ETV Bharat / bharat

ಡ್ರೋನ್​ ಮೂಲಕ ಅಂಚೆ ಸೇವೆ.. ಗುಜರಾತ್​ನಲ್ಲಿ ಯಶಸ್ವಿಯಾದ ಪ್ರಯೋಗ - ಡ್ರೋನ್​ ಬಳಸಿ ಅಂಚೆ ಸೇವೆ ಪ್ರಯೋಗ ಯಶಸ್ವಿ

ಡ್ರೋನ್​ ಬಳಸಿ ಅಂಚೆ ಸೇವೆ ನೀಡಬಹುದೇ ಎಂಬುದನ್ನು ಗುಜರಾತ್​ ಅಂಚೆ ಇಲಾಖೆ ಪ್ರಯೋಗ ಮಾಡಿ ನೋಡಿದ್ದು, ಅದು ಯಶಸ್ವಿಯಾಗಿದೆ. 46 ಕಿ.ಮೀ. ದೂರದ ಪ್ರದೇಶವನ್ನು ಡ್ರೋನ್​ ಕೇವಲ 25 ನಿಮಿಷದಲ್ಲಿ ತಲುಪಿ ಅಂಚೆ ಪತ್ರ ತಲುಪಿಸಿದೆ.

postal-department-on-a-trial
ಡ್ರೋನ್​ ಮೂಲಕ ಅಂಚೆ ಸೇವೆ
author img

By

Published : May 30, 2022, 8:00 PM IST

ಅಹಮದಾಬಾದ್: ಎಲ್ಲ ಕ್ಷೇತ್ರಗಳಲ್ಲೂ ಡ್ರೋನ್ ಬಳಕೆ ಹೆಚ್ಚುತ್ತಿದೆ. ಗುಜರಾತ್​ನ ಅಂಚೆ ಇಲಾಖೆಯೂ ಕೂಡ ತಂತ್ರಜ್ಞಾನವನ್ನು ಬಳಸಿಕೊಂಡಿದ್ದು, ಕಛ್​ನಿಂದ 46 ಕಿಲೋ ಮೀಟರ್​ ದೂರ ಇರುವ ಕುಟುಂಬಕ್ಕೆ ಡ್ರೋನ್​ ಮೂಲಕವೇ ಅಂಚೆ ಸೇವೆ ನೀಡಲಾಗಿದೆ. ಅದೂ 25 ನಿಮಿಷದಲ್ಲಿಯೇ ಎಂಬುದು ವಿಶೇಷ.

ಹೌದು, ಗುಜರಾತ್​ನ ಅಂಚೆ ಇಲಾಖೆ ತನ್ನ ಸೇವೆಗಾಗಿ ಡ್ರೋನ್​ ಬಳಕೆಯ ಪ್ರಯೋಗ ಮಾಡಿದ್ದು, ಅದು ಯಶಸ್ವಿಯಾಗಿದೆ. ಕೇಂದ್ರ ಸಂವಹನ ಸಚಿವಾಲಯದ ಮಾರ್ಗದರ್ಶನದ ಮೇರೆಗೆ ಅಂಚೆ ಇಲಾಖೆಯು ಭುಜ್ ತಾಲೂಕಿನ ಹಬೇ ಗ್ರಾಮದಿಂದ ಕಛ್​ ಜಿಲ್ಲೆಯ ಭಚೌ ತಾಲೂಕಿನ ನೇರ್ ಗ್ರಾಮಕ್ಕೆ ಡ್ರೋನ್ ಮೂಲಕ ಪತ್ರ ಕಳುಹಿಸಲಾಗಿದೆ. ಪತ್ರ ವಾರಸುದಾರರಿಗೆ ಯಶಸ್ವಿಯಾಗಿ ದೊರಕಿದ್ದು, ಇಲಾಖೆಯ ಪ್ರಯೋಗ ಯಶಸ್ವಿಯಾಗಿದೆ.

ಭಾರತೀಯ ಅಂಚೆ ಇಲಾಖೆಯು ಗುಜರಾತ್‌ನ ಕಛ್​ ಜಿಲ್ಲೆಯಲ್ಲಿ ಡ್ರೋನ್ ತಂತ್ರಜ್ಞಾನದ ಸಹಾಯದಿಂದ ಪತ್ರವನ್ನು ತಲುಪಿಸುವ ಪ್ರಾಯೋಗಿಕ ಯೋಜನೆಯನ್ನು ದೇಶದ ಅಂಚೆ ಇಲಾಖೆ ಇತಿಹಾಸದಲ್ಲಿ ಮೊದಲ ಬಾರಿಗೆ ಯಶಸ್ವಿಯಾಗಿ ಪರೀಕ್ಷಿಸಿದೆ. ಇದು ಭವಿಷ್ಯದಲ್ಲಿ ಡ್ರೋನ್ ಮೂಲಕ ಅಂಚೆ ವಿತರಣೆಯನ್ನು ಮಾಡಲು ಇನ್ನಷ್ಟು ನೆರವಾಗಲಿದೆ ಎಂದು ಪಿಐಬಿ ಹೇಳಿದೆ.

ಡ್ರೋನ್​ ಮೂಲಕ ಅಂಚೆ ಸೇವೆ ಪಡೆದ ಗ್ರಾಹಕರು
ಡ್ರೋನ್​ ಮೂಲಕ ಅಂಚೆ ಸೇವೆ ಪಡೆದ ಗ್ರಾಹಕರು

ಡ್ರೋನ್​ ಮೂಲಕ ನೀಡಿದ್ದು ಪತ್ರವಲ್ಲ, ಔಷಧ: ಅಂಚೆ ಕಚೇರಿಯ ಮೂಲ ಸ್ಥಳದಿಂದ 46 ಕಿಲೋ ಮೀಟರ್​ ದೂರದಲ್ಲಿರುವ ಗಮ್ಯಸ್ಥಾನವನ್ನು ತಲುಪಲು 25 ನಿಮಿಷಗಳನ್ನು ತೆಗೆದುಕೊಂಡಿದೆ. ಇದು ಡ್ರೋನ್​ ಬಳಕೆಯನ್ನು ಹೆಚ್ಚಿಸಲು ಪ್ರೇರೇಪಣೆಯಾಗಿದೆ. ಇದು ಪತ್ರವಾಗಿರದೇ ಔಷಧವಾಗಿತ್ತು. ವ್ಯಕ್ತಿಯೊಬ್ಬರಿಗೆ ಔಷಧವನ್ನು ಡ್ರೋನ್​ ಮೂಲಕ ತಲುಪಿಸಲಾಗಿದೆ ಎಂದು ಕೇಂದ್ರ ಸಂವಹನ ಖಾತೆ ರಾಜ್ಯ ಸಚಿವ ದೇವುಸಿನ್ ಚೌಹಾಣ್ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಪೈಲಟ್ ಯೋಜನೆಯಡಿ ನಿರ್ದಿಷ್ಟವಾಗಿ ಡ್ರೋನ್‌ಗಳ ಮೂಲಕ ವಿತರಣೆಯ ವೆಚ್ಚ ಮತ್ತು ಎರಡು ಕೇಂದ್ರಗಳ ನಡುವಿನ ಭೌಗೋಳಿಕ ಸ್ಥಳವನ್ನು ಅಧ್ಯಯನ ಮಾಡಲಾಗುತ್ತಿದೆ. ಜೊತೆಗೆ ವಿತರಣಾ ವೆಚ್ಚವನ್ನೂ ಲೆಕ್ಕ ಹಾಕಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.

ಓದಿ: ಪಿಎಸ್ಐ ಅಕ್ರಮ ಪ್ರಕರಣ: ಕಿಂಗ್ ಪಿನ್ ಪಾಟೀಲ್ ಮತ್ತೆ ಮೂರು ದಿನ ಸಿಐಡಿ‌ ಕಸ್ಟಡಿಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.