರಸ್ತೆ ಸೌಲಭ್ಯವಿಲ್ಲ: ಕಳೆದ ಬಾನುವಾರ ಪಾಟಿಕಚಾ ಪಾಡ ಗ್ರಾಮದ ಪ್ರಣಾಲಿ ಗುರುನಾಥ್​ ವಾಜೆ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಗ್ರಾಮದಲ್ಲಿ ಸರಿಯಾದ ರಸ್ತೆ ಸೌಲಭ್ಯ ಇಲ್ಲದ ಕಾರಣ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಡೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ಕರೆತರುತ್ತಿದ್ದರು. ಸುಮಾರು 4 ಕಿ.ಮೀ ಗುಡ್ಡಗಾಡು ಪ್ರದೇಶಗಳನ್ನು ದಾಟಿ ಆಸ್ಪತ್ರೆಗೆ ಹೋಗುವಾಗ ಹೆರಿಗೆ ನೋವು ಹೆಚ್ಚಾಗಿದೆ. ಸಂಬಂಧಿಕರು ಆಶಾ ಕಾರ್ಯಕರ್ತೆಯರ ಸಹಾಯದಿಂದ ಹೆರಿಗೆ ಮಾಡಿಸಿದ್ದಾರೆ. ಮಹಿಳೆಯನ್ನು ಕಾಸರ ಪ್ರೈಮರಿ ಹೆಲ್ತ್​ ಸೆಂಟರ್​ಗೆ ದಾಖಲಿಸಲಾಗಿದೆ. ಕುಗ್ರಾಮದಿಂದ ಇಲ್ಲಿಗೆ ಕರೆತರುವಾಗ ಸಾಕಷ್ಟು ಕಷ್ಟಪಟ್ಟಿದ್ದಾಗಿ ಗ್ರಾಮಸ್ಥರು ತಿಳಿಸಿದರು. ಸದ್ಯ ಮಹಿಳೆ ಮತ್ತು ಮಗು ಸುರಕ್ಷಿತರಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಸಿಎಂ ಏಕನಾಥ್​ ಶಿಂಧೆ ದತ್ತು ಪಡೆದ ಗ್ರಾಮ!: ಕುಗ್ರಾಮದಿಂದ ಸುಮಾರು ನಾಲ್ಕು ಕಿ.ಮೀ ಕ್ರಮಿಸಿ ಆಸ್ಪತ್ರೆಗೆ ಬರಬೇಕಾದ ದುಸ್ಥಿತಿ ಇಲ್ಲಿನ ಜನರದ್ದು. ಈ ಗ್ರಾಮವನ್ನು ಮುಖ್ಯಮಂತ್ರಿ ಏಕನಾಥ್​ ಶಿಂಧೆ ದತ್ತು ಪಡೆದುಕೊಂಡಿದ್ದರೂ ಗ್ರಾಮದಲ್ಲಿ ಮೂಲ ಸೌಕರ್ಯಗಳು ಮಾತ್ರ ಇಂದಿಗೂ ಮರೀಚಿಕೆ. ವಿದ್ಯುತ್​, ರಸ್ತೆ ಸಂಪರ್ಕ, ನೀರು ಮತ್ತು ಆರೋಗ್ಯ ಮುಂತಾದ ಮೂಲಸೌಕರ್ಯಗಳ ಕೊರತೆಯಿದ್ದು, ಗ್ರಾಮಸ್ಥರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇಂದಿಗೂ ಕೂಡ ಗ್ರಾಮದಲ್ಲಿ ವಾಸವಿರುವ ಬುಡಕಟ್ಟು ಸಮುದಾಯದ ಜನರು ನಡೆದುಕೊಂಡೇ ಆಸ್ಪತ್ರೆಗೆ ಆಗಮಿಸಬೇಕು. ಸಕಾಲಕ್ಕೆ ಆರೋಗ್ಯ ಸೌಲಭ್ಯಗಳು ಲಭ್ಯವಾಗದೇ ಜೀವಹಾನಿ ಸಂಭವಿಸಿದ ನಿದರ್ಶನಗಳಿವೆ. ಮೂಲಸೌಕರ್ಯಗಳ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ ಅನುದಾನ ಲಭಿಸಿದ್ದರೂ, ಈ ಗ್ರಾಮ ಅಭಿವೃದ್ಧಿ ಕಂಡಿಲ್ಲ ಎಂದು ಗ್ರಾಮಸ್ಥರು ವಿವರಿಸಿದರು.

ಆ್ಯಂಬುಲೆನ್ಸ್​ ಸಿಗದೆ ರಿಕ್ಷಾದಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ : ಆ್ಯಂಬುಲೆನ್ಸ್​ ಸಿಗದೆ ಕುಟುಂಬಸ್ಥರು ಮಹಿಳೆಯನ್ನು ಆಟೋದಲ್ಲಿ ಕರೆದೊಯ್ಯುವಾಗ ಹೆರಿಗೆಯಾಗಿ ಮಗು ಸಾವನ್ನಪ್ಪಿದ್ದ ಘಟನೆ ಉತ್ತರಪ್ರದೇಶ ಲಖನೌನಲ್ಲಿ ಕಳೆದ ಆಗಸ್ಟ್​ ತಿಂಗಳಲ್ಲಿ ನಡೆದಿತ್ತು. ಇಲ್ಲಿನ ಮಾಲ್ ಅವೆನ್ಯೂ ಪ್ರದೇಶದ ನಿವಾಸಿಯಾಗಿದ್ದ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನಲೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆ್ಯಂಬುಲೆನ್ಸ್​ಗೆ ಕರೆ ಮಾಡಿದ್ದರು. ಆದರೆ ಎಷ್ಟೇ ಕರೆ ಮಾಡಿದರೂ ಆಂಬ್ಯುಲೆನ್ಸ್​ ಬಾರದ ಕಾರಣ ಆಟೋ ರಿಕ್ಷಾದಲ್ಲಿ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಇಲ್ಲಿನ ರಾಜಭವನದ ಗೇಟ್ ಸಂಖ್ಯೆ 15ರ ಮುಂದೆ ಸಾಗುತ್ತಿದ್ದಾಗ ಮಹಿಳೆಗೆ ಹೆರಿಗೆ ನೋವು ಹೆಚ್ಚಾಗಿ, ಆಟೋದಲ್ಲಿ ಹೆರಿಗೆಯಾಗಿತ್ತು. ಈ ವೇಳೆ ಮಗು ಸಾವನ್ನಪ್ಪಿತ್ತು.

ಇದನ್ನೂ ಓದಿ: ಮಣಿಪುರ ಹಿಂಸಾಚಾರ ಜನಾಂಗೀಯವಲ್ಲ, ಇದು ಭಾರತೀಯ ಒಕ್ಕೂಟದ ವಿರುದ್ಧದ ಯುದ್ಧ: ಸಿಎಂ ಬಿರೇನ್ ಸಿಂಗ್

Last Updated : Oct 2, 2023, 9:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.