ETV Bharat / bharat

ಚಂದ್ರನ ಮೇಲೆ ಪ್ರಗ್ಯಾನ ಮಾಡಿದ ಸಾಧನೆಯನ್ನ ಭೂಮಿ ಮೇಲೆ ಪ್ರಗ್ನಾನಂದ ಮಾಡ್ತಿದ್ದಾರೆ: ಇಸ್ರೋ ಅಧ್ಯಕ್ಷರ ಗುಣಗಾನ - ಪ್ರಗ್ನಾನಂದ ಭೇಟಿ ಮಾಡಿದ ಇಸ್ರೋ ಅಧ್ಯಕ್ಷ

ಇಸ್ರೋ ಅಧ್ಯಕ್ಷ ಎಸ್​ ಸೋಮನಾಥ್​ ಅವರು ಇಂದು ಚೆಸ್ ಗ್ರ್ಯಾಂಡ್ ಮಾಸ್ಟರ್ ಪ್ರಗ್ನಾನಂದ ಅವರನ್ನು ಭೇಟಿ ಮಾಡಿ, ಅಭಿನಂದಿಸಿದರು.

ಪ್ರಗ್ನಾನಂದ ಭೇಟಿ ಮಾಡಿದ ಇಸ್ರೋ ಅಧ್ಯಕ್ಷ
ಪ್ರಗ್ನಾನಂದ ಭೇಟಿ ಮಾಡಿದ ಇಸ್ರೋ ಅಧ್ಯಕ್ಷ
author img

By ETV Bharat Karnataka Team

Published : Oct 16, 2023, 7:16 PM IST

ಚೆನ್ನೈ: ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರವನ್ನು ಉತ್ತೇಜಿಸಲು ಭಾರತದ ಚೆಸ್ ಗ್ರ್ಯಾಂಡ್ ಮಾಸ್ಟರ್ ಪ್ರಗ್ನಾನಂದ ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯೊಂದಿಗೆ ಕೈಜೋಡಿಸಿದ್ದಾರೆ. ಈ ಬಗ್ಗೆ ಇಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರು ಚೆನ್ನೈನಲ್ಲಿರುವ ಪ್ರಗ್ನಾನಂದ ಅವರ ಮನೆಗೆ ಭೇಟಿ ನೀಡಿದ ವೇಳೆ ಈ ವಿಷಯವನ್ನು ಬಹಿರಂಗ ಪಡಿಸಿದರು.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಇಸ್ರೋ ಅಧ್ಯಕ್ಷರು, ಪ್ರತಿಯೊಬ್ಬ ಭಾರತೀಯರಂತೆ ನಮಗೂ ಕೂಡ ಪ್ರಗ್ನಾನಂದ ಅವರು ಮಾಡಿರುವ ಸಾಧನೆ ಬಗ್ಗೆ ಹೆಮ್ಮೆಯಿದೆ. ಪ್ರಗ್ಯಾನ್​ (ರೋವರ್​) ಚಂದ್ರನಲ್ಲಿದ್ದರೆ, ಈ ಪ್ರಗ್ನಾನ್​ ಭೂಮಿ ಮೇಲಿದ್ದಾರೆ ಎಂದು ಹೆಮ್ಮೆ ಪಡುತ್ತೇವೆ. ಕಾರಣ ಚಂದ್ರನ ಮೇಲೆ ಇಸ್ರೋ ಮಾಡಿದಂತಹ ಸಾಧನೆಗಳನ್ನು ಭೂಮಿಯ ಮೇಲೆ ಪ್ರಗ್ನಾನಂದ ಮಾಡುತ್ತಿದ್ದಾರೆ ಎಂದರು.

ಚಂದ್ರಯಾನ-3ರ ಭಾಗವಾಗಿ ಕಳುಹಿಸಲಾಗಿದ್ದ ಪ್ರಗ್ಯಾನ್​ ರೋವರ್​ ಹಲವು ಸಂಶೋಧನೆಗಳನ್ನು ನಡೆಸುವಲ್ಲಿ ಯಶಸ್ವಿಯಾಗಿದೆ. ಪ್ರಗ್ನಾನಂದ ಕೂಡ ಈಗಾಗಲೇ ಹಲವಾರು ಸಾಧನೆ ಮಾಡಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಲಿದ್ದಾರೆ. ಸದ್ಯ ವಿಶ್ವ ರ‍್ಯಾಂಕಿಂಗ್‌ನಲ್ಲಿ 15ನೇ ಸ್ಥಾನದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಅವರು ವಿಶ್ವದ ನಂಬರ್ ಒನ್​ ಪಟ್ಟ ಅಲಂಕರಿಸಲಿದ್ದಾರೆ ಎಂಬ ನಂಬಿಕೆ ನನಗಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಮುಂದುವರಿದು ಮಾತನಾಡಿದ ಅವರು, ಕೇವಲ ಚೆಸ್​ ಮಾತ್ರವಲ್ಲದೇ ಬಾಹ್ಯಾಕಾಶ ಅಭಿಯಾನದಲ್ಲೂ ಪ್ರಗ್ನಾನಂದ ನಮ್ಮೊಂದಿಗೆ ಕೆಲಸ ಮಾಡಲಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಭಾರತವನ್ನು ಶಕ್ತಿಯುತ ರಾಷ್ಟ್ರವನ್ನಾಗಿ ಮಾಡಲು ಯುವಕರನ್ನು ಪ್ರೇರೇಪಿಸಲು ಅವರು ನಮ್ಮೊಂದಿಗೆ ಕೈಜೋಡಿಸಲಿದ್ದಾರೆ. ಯುವ ಪೀಳಿಗೆಯನ್ನು ಪ್ರೇರೇಪಿಸುವ ಮಹತ್ವವನ್ನು ಒತ್ತಿ ಹೇಳಿದ ಅವರು ವಿಜ್ಞಾನ, ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಯುವಕರಿಗೆ ಉತ್ತೇಜಿಸಲು ಪ್ರಗ್ನಾನಂದ ನಮ್ಮೊಂದಿಗೆ ಕೆಲಸ ಮಾಡುತ್ತಿರುವುದು ನನಗೆ ತುಂಬಾ ಸಂತೋಷವಾಗಿದೆ.

ಭಾರತೀಯ ಯುವಕರು ವಿಜ್ಞಾನ, ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರಗಳನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳಲು ಅವರನ್ನು ಉತ್ತೇಜಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದೀಗ ಪ್ರಗ್ನಾನಂದರ ಈ ಪಾಲುದಾರಿಕೆಯು ಯುವ ಮನಸ್ಸುಗಳನ್ನು ಪ್ರೇರೇಪಿಸುವಲ್ಲಿ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ಎಸ್​ ಸೋಮನಾಥ್​ ತಿಳಿಸಿದ್ದಾರೆ.

ಇದಕ್ಕೂ ಮುನ್ನ ಇಸ್ರೋ ಅಧ್ಯಕ್ಷ ಜಿಎಸ್​ಎಲ್​ವಿ ರಾಕೆಟ್ ಮಾದರಿಯ ಉಡುಗೊರೆಯೊಂದನ್ನು ಪ್ರಗ್ನಾನಂದಿರಗೆ ನೀಡಿದರು. ಮುಂಬರುವ ಎಲ್ಲ ಪಂದ್ಯಗಳಿಗೂ ಶುಭ ಹಾರೈಸಿದರು.

ಈ ವರ್ಷದ ಆಗಸ್ಟ್‌ನಲ್ಲಿ ನಡೆದ ಚೆಸ್​ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ​ ಭಾರತದ ಯುವ ಆಟಗಾರ ಪ್ರಗ್ನಾನಂದ ಅವರು ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧ ಕಠಿಣ ಪೈಪೋಟಿ ನೀಡಿ ಕೊನೆಯಲ್ಲಿ ಸೋಲನ್ನಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಮುಂದಿನ ಒಲಿಂಪಿಕ್ಸ್‌ನಲ್ಲಿ ಟಿ20 ಕ್ರಿಕೆಟ್‌! 128 ವರ್ಷಗಳ ನಂತರ ಅವಕಾಶ: ಐಒಸಿ ಒಪ್ಪಿಗೆ ನೀಡಿದ 5 ಕ್ರೀಡೆಗಳು ಯಾವುವು ಗೊತ್ತೇ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.