ETV Bharat / bharat

ನಾಲ್ಕು ವರ್ಷಗಳ ಬಳಿಕ ಪಾಕ್​ನಿಂದ ತವರಿಗೆ ಬಂದ ಯುವಕ ಹೇಳಿದ್ದೇನು?

author img

By

Published : Jun 1, 2021, 6:15 PM IST

Updated : Jun 1, 2021, 7:02 PM IST

ಪಾಕ್​ನಿಂದ ತವರಿಗೆ ಹಿಂದಿರುಗಿದ ಬಳಿಕ ಮಾತನಾಡಿದ ಪ್ರಶಾಂತ್, ನಾನು ಭಾರತಕ್ಕೆ ಮರಳುವ ಯಾವುದೇ ನಿರೀಕ್ಷೆ ಇರಲಿಲ್ಲ. ಹೈದರಾಬಾದ್ ಪೊಲೀಸರು, ಕೇಂದ್ರ, ರಾಜ್ಯ ಸರ್ಕಾರಗಳ ಸಹಾಯದಿಂದ ಇಂದು ನನ್ನ ಪೋಷಕರನ್ನು ನೋಡಲು ಸಾಧ್ಯವಾಯಿತು ಎಂದಿದ್ದಾರೆ.

ಪ್ರಶಾಂತ್
ಪ್ರಶಾಂತ್

ಹೈದರಾಬಾದ್ (ತೆಲಂಗಾಣ): ತನ್ನ ಆನ್‌ಲೈನ್ ಗೆಳತಿಯನ್ನು ಭೇಟಿಯಾಗಲು 2019ರಲ್ಲಿ ಅಕ್ರಮವಾಗಿ ಗಡಿ ದಾಟಿ ಪಾಕಿಸ್ತಾನಕ್ಕೆ ತೆರಳಿದ್ದ ಪ್ರಶಾಂತ್ ಎಂಬ ಹೈದರಾಬಾದ್​​ ಮೂಲದ ಯುವಕನನ್ನು ನಾಲ್ಕು ವರ್ಷದ ಬಳಿಕ ಪಾಕಿಸ್ತಾನ ಅಧಿಕಾರಿಗಳು ಭಾರತಕ್ಕೆ ಹಸ್ತಾಂತರಿಸಿದ್ದಾರೆ.

ದೆಹಲಿಯಿಂದ ಮಾಧಾಪುರ ಪೊಲೀಸರು ಯುವಕನನ್ನು ಕರೆತಂದು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಈ ಕುರಿತು ಮಾತನಾಡಿರುವ ಸೈಬರಾಬಾದ್ ಸಿಪಿ ಸಜ್ಜನರ್, ಪ್ರಶಾಂತ್​ ಬಿಡುಗಡೆಗಾಗಿ ಸಹಕರಿಸಿದ್ದ ಕೇಂದ್ರ, ರಾಜ್ಯ ಸರ್ಕಾರ ಹಾಗೂ ವಿದೇಶಾಂಗ ಸಚಿವಾಲಯಕ್ಕೆ ಧನ್ಯವಾದ ತಿಳಿಸಿದ್ದಾರೆ.

ನಾಲ್ಕು ವರ್ಷಗಳ ಬಳಿಕ ಪಾಕ್​ನಿಂದ ತವರಿಗೆ ಬಂದ ಯುವಕ ಹೇಳಿದ್ದೇನು?

ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಪ್ರಶಾಂತ್ ತನ್ನ ಆನ್​ಲೈನ್​ ಗೆಳತಿಯನ್ನು ಹುಡುಕಿಕೊಂಡು 2019ರಲ್ಲಿ ಗಡಿ ದಾಟಿ ಪಾಕ್​​ಗೆ ತೆರಳಿದ್ದರು. ವೀಸಾ ಅಥವಾ ಪಾಸ್‌ಪೋರ್ಟ್ ಇಲ್ಲದೆ ಪಾಕಿಸ್ತಾನದ ಭೂಪ್ರದೇಶ ಪ್ರವೇಶಿಸಿದ್ದಕ್ಕಾಗಿ ಆತನನ್ನು ಬಂಧಿಸಲಾಗಿತ್ತು.

ಪ್ರಶಾಂತ್ ತಂದೆ ಬಾಬುರಾವ್ ಸೈಬರಾಬಾದ್ ಪೊಲೀಸ್ ಆಯುಕ್ತ ವಿ ಸಿ ಸಜ್ಜನರ್​ ಅವರನ್ನು ಭೇಟಿಯಾಗಿ ತಮ್ಮ ಮಗನನ್ನು ಬಿಡುಗಡೆ ಮಾಡಲು ಸಹಾಯ ಮಾಡುವಂತೆ ವಿನಂತಿಸಿದರು. ಅವರ ಮನವಿಗೆ ಪೊಲೀಸ್ ಆಯುಕ್ತರು ಸ್ಪಂದಿಸಿ, ಈ ಕುರಿತು ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದರು. ಮಗ ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದರಿಂದ ಆತನ ಕುಟುಂಬ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದೆ.

‘ಮರಳುವ ನಿರೀಕ್ಷೆ ಇರಲಿಲ್ಲ’

ನನ್ನ ಸಮಸ್ಯೆಯನ್ನು ಭಾರತ-ಪಾಕಿಸ್ತಾನದ ಸಮಸ್ಯೆಯಾಗಿ ನೋಡಬೇಡಿ. ಪಾಕಿಸ್ತಾನಿಗಳು ಅಷ್ಟು ಕೆಟ್ಟವರಲ್ಲ. ಎರಡೂ ದೇಶಗಳಲ್ಲಿ ಒಳ್ಳೆವಯರು ಮತ್ತು ಕೆಟ್ಟವರು ಇದ್ದಾರೆ. ನಾನು ಜೈಲಿನಲ್ಲಿದ್ದಾಗ ಸಾಫ್ಟ್‌ವೇರ್ ಎಂಜಿನಿಯರಿಂಗ್​ಗೆ ಸಂಬಂಧಿಸಿದ ಪುಸ್ತಕಗಳನ್ನು ಓದುತ್ತಿದ್ದೆ. ನಾಲ್ಕು ವರ್ಷಗಳಲ್ಲಿ ಹಿಂದಿ ಮಾತನಾಡಲು ಕಲಿತಿದ್ದೇನೆ. ಜೈಲಿನಲ್ಲಿ ಭಾರತೀಯರಿಗಾಗಿ ಪ್ರತ್ಯೇಕ ಕೊಠಡಿಗಳಿವೆ.

ನಾನು ಇಲ್ಲಿಂದ ಹೊರಡುವ ಮುನ್ನ ನನ್ನ ತಾಯಿ ತಡೆದರು. ಆದರೆ, ನಾನು ಪೋಷಕರ ಮಾತನ್ನು ಕೇಳಲಿಲ್ಲ. ಹೆತ್ತವರ ಮಾತುಗಳು ಕೇಳದಿದ್ದರೆ ಜೀವನದಲ್ಲಿ ತೊಂದರೆಗಳು ಕಟ್ಟಿಟ್ಟಬುತ್ತಿ ಎಂದು ಪ್ರಶಾಂತ್ ಭಾವುಕರಾದರು.

Last Updated : Jun 1, 2021, 7:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.