ETV Bharat / bharat

ವ್ಯಾಪಾರ ಕೇಂದ್ರವಾಗಿರುವ ತಿರುಪತಿ ದೇವಸ್ಥಾನ: ವಿವಿಧ ರಾಜ್ಯಗಳ 30 ಮಠಾಧೀಶರ ಆರೋಪ - ತಿರುಪತಿ ದೇವಸ್ಥಾನ

ತಿರುಮಲದಲ್ಲಿ ಶೀಘ್ರದಲ್ಲೇ ಸಾರ್ವಜನಿಕ ಸಭೆ ನಡೆಸಿ ಟಿಟಿಡಿಯಲ್ಲಿ ಆಗುತ್ತಿರುವ ಭ್ರಷ್ಟಾಚಾರ, ಅಕ್ರಮಗಳನ್ನು ಬಯಲಿಗೆಳೆಯಲಾಗುವುದು ಎಂದು ವಿಜಯವಾಡದ ಶ್ರೀಯೋಗಿ ಪೀಠದ ಮುಖ್ಯಸ್ಥ ಶ್ರೀಯೋಗಿ ಅತಿಥೇಶ್ವರಾನಂದ ಪರ್ವತಸ್ವಾಮಿ ಹೇಳಿದ್ದಾರೆ.

pontiff-of-30-peethas-protest-against-ttd-in-tirupati
ವ್ಯಾಪಾರ ಕೇಂದ್ರವಾಗಿರುವ ತಿರುಪತಿ ದೇವಸ್ಥಾನ: ವಿವಿಧ ರಾಜ್ಯಗಳ 30 ಮಠಾಧೀಶರ ಆರೋಪ
author img

By

Published : Nov 24, 2022, 3:38 PM IST

ಚಂದ್ರಗಿರಿ (ಆಂಧ್ರಪ್ರದೇಶ): ಆಂಧ್ರ ಪ್ರದೇಶದ ತಿರುಮಲ ತಿರುಪತಿ ದೇವಸ್ಥಾನವನ್ನು ಅಧ್ಯಾತ್ಮಿಕ ಕೇಂದ್ರವನ್ನಾಗಿ ಮಾಡದೇ ವ್ಯಾಪಾರ ಕೇಂದ್ರವನ್ನಾಗಿ ಮಾಡಲಾಗಿದೆ ಎಂದು ವಿವಿಧ ರಾಜ್ಯಗಳ 30 ಮಠಾಧೀಶರು ಆರೋಪಿಸಿದ್ದಾರೆ.

ತಿರುಪತಿಯ ಬಾಲಾಜಿ ದೇವರ ದರ್ಶನಕ್ಕಾಗಿ ಬುಧವಾರ ಮಠಾಧೀಶರು ತಿರುಮಲಕ್ಕೆ ಆಗಮಿಸಿದ್ದರು. ಈ ವೇಳೆ ಮಹಾದ್ವಾರದಿಂದ ದರ್ಶನಕ್ಕೆ ಶ್ರೀಗಳು ತೆರಳುತ್ತಿದ್ದಾಗ ಭದ್ರತಾ ಸಿಬ್ಬಂದಿ ಅವಕಾಶ ನೀಡಲಿಲ್ಲ. ಮಹಾದ್ವಾರದಿಂದ ಮೂಲಕ ಬಿಡಲು ನಮಗೆ ಯಾವುದೇ ಪೂರ್ವ ಮಾಹಿತಿ ಇಲ್ಲ ಎಂದು ಭದ್ರತಾ ಸಿಬ್ಬಂದಿ ಹೇಳಿದರು. ಆಗ ಶ್ರೀಗಳು ದೇವರ ದರ್ಶನಕ್ಕೆ ಬರುವ ಬಗ್ಗೆ ಮೊದಲೇ ಪತ್ರದ ಮೂಲಕ ತಿಳಿಸಿದ್ದರೂ ಹೀಗೆ ಮಾಡುತ್ತೀರಾ ಎಂದು ಕೆಲಕಾಲ ಅಲ್ಲೇ ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ: 16 ವರ್ಷವಾದ್ರೂ ಮೇಲ್ಚಾಟ್​ ಸೇವೆಗೆ ಸಿಗದ ಅವಕಾಶ.. ಟಿಟಿಡಿ ವಿರುದ್ಧ ಗ್ರಾಹಕ ಸೇವಾ ಕೋರ್ಟ್​ ಬೇಸರ

ಇದಾದ ಬಳಿಕ ಮಂಗಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯವಾಡದ ಶ್ರೀಯೋಗಿ ಪೀಠದ ಮುಖ್ಯಸ್ಥ ಶ್ರೀಯೋಗಿ ಅತಿಥೇಶ್ವರಾನಂದ ಪರ್ವತಸ್ವಾಮಿ, ತಿರುಮಲದಲ್ಲಿ ರಾಜಕೀಯ ನಾಯಕರು ಹಾಗೂ ಶ್ರೀಮಂತರಿಗೆ ಮಾತ್ರ ಉಚಿತ ದರ್ಶನದ ಭಾಗ್ಯ ದೊರೆಯುತ್ತಿದೆ ಎಂದು ಆರೋಪಿಸಿದರು.

ರಾಜಕೀಯ ನಾಯಕರಿಗೆ ಮಾತ್ರವೇ ದೇವರ ದರ್ಶನಕ್ಕೆ ಅವಕಾಶ ನೀಡುವುದಾದರೆ ಅಖಿಲ ಭಾರತ ಹಿಂದೂ ಮಹಾಸಭಾದ ಮೂಲಕ ನಮ್ಮ ಭಕ್ತರನ್ನು ರಾಜಕೀಯಕ್ಕೆ ಕರೆ ತರಬೇಕಾಗುತ್ತದೆ. ತಿರುಮಲದಲ್ಲಿ ಯಾವುದೇ ಬದಲಾವಣೆ ಆಗದಿದ್ದರೆ, ದೇಶಾದ್ಯಂತ ಇರುವ 900 ಪೀಠಾಧೀಶರು ಆಶೀರ್ವಾದ ಪಡೆದು ಶೀಘ್ರದಲ್ಲೇ ಆಂಧ್ರ ಪ್ರದೇಶದಲ್ಲಿ ಹೊಸ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿದರು.

ತಿರುಮಲದಲ್ಲಿ ಸಾಮಾನ್ಯ ಭಕ್ತರು ಮುಕ್ತವಾಗಿ ತೆರಳಿ ದೇವರ ದರ್ಶನ ಮಾಡುವ ಪರಿಸ್ಥಿತಿ ಇಲ್ಲ ಎಂದೂ ದೂರಿದ ಅವರು, ಶೀಘ್ರದಲ್ಲೇ ತಿರುಪತಿಯಲ್ಲಿ ಸಾರ್ವಜನಿಕ ಸಭೆ ನಡೆಸಿ ಟಿಟಿಡಿಯಲ್ಲಿ ಆಗುತ್ತಿರುವ ಭ್ರಷ್ಟಾಚಾರ, ಅಕ್ರಮಗಳನ್ನು ಬಯಲಿಗೆಳೆಯಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ಹೆಸರಲ್ಲಿದೆ 2 ಲಕ್ಷ 25 ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.