ಕಾನ್ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಕಾನ್ಪುರದಲ್ಲಿ ಮುದ್ರಣಗೊಂಡ ಅಂಚೆ ಇಲಾಖೆಯ ಸ್ಟಾಂಪ್ನಲ್ಲಿ ಭೂಗತ ಪಾತಕಿಗಳಾದ ಛೋಟಾ ರಾಜನ್ ಹಾಗೂ ಮುನ್ನಾ ಬಜರಂಗಿ ಫೋಟೋಗಳನ್ನು ಮುದ್ರಿಸಲಾಗಿದೆ.
ಯಾವೊಬ್ಬ ವ್ಯಕ್ತಿಯಾದರು ಸಹ ತನ್ನ ಫೋಟೋ ಹಾಗೂ ಗುರುತಿನ ಚೀಟಿ ನೀಡಿ ತನ್ನ ಹೆಸರಿನ ಸ್ಟಾಂಪ್ ಪಡೆಯಬಹುದು. ಚೀಟಿ ಮುದ್ರಣಕ್ಕೆ ಅನುಮತಿ ನೀಡುವ ಮುನ್ನ ಗುರುತಿನ ಚೀಟಿ ಪರಿಶೀಲನೆ ಮಾಡೋದು ಕಡ್ಡಾಯವಾಗಿದೆ. ಆದರೆ ಈ ಹಂತದಲ್ಲಿ ವ್ಯತ್ಯಾಸವಾಗಿ ಭೂಗತ ಪಾತಕಿಗಳ ಫೋಟೋ ಅಂಚೆ ಚೀಟಿಯಲ್ಲಿ ಮುದ್ರಣಗೊಂಡಿದೆ ಎಂದು ಅಂಚೆ ಕಚೇರಿ ಅಧಿಕಾರಿ ಹಿಮಾಂಶು ಮಿಶ್ರಾ ಸ್ಪಷ್ಟನೆ ನೀಡಿದ್ದಾರೆ.
![post-office-releases-stamps-of-criminals-chhota-rajan-and-munna-bajrangi-in-kanpur](https://etvbharatimages.akamaized.net/etvbharat/prod-images/10032537_vish.jpg)
ಕಚೇರಿ ಅಧಿಕಾರಗಳು ಅಂಚೆ ಚೀಟಿಯಲ್ಲಿ ಫೋಟೋ ಮುದ್ರಿಸುವ ಮುನ್ನ ಗುರುತಿನ ಚೀಟಿ ಹಾಗೂ ಅಂಚೆ ಚೀಟಿ ಮುದ್ರಿಸಲು ಬಯಸುವ ವ್ಯಕ್ತಿಯ ಮುಖ ಹಾಗೂ ಫೋಟೋ ಪರಿಶೀಲನೆ ನಡೆಸಬೇಕೆಂದು ತಾಕೀತು ಮಾಡಿದ್ದಾರೆ.