ಜುಂಜುನು (ರಾಜಸ್ಥಾನ): ಕೊರೊನಾದಿಂದಾಗಿ ರಜೆರಹಿತ ಕರ್ತವ್ಯದಲ್ಲಿದ್ದ ಮಹಿಳಾ ಕಾನ್ಸ್ಟೇಬಲ್ಗೆ ವಿವಾಹ ಪೂರ್ವ ಮೆರವಣಿಗೆಯನ್ನು ಪೊಲೀಸ್ ಠಾಣೆಯಲ್ಲೇ ನಡೆಸಲಾಗಿದೆ.
ರಾಜಸ್ಥಾನದ ಜುಂಜುನು ಜಿಲ್ಲೆಯ ಬುಹಾನಾ ಪೊಲೀಸ್ ಠಾಣೆಯಲ್ಲಿ ಸೋನಿಯಾ ಎಂಬ ಕಾನ್ಸ್ಟೇಬಲ್ರ 'ಬಿಂದೋರಿ' (ಕುದುರೆ ಮೇಲೆ ಕೂರಿಸಿ ಮಾಡುವ ವಿವಾಹ ಪೂರ್ವ ಮೆರವಣಿಗೆ)ಯನ್ನು ಸಿಬ್ಬಂದಿ ನಡೆಸಿದ್ದಾರೆ. ನನ್ನ ಕುಟುಂಬಸ್ಥರ ಸ್ಥಾನದಲ್ಲಿ ನಿಂತು ನನ್ನ ಸಹೋದ್ಯೋಗಿಗಳು ಬಿಂದೋರಿ ನಡೆಸಿಕೊಟ್ಟಿದ್ದು, ನನಗೆ ತುಂಬಾ ಸಂತೋಷ ತಂದಿದೆ ಎಂದು ಸೋನಿಯಾ ಹೇಳಿದ್ದಾರೆ.
ಇದನ್ನೂ ಓದಿ: ರಜೆ ಕಿತ್ತುಕೊಂಡ ಕೊರೊನಾ.. ಪೊಲೀಸ್ ಠಾಣೆಯಲ್ಲೇ ಕಾನ್ಸ್ಟೇಬಲ್ಗೆ ಹಳದಿ ಶಾಸ್ತ್ರ - ವಿಡಿಯೋ
ಇತ್ತೀಚೆಗಷ್ಟೇ ರಾಜಸ್ಥಾನದ ದುಂಗಾರ್ಪುರ ಪೊಲೀಸ್ ಠಾಣಾ ಆವರಣದಲ್ಲಿ ಮಹಿಳಾ ಕಾನ್ಸ್ಟೇಬಲ್ವೋರ್ವರ ಹಳದಿ ಶಾಸ್ತ್ರವನ್ನು ಠಾಣಾ ಸಿಬ್ಬಂದಿ ಸಂಭ್ರಮದಿಂದ ನಡೆಸಿಕೊಟ್ಟಿದ್ದರು.