ಭಾರತದ ಗ್ರಾಮೀಣ ಪ್ರದೇಶಗಳ ಜನತೆಯನ್ನು ಡಿಜಿಟಲ್ ಸಾಕ್ಷರರನ್ನಾಗಿ ಮಾಡುವುದು ಪ್ರಧಾನ ಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತೆ ಅಭಿಯಾನದ (Pradhan Mantri Gramin Digital Saksharta Abhiyan -PMGDISHA) ಉದ್ದೇಶವಾಗಿದೆ. 2,351 ಕೋಟಿ ರೂಪಾಯಿ ಮೊತ್ತದ ಈ ಯೋಜನೆಯು ಗ್ರಾಮೀಣ ಭಾಗದ 6 ಕೋಟಿ (ಮನೆಗೊಬ್ಬರಂತೆ) ಕುಟುಂಬಗಳನ್ನು ತಲುಪುವ ಗುರಿಯನ್ನು ಹೊಂದಿದೆ.
ಭೌಗೋಳಿಕವಾಗಿ ಸಮಾನವಾಗಿ ಎಲ್ಲ ಕಡೆಗೂ ಯೋಜನೆಯನ್ನು ತಲುಪಿಸುವ ನಿಟ್ಟಿನಲ್ಲಿ ದೇಶದ ಎಲ್ಲ 2 ಲಕ್ಷ 50 ಸಾವಿರ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಭಾರತ ಸರ್ಕಾರದ ಸಿಎಸ್ಸಿ ಇ-ಗವರ್ನನ್ಸ್ ಸರ್ವಿಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಇದನ್ನು ಜಾರಿಗೊಳಿಸಲಾಗಿದೆ.
ಪಿಎಂಜಿ ದಿಶಾ ಯೋಜನೆಯು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಯೋಜನೆಯಾಗಿರುವುದರಿಂದ, ಈ ಯೋಜನೆಯಡಿ ರಾಜ್ಯಗಳಿಗೆ ಯಾವುದೇ ಅನುದಾನ ಹಂಚಿಕೆ ಮಾಡಲಾಗುವುದಿಲ್ಲ.
ಪಿಎಂಜಿ ದಿಶಾ ಯೋಜನೆಯಡಿ ರಾಜ್ಯವಾರು ಸಾಧನೆಯ ವಿವರ ಹೀಗಿದೆ.. 04-02-2021ರಲ್ಲಿದ್ದಂತೆ :
ಕ್ರ.ಸಂ | ರಾಜ್ಯ | ನೋಂದಣಿ | ತರಬೇತಿ ಪಡೆದವರು | ಪ್ರಮಾಣಪತ್ರ ಪಡೆದವರು |
1 | Andaman & Nicobar Island | 289 | 94 | 35 |
2 | Andhra Pradesh | 8,81,180 | 6,36,122 | 4,51,686 |
3 | Arunachal Pradesh | 3115 | 1044 | 735 |
4 | Assam | 19,66,584 | 16,37,804 | 12,74,239 |
5 | Bihar | 43,45,325 | 36,72,853 | 26,15,615 |
6 | Chandigarh | - | - | - |
7 | Chhattisgarh | 22,55,016 | 18,82,575 | 13,97,828 |
8 | Dadra & Nagar Haveli | 1193 | 376 | 257 |
9 | Daman & Diu | 1001 | 522 | 316 |
10 | Delhi | 248 | 153 | 100 |
11 | Goa | 1353 | 900 | 662 |
12 | Gujarat | 18,99,227 | 15,89,292 | 11,48,020 |
13 | Haryana | 15,53,903 | 12,93,311 | 9,64,122 |
14 | Himachal Pradesh | 2,39,813 | 1,60,161 | 1,16,106 |
15 | Jammu & Kashmir | 3,20,526 | 2,40,132 | 1,77,619 |
16 | Jharkhand | 18,42,753 | 14,33,545 | 10,26,959 |
17 | Karnataka | 7,20,693 | 5,54,284 | 3,69,437 |
18 | Kerala | 42547 | 19600 | 15569 |
19 | Ladakh | 1642 | 1094 | 799 |
20 | Lakshadweep | 27 | 5 | - |
21 | Madhya Pradesh | 32,63,074 | 26,85,459 | 18,99,770 |
22 | Maharashtra | 26,01,825 | 20,47,903 | 14,67,472 |
23 | Manipur | 9364 | 5134 | 3207 |
24 | Meghalaya | 73079 | 51198 | 32573 |
25 | Mizoram | 7451 | 5299 | 3074 |
26 | Nagaland | 5032 | 3644 | 2693 |
27 | Odisha | 23,34,437 | 18,62,126 | 14,02,287 |
28 | Puducherry | 11697 | 8185 | 5553 |
29 | Punjab | 11,44,427 | 9,57,242 | 7,26,201 |
30 | Rajasthan | 20,77,058 | 16,41,461 | 12,00,978 |
31 | Sikkim | 768 | 564 | 202 |
32 | Tamil Nadu | 7,40,003 | 5,99,273 | 4,30,115 |
33 | Telangana | 5,50,163 | 4,28,772 | 3,01,492 |
34 | Tripura | 1,43,935 | 95271 | 71744 |
35 | Uttar Pradesh | 1,11,56,468 | 94,32,168 | 69,00,805 |
36 | Uttarakhand | 4,28,749 | 3,38,051 | 2,52,266 |
37 | West Bengal | 14,78,889 | 11,51,565 | 8,71,619 |
Total | 4,21,02,854 | 3,44,37,182 | 2,51,32,155 |