ಪುಣೆ (ಮಹಾರಾಷ್ಟ್ರ): ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿಯ ಚಕ್ರಕ್ಕೆ ಸಿಲುಕಿ ಗರ್ಭಿಣಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಜುನ್ನಾರ್ ತಾಲೂಕಿನಲ್ಲಿ ನಡೆದಿದೆ. ಈ ಘಟನೆಯಿಂದ ಮಹಿಳೆಯ ಹೊಟ್ಟೆಯಲ್ಲಿ ಶಿಶು ಕೂಡ ಹುಟ್ಟುವ ಮೊದಲೇ ಪ್ರಾಣ ಕಳೆದುಕೊಂಡಿದೆ.
ಜುನ್ನಾರ್ ತಾಲೂಕಿನ ನಿಮ್ದಾರಿ ನಿವಾಸಿ ವಿದ್ಯಾ ಕಂಸ್ಕರ್ (22) ಎಂಬುವವರೇ ಮೃತರು. ತುಂಬು ಗರ್ಭಿಣಿಯಾಗಿದ್ದ ವಿದ್ಯಾ ಕಾರಿನಲ್ಲಿ ಪತಿ ರಮೇಶ್ ಮತ್ತು ತಾಯಿಯೊಂದಿಗೆ ತಪಾಸಣೆಗಾಗಿ ನಾರಾಯಣಗಾಂವ್ಗೆ ತೆರಳಿದ್ದರು. ಆಸ್ಪತ್ರೆಯಿಂದ ಹಿಂತಿರುಗುತ್ತಿದ್ದಾಗ ವಾರುಲ್ವಾಡಿಯಲ್ಲಿ ಟ್ರಾಫಿಕ್ ಜಾಮ್ ಆಗಿದ್ದರಿಂದ ವಿದ್ಯಾ ಕಾರಿನಿಂದ ಕೆಳಗಿಳಿದಿದ್ದರು. ಒಂದೇ ಇಂಜಿನ್ಗೆ ಎರಡು ಟ್ರಾಲಿಗಳು ಜೋಡಿಸಿದ್ದ ಟ್ರ್ಯಾಕ್ಟರ್ ವಿದ್ಯಾಗೆ ಡಿಕ್ಕಿ ಹೊಡೆದಿದೆ.
ಇದರಿಂದ ರಸ್ತೆಗೆ ಬಿದ್ದ ವಿದ್ಯಾರ ತಲೆ ಮೇಲೆ ಟ್ರಾಲಿಯ ಚಕ್ರ ಹರಿದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆ ನಂತರ ಸ್ಥಳೀಯರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತ, ಪತಿ ರಮೇಶ್ ಕಂಸ್ಕರ್ ನೀಡಿದ ದೂರಿನ ಮೇರೆಗೆ ಟ್ರ್ಯಾಕ್ಟರ್ ಚಾಲಕ ಗೋರಕ್ಷ್ ಸುಖದೇವ್ ಧೆಬರೆ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ನೆಲಮಂಗಲ: ಮಚ್ಚಿನಿಂದ ಹೊಡೆದು ವ್ಯಕ್ತಿಯ ಬರ್ಬರ ಕೊಲೆ