ETV Bharat / bharat

ಕಾಂಗ್ರೆಸ್​ನ ಪೋಸ್ಟರ್ ಮಹಿಳೆಗೆ ಕೊರೊನಾ ಪಾಸಿಟಿವ್ - ಕಾಂಗ್ರೆಸ್​ನ ಪೋಸ್ಟರ್ ಮಹಿಳೆ ಬಾಲ್ಡಿ ಬಾಯಿ

ಬಿದಿರಿನ ಬುಟ್ಟಿಗಳನ್ನು ನೇಯ್ಗೆ ಮಾಡುವ ಮೂಲಕ ಜೀವನೋಪಾಯವನ್ನು ಕಂಡುಕೊಂಡಿದ್ದಳು. ಸದ್ಯ ಜಿಲ್ಲಾ ಕೇಂದ್ರದಿಂದ 75 ಕಿಲೋಮೀಟರ್ ದೂರದಲ್ಲಿ ವಾಸಿಸುತ್ತಿದ್ದಾರೆ..

Baldi bai
Baldi bai
author img

By

Published : Apr 26, 2021, 5:16 PM IST

ಗರಿಯಾಬಂದ್(ಛತ್ತೀಸ್​ಗಡ) : ಕಾಂಗ್ರೆಸ್​ನ ಪೋಸ್ಟರ್ ಮಹಿಳೆ ಎಂದು ಖ್ಯಾತಿ ಪಡೆದ 92 ವರ್ಷದ ಬಾಲ್ದಿ ಬಾಯಿ ಕೋವಿಡ್​ಗೆ ತುತ್ತಾಗಿದ್ದಾರೆ.

ಆಕೆಯನ್ನು ರಾಯ್‌ಪುರದ ಮೆಕಹರಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಕಾಂಗ್ರೆಸ್ ಮುಖಂಡೆ ಸೋನಿಯಾ ಗಾಂಧಿ ಅವರು 1985ರಲ್ಲಿ ಕುಲ್ಹಾಡಿ ಗ್ರಾಮಕ್ಕೆ ಭೇಟಿ ನೀಡಿದಾಗ ಈಕೆಗೆ ಅವರೊಂದಿಗೆ ಊಟ ಮಾಡುವ ಅವಕಾಶ ಸಿಕ್ಕಿತು.

ಆ ಬಳಿಕ ಛತ್ತೀಸ್​ಗಡದ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯಸ್ಥ ಮೋಹನ್ ಮಾರ್ಕಮ್ ಕೂಡ ಇವರನ್ನು ಭೇಟಿ ಮಾಡಿದ್ದರು.

ಇನ್ನು, ಈಕೆಯ ಪತಿ ಮತ್ತು ಮಗ ಅತೀವ ಬಡತನದ ಬೇಗೆಯಿಂದ ಮೃತಪಟ್ಟಿದ್ದರು. ಆ ಬಳಿಕ ಆಕೆ ಬಿದಿರಿನ ಬುಟ್ಟಿಗಳನ್ನು ನೇಯ್ಗೆ ಮಾಡುವ ಮೂಲಕ ಜೀವನೋಪಾಯವನ್ನು ಕಂಡುಕೊಂಡಿದ್ದಳು. ಸದ್ಯ ಜಿಲ್ಲಾ ಕೇಂದ್ರದಿಂದ 75 ಕಿಲೋಮೀಟರ್ ದೂರದಲ್ಲಿ ವಾಸಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.