ನವದೆಹಲಿ: ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ತೀವ್ರ ನಿರಾಸೆಗೊಳಗಾಗಿದ್ದು, ಹೊರಬಿದ್ದಿರುವ ಫಲಿತಾಂಶ ಕೈ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಮಾತನಾಡಿರುವ ವಿಡಿಯೋ ತುಣುಕವೊಂದನ್ನು ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಶೇರ್ ಮಾಡಿಕೊಂಡಿದ್ದು, ಕ್ರೀಡೆ, ಸ್ಪರ್ಧೆ ಹಾಗೂ ಹೋರಾಟದ ಬಗ್ಗೆ ಈ ವಿಡಿಯೋ ಇದೆ.
ಕಾಂಗ್ರೆಸ್ ಹಂಚಿಕೊಂಡಿರುವ ವಿಡಿಯೋದಲ್ಲಿ ಏನಿದೆ?: ಕ್ರೀಡಾ ಸ್ಪರ್ಧೆಯಲ್ಲಿ ಭಾಗಿಯಾದಾಗ ಮೊದಲು ನಮ್ಮೊಳಗಿರುವ ಭಯದ ವಿರುದ್ಧ ಹೋರಾಡುತ್ತೇವೆ. ನಮ್ಮೊಳಗಿರುವ ಭಯದ ಅನುಭವ ಚೆನ್ನಾಗಿ ತಿಳಿದುಕೊಳ್ಳಲು ಕ್ರೀಡೆ ನಿಜವಾಗಿ ಅತ್ಯುತ್ತಮವಾದ ವೇದಿಕೆಯಾಗಿದೆ ಎಂದಿದ್ದಾರೆ. ಇದರ ವಿಡಿಯೋ ತುಣುಕವೊಂದನ್ನ ಕಾಂಗ್ರೆಸ್ ಇದೀಗ ಹಂಚಿಕೊಂಡಿದೆ.
-
When you are playing sports, you are essentially fighting your fears.
— Congress (@INCIndia) March 10, 2022 " class="align-text-top noRightClick twitterSection" data="
Sports is a really good place to experiment with your fear. It teaches you how to deal with your fear.
: Shri @RahulGandhi pic.twitter.com/NY6b1yYmsw
">When you are playing sports, you are essentially fighting your fears.
— Congress (@INCIndia) March 10, 2022
Sports is a really good place to experiment with your fear. It teaches you how to deal with your fear.
: Shri @RahulGandhi pic.twitter.com/NY6b1yYmswWhen you are playing sports, you are essentially fighting your fears.
— Congress (@INCIndia) March 10, 2022
Sports is a really good place to experiment with your fear. It teaches you how to deal with your fear.
: Shri @RahulGandhi pic.twitter.com/NY6b1yYmsw
ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಹಾಗೂ ಪಂಜಾಬ್ದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸು ಕಾಣುತ್ತಿದ್ದ ಕಾಂಗ್ರೆಸ್ಗೆ ನಿರಾಸೆಯಾಗಿದ್ದು, ಎಲ್ಲ ರಾಜ್ಯಗಳಲ್ಲೂ ಕಳಪೆ ಪ್ರದರ್ಶನ ತೋರಿದೆ. ಪಂಚರಾಜ್ಯಗಳ ಚುನಾವಣೆ ಪೈಕಿ ಉತ್ತರ ಪ್ರದೇಶದಲ್ಲಿ ಬಿಜೆಪಿ 261 ಕ್ಷೇತ್ರ, ಸಮಾಜವಾದಿ ಪಕ್ಷ 136, ಬಿಎಸ್ಪಿ, ಕಾಂಗ್ರೆಸ್ ತಲಾ 2 ಸ್ಥಾನದಲ್ಲಿ ಮುನ್ನಡೆಯಲಿದ್ದು, ಇತರ 4 ಸ್ಥಾನದಲ್ಲಿ ಮುಂದಿವೆ. ಪಂಜಾಬ್ನಲ್ಲಿ ಎಎಪಿ 92, ಕಾಂಗ್ರೆಸ್ 19, ಬಿಜೆಪಿ 2 ಸ್ಥಾನದಲ್ಲಿ ಮುಂದಿದೆ. ಇತ್ತ ಉತ್ತರಾಖಂಡದಲ್ಲಿ ಬಿಜೆಪಿ 47, ಕಾಂಗ್ರೆಸ್ 20 ಸ್ಥಾನದಲ್ಲಿ ಮುನ್ನಡೆ ಪಡೆದುಕೊಂಡಿದ್ದು, ಗೋವಾದಲ್ಲಿ ಬಿಜೆಪಿ 18, ಕಾಂಗ್ರೆಸ್ 15 ಹಾಗೂ ಟಿಎಂಸಿ 3 ಸ್ಥಾನದಲ್ಲಿ ಮುನ್ನಡೆ ಪಡೆದುಕೊಂಡಿದೆ.
ಇದನ್ನು ಓದಿ:ರಾಮನಗರದ ಆ ಪ್ರಭಾವಿ ನಾಯಕನಾದರೂ ಯಾರು?: ಯತ್ನಾಳ್ ಪ್ರಶ್ನೆಗೆ ಹೆಚ್ಡಿಕೆ ಹೇಳಿದ್ದೇನು?