ETV Bharat / bharat

ಬಿಜೆಪಿಯಿಂದ ಹಾಳಾಗಿರುವ ರಾಹುಲ್ ಗಾಂಧಿ ವರ್ಚಸ್ಸು ಮರುಸೃಷ್ಟಿಯಾಗಬಹುದು: ಪ್ರಶಾಂತ್​ ಕಿಶೋರ್​ - ರಾಹುಲ್ ಗಾಂಧಿ ರಾಹುಲ್ ಗಾಂಧಿ ಬಗ್ಗೆ ಪ್ರಶಾಂತ್​ ಕಿಶೋರ್​ ಹೇಳಿಕೆ

ರಾಹುಲ್ ಗಾಂಧಿ ಅವರನ್ನು ಸ್ನೇಹಿತ ಎಂದು ಬಣ್ಣಿಸಿದ ಪ್ರಶಾಂತ್ ಕಿಶೋರ್, ರಾಹುಲ್ ಗಾಂಧಿ ಅವರ ಸ್ಥಾನವನ್ನು ನಿರ್ಧರಿಸಲು ನಾನು ಯಾರು? ಬಿಜೆಪಿಯ ದಾಳಿಯಿಂದ ಹಾಳಾದ ರಾಹುಲ್ ಗಾಂಧಿ ಇಮೇಜ್ ಮರುಸೃಷ್ಟಿಯಾಗಬಹುದು. 2002ರಿಂದ ಇಲ್ಲಿಯವರೆಗಿನ ಪ್ರಧಾನಿ ಮೋದಿ ಅವರ ಚಿತ್ರಣದಲ್ಲಿ ಬದಲಾವಣೆಯನ್ನು ಗಮನಿಸಿದರೆ ಖಂಡಿತ ಅದು ಸಾಧ್ಯ ಎಂದರು.

prashant kishor speaks on congress and rahul gandhi
ರಾಹುಲ್ ಗಾಂಧಿ ಬಗ್ಗೆ ಪ್ರಶಾಂತ್​ ಕಿಶೋರ್​ ಹೇಳಿಕೆ
author img

By

Published : Apr 29, 2022, 7:15 AM IST

ನವದೆಹಲಿ: ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆ ಆಗಲು ನಿರಾಕರಿಸಿದ್ದಾರೆ. ಆದರೆ, ಚುನಾವಣೆ ಗೆಲ್ಲಲು ಕೈಗೊಳ್ಳಬಹುದಾದ ಕಾರ್ಯತಂತ್ರಗಳ ಕುರಿತು ರಾಷ್ಟ್ರೀಯ ಕಾಂಗ್ರೆಸ್ ನಾಯಕರಿಗೆ ಒಂದಿಷ್ಟು ಮಾರ್ಗದರ್ಶನ ನೀಡಿದ್ದಾರೆ. ಸಮಸ್ಯೆ ಬಗೆಹರಿಸಲು ನಾಯಕತ್ವ ಮತ್ತು ಸಾಮೂಹಿಕ ಇಚ್ಛಾಶಕ್ತಿಯ ಅಗತ್ಯತೆ ಬಗ್ಗೆ ಒತ್ತಿ ಹೇಳಿದ್ದಾರೆ. ಇದೀಗ, ಪಕ್ಷದಲ್ಲಿ ದೊಡ್ಡ ನಾಯಕರಿದ್ದಾರೆ. ಪಕ್ಷ ತನ್ನಷ್ಟಕ್ಕೆ ತಾನೇ ಪುನಶ್ಚೇತನಗೊಳ್ಳಲು ಶಕ್ತವಾಗಿದೆ ಎಂದು ನುಡಿದಿದ್ದಾರೆ.

ಏನು ಹೇಳಬೇಕೋ ಅದನ್ನು ಹೇಳಿದ್ದೇನೆ: ಪಕ್ಷದಲ್ಲಿ ಯಾವುದೇ ಪಾತ್ರ ವಹಿಸಲು ಬಯಸುವುದಿಲ್ಲ. ಆದರೆ ಭವಿಷ್ಯದ ನೀಲನಕ್ಷೆಯನ್ನು ಸಿದ್ಧಪಡಿಸಿದ ನಂತರ ಅದನ್ನು ಕಾರ್ಯಗತಗೊಳಿಸಬೇಕೆಂದು ಬಯಸಿದ್ದಾರೆ. ನಾನು ಅವರಿಗೆ ಏನು ಹೇಳಬೇಕೆಂದುಕೊಂಡೆನೋ ಅದನ್ನು ಹೇಳಿದ್ದೇನೆ. 2014ರಿಂದ ಹಿಡಿದು ಈವರೆಗಿನ ವಾತಾವರಣ ಗಮನಿಸಿದರೆ, ಇದೀಗ ಮೊದಲ ಬಾರಿಗೆ ಪಕ್ಷವು ತನ್ನ ಭವಿಷ್ಯದ ಬಗ್ಗೆ ರಚನಾತ್ಮಕ ರೀತಿಯಲ್ಲಿ ಚರ್ಚಿಸಿದೆ. ಆದರೆ ಸಬಲೀಕರಕ್ಕೆ ಕ್ರಿಯಾ ಗುಂಪಿನ ಬಗ್ಗೆ ನನಗೆ ಕೆಲವು ಅನುಮಾನವಿತ್ತು. ನಾನು ಪಕ್ಷದ ಭಾಗವಾಗಬೇಕೆಂದು ಅವರು ಬಯಸಿದ್ದರು, ಆದರೆ ನಾನು ಇಲ್ಲ ಎಂದು ಹೇಳಿದೆಯೆಂದು ಇದೇ ವೇಳೆ ಪ್ರಶಾಂತ್​ ಕಿಶೋರ್​ ಸ್ಪಷ್ಟಪಡಿಸಿದ್ದಾರೆ.

ಈ ವಾರದ ಆರಂಭದಲ್ಲಿ ಕಾಂಗ್ರೆಸ್ ಮತ್ತು ಪ್ರಶಾಂತ್ ಕಿಶೋರ್ ನಡುವಿನ ಮಾತುಕತೆ ವಿಫಲವಾದ ನಂತರ ಪ್ರಿಯಾಂಕಾ ಗಾಂಧಿ ಅವರನ್ನು ಪಕ್ಷದ ಮುಖ್ಯಸ್ಥರನ್ನಾಗಿ ಮಾಡಲು ಪ್ರಶಾಂತ್ ಕಿಶೋರ್ ಬಯಸಿದ್ದರು ಎಂದು ಹೇಳಲಾಗಿದೆ. ಆದರೆ, ಪಕ್ಷ ಒಪ್ಪಲಿಲ್ಲ ಎಂಬ ಮಾತುಗಳು ಕೇಳಿಬಂದಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಶಾಂತ್ ಕಿಶೋರ್, ಪಕ್ಷಕ್ಕೆ ನೀಡಿರುವ ನಾಯಕತ್ವ ಸೂತ್ರದಲ್ಲಿ ರಾಹುಲ್ ಗಾಂಧಿ ಹೆಸರಾಗಲಿ, ಪ್ರಿಯಾಂಕಾ ಗಾಂಧಿ ಅವರ ಹೆಸರಾಗಲಿ ಇರಲಿಲ್ಲ. ವೈಯಕ್ತಿಕವಾಗಿ ಏನನ್ನು ಪ್ರಸ್ತಾಪಿಸಲಾಗಿದೆ ಎಂಬುದನ್ನು ನಾನು ಹೇಳಲಾರೆ ಎಂದರು.

ರಾಹುಲ್​ ನನ್ನ ಸ್ನೇಹಿತ: ರಾಹುಲ್ ಗಾಂಧಿ ಅವರನ್ನು ಸ್ನೇಹಿತ ಎಂದು ಬಣ್ಣಿಸಿದ ಪ್ರಶಾಂತ್ ಕಿಶೋರ್, ರಾಹುಲ್ ಗಾಂಧಿ ಅವರ ಸ್ಥಾನವನ್ನು ನಿರ್ಧರಿಸಲು ನಾನು ಯಾರು? ಬಿಜೆಪಿಯ ದಾಳಿಯಿಂದ ಹಾಳಾದ ರಾಹುಲ್ ಗಾಂಧಿ ಇಮೇಜ್ ಮರುಸೃಷ್ಟಿಯಾಗಬಹುದು. 2002ರಿಂದ ಇಲ್ಲಿಯವರೆಗಿನ ಪ್ರಧಾನಿ ಮೋದಿಯವರ ಚಿತ್ರಣದಲ್ಲಿ ಬದಲಾವಣೆ ಗಮನಿಸಿದರೆ ಖಂಡಿತ ಅದು ಸಾಧ್ಯ ಎಂದರು. ಇನ್ನೂ ಭವಿಷ್ಯದ ಯೋಜನೆಗಳನ್ನು ರೂಪಿಸಲು ಮತ್ತು ಸಲಹೆಗಳನ್ನು ನೀಡಲು ನಾನು ಕಾಂಗ್ರೆಸ್‌ನಿಂದ ಯಾವುದೇ ಹಣವನ್ನು ತೆಗೆದುಕೊಂಡಿಲ್ಲ ಎಂದು ಪ್ರಶಾಂತ್ ಕಿಶೋರ್ ತಿಳಿಸಿದರು.

ಇದನ್ನೂ ಓದಿ: ಬಾವಿಯಲ್ಲಿ ದೊರೆತ 282 ಅಸ್ತಿಪಂಜರಗಳು 1857ರ ದಂಗೆಯ ಸೈನಿಕರದ್ದು: ಅಧ್ಯಯನ

ಇನ್ನೂ 2024ರಲ್ಲಿ ಪ್ರಧಾನಿ ಮೋದಿ ಅವರಿಗೆ ಯಾರು ಸವಾಲು ಹಾಕುತ್ತಾರೆ ಎಂಬುದು ಗೊತ್ತಿಲ್ಲ. ರಾಜ್ಯಗಳ ಚುನಾವಣೆಯ ಆಧಾರದ ಮೇಲೆ ಲೋಕಸಭೆ ಚುನಾವಣೆಯನ್ನು ಊಹಿಸಲು ಸಾಧ್ಯವಿಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.