ಪೂಂಚ್ (ಜಮ್ಮು ಮತ್ತು ಕಾಶ್ಮೀರ): ತನ್ನ ಬಂದೂಕಿನಿಂದಲೇ ಆಕಸ್ಮಿಕವಾಗಿ ಹಾರಿದ ಗುಂಡಿನಿಂದ ಭಾರತೀಯ ಸೇನೆಯ ಯೋಧರೊಬ್ಬರು ಮೃತಪಟ್ಟಿದ್ದಾರೆ. ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ಮಂಕೋಟೆ ಸೆಕ್ಟರ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ ಈಶ್ವರನ್ ಆರ್. (27) ಎಂಬುವರೇ ಸಾವಿಗೀಡಾದ ಯೋಧ.
ಮೃತಪಟ್ಟ ಯೋಧ ಪ್ರಸ್ತುತ 37ನೇ ರಾಷ್ಟ್ರೀಯ ರೈಫಲ್ಸ್ (RR) ನ ಕರ್ತವ್ಯದ ಮೇಲೆ ನಿಯೋಜಿತರಾಗಿದ್ದರು. ಅವರ ಸರ್ವೀಸ್ ರೈಫಲ್ನಿಂದ ಆಕಸ್ಮಿಕವಾಗಿ ಗುಂಡು ಹಾರಿದ ಪರಿಣಾಮ ಅವರಿಗೆ ಗಂಭೀರ ಗಾಯವಾಗಿತ್ತು. ಕೂಡಲೇ ಮೆಂಧಾರ್‌ನಲ್ಲಿರುವ ಉಪ-ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ವೈದ್ಯರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಮರಣೋತ್ತರ ಪರೀಕ್ಷೆಯ ನಂತರ ಪಾರ್ಥಿವ ಶರೀರವನ್ನು ಸೇನೆಗೆ ಹಸ್ತಾಂತರಿಸಲಾಯಿತು.
ಸಿಆರ್ ಪಿಸಿಯ ಸೆಕ್ಷನ್ 174 ರ ಅಡಿಯಲ್ಲಿ ಪೊಲೀಸರು ವಿಚಾರಣೆಯ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ. ಘಟನೆಯ ತನಿಖೆಗಾಗಿ ಸೇನೆ ತನಿಖಾ ಸಮಿತಿಯನ್ನು ನೇಮಿಸಿದೆ.
ಇದನ್ನೂ ಓದಿ: ಅರುಣಾಚಲ ಪ್ರದೇಶದ ಗಡಿಯಲ್ಲಿ ಸೇನಾ ಬಲ ಹೆಚ್ಚಳ: ಎಂ 777 ಅಲ್ಟ್ರಾಲೈಟ್ ಹೊವಿಟ್ಜರ್‌ಗಳ ನಿಯೋಜನೆ