ETV Bharat / bharat

ಗುಜರಾತ್​ನ ಈ ಹಳ್ಳಿಯಲ್ಲಿ ಪ್ರಚಾರ ಮಾಡುವಂತಿಲ್ಲ, ಮತ ತಪ್ಪಿಸುವಂತಿಲ್ಲ: ಹೀಗೊಂದು ಮಾದರಿ ಗ್ರಾಮ

ಮುಂದಿನ ತಿಂಗಳು ನಡೆಯುವ ಗುಜರಾತ್​ ಚುನಾವಣೆಯಲ್ಲಿ ಕಾಂಗ್ರೆಸ್​, ಆಪ್​, ಬಿಜೆಪಿ ಮಧ್ಯೆ ತುರುಸಿನ ಪೈಪೋಟಿ ನಡೆಸಿವೆ. ಪಕ್ಷಗಳ ಅಭ್ಯರ್ಥಿಗಳು ಎಲ್ಲೆಡೆ ಪ್ರಚಾರ ನಡೆಸುತ್ತಿದ್ದಾರೆ. ಆದರೆ, ಈ ಗ್ರಾಮದಲ್ಲಿ ಮಾತ್ರ ಯಾವುದೇ ಪ್ರಚಾರ ಗೊಡವೆಯೇ ನಡೆಯುವುದಿಲ್ಲ.

campaigning-in-this-gujarat-village
ಗುಜರಾತ್​ನ ಈ ಹಳ್ಳಿಯಲ್ಲಿ ಪ್ರಚಾರ ಮಾಡುವಂತಿಲ್ಲ
author img

By

Published : Nov 23, 2022, 5:38 PM IST

ರಾಜ್‌ಕೋಟ್ (ಗುಜರಾತ್): ಚುನಾವಣೆ ಅಂದಮೇಲೆ ರಾಜಕೀಯ ಪಕ್ಷಗಳ ಭರಾಟೆ, ಅಬ್ಬರದ ಪ್ರಚಾರ ಎಲ್ಲವೂ ಸರ್ವೇಸಾಮಾನ್ಯ. ನಗರ, ಗ್ರಾಮಗಳಿಗೆ ತೆರಳಿ ಅಭ್ಯರ್ಥಿಗಳು ಮತಯಾಚನೆ ಮಾಡುತ್ತಾರೆ. ಸಾಧ್ಯ, ಅಸಾಧ್ಯಗಳ ಬಿಟ್ಟಿ ಭರವಸೆಯನ್ನಂತೂ ಕೊಟ್ಟೆ ಕೊಡ್ತಾರೆ. ಇಂತಹ ರಾಜಕೀಯ ಪ್ರಚಾರವನ್ನು ಗುಜರಾತ್​ನ ಈ ಹಳ್ಳಿಯಲ್ಲಿ 40 ವರ್ಷಗಳಿಂದ ನಿಷೇಧಿಸಲಾಗಿದೆ. ಯಾವುದೇ ಪಕ್ಷಗಳು ಇಲ್ಲಿ ಪ್ರಚಾರ ಮಾಡುವಂತಿಲ್ಲ. ವಿಶೇಷ ಅಂದ್ರೆ ಇಲ್ಲಿನ ಜನರು ಕಡ್ಡಾಯ ಮತದಾನ ಮಾಡಬೇಕು. ಇಲ್ಲವಾದಲ್ಲಿ ದಂಡ ಕಟ್ಟಲೇಬೇಕು.

ಅಬ್ಬಾ.. ಈ ಕಾಲದಲ್ಲೂ ಇಂತಹ ನಿಬಂಧನೆಗೆ ಒಳಪಟ್ಟ ಗ್ರಾಮ ಯಾವುದು ಅಂತೀರಾ. ರಾಜ್​ಕೋಟ್​ ನಗರದಿಂದ 20 ಕಿಲೋಮೀಟರ್​ ದೂರವಿರುವ ರಾಜ್​ ಸಮಾಧಿಯಾಲ ರಾಜಕೀಯ ಗೋಜಲಿನಿಂದ ದೂರವಿರುವ ನೆಮ್ಮದಿಯ ಗ್ರಾಮ. ಇಲ್ಲಿ 1700 ಕ್ಕೂ ಅಧಿಕ ಜನರಿದ್ದು, 995 ಅರ್ಹ ಮತದಾರರಿದ್ದಾರೆ.

ಗ್ರಾಮಾಭಿವೃದ್ಧಿ ಸಮಿತಿಯ ನಿಯಮಗಳ ಫಲಕ
ಗ್ರಾಮಾಭಿವೃದ್ಧಿ ಸಮಿತಿಯ ನಿಯಮಗಳ ಫಲಕ

ರಾಜಕೀಯ ಪಕ್ಷಗಳಿಗೆ ಯಾಕೆ ನಿರ್ಬಂಧ: ರಾಜ್​ ಸಮಾಧಿಯಾಲ ಗ್ರಾಮದಲ್ಲಿ 1983 ರಿಂದಲೂ ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರಕ್ಕೆ ನಿರ್ಬಂಧ ಹೇರಲಾಗಿದೆ. ಇಲ್ಲಿ ಯಾವುದೇ ಪಕ್ಷದ ನಾಯಕರು ಬಂದು ಮತ ನೀಡಿ ಎಂದು ಕೇಳುವಂತಿಲ್ಲ. ಕಾರಣ ರಾಜಕಾರಣಿಗಳ ಗ್ರಾಮ ಪ್ರವೇಶದಿಂದ ಇಲ್ಲಿನ ಜನರು ತಪ್ಪು ದಾರಿ ಹಿಡಿದು ಮತವನ್ನು ಮಾರಿಕೊಳ್ಳುತ್ತಾರೆ. ಇದು ಭವಿಷ್ಯಕ್ಕೆ ತೊಡಕಾಗಲಿದೆ ಎಂದು ಈ ನಿರ್ಬಂಧ ವಿಧಿಸಲಾಗಿದೆ.

ಗ್ರಾಮಾಭಿವೃದ್ಧಿ ಸಮಿತಿ ನಿರ್ಧಾರವೇ ಅಂತಿಮ: ಗ್ರಾಮದ ಜನರೆಲ್ಲರೂ ಸೇರಿ ಗ್ರಾಮಾಭಿವೃದ್ಧಿ ಸಮಿತಿ ರಚಿಸಿಕೊಂಡಿದ್ದು, ಅದರ ನಿರ್ಧಾರಗಳೇ ಅಂತಿಮವಾಗಿರುತ್ತವೆ. ಸಮಿತಿ ರೂಪಿಸುವ ನಿಯಮಗಳನ್ನು ಜನರು ಕಡ್ಡಾಯವಾಗಿ ಪಾಲಿಸಲೇಬೇಕು. ಇಲ್ಲವಾದಲ್ಲಿ ಉಲ್ಲಂಘನೆಗೆ ದಂಡ ತೆರಬೇಕು.

ಇಲ್ಲಿ ಆಗುತ್ತೆ ಶೇ 100 ರಷ್ಟು ಮತದಾನ: ಚುನಾವಣೆಯಲ್ಲಿ ಮತದಾನ ಮಾಡಿ ಎಂದು ಆಯೋಗ ಗೋಗರೆದರೂ ಕೆಲ ಜನರು ಕ್ಯಾರೇ ಎನ್ನುವುದಿಲ್ಲ. ಆದರೆ, ಈ ಗ್ರಾಮದಲ್ಲಿ ಮತದಾನ ಮಾಡುವುದು ಕಡ್ಡಾಯ ನಿಯಮ. ಮತದಾರ ಪ್ರಭುಗಳು ತಮ್ಮ ಇಚ್ಛೆಯನುಸಾರ ಯಾವುದೇ ಅಭ್ಯರ್ಥಿಗೆ ಮತ ನೀಡುವ ಸರ್ವ ಹಕ್ಕನ್ನು ಹೊಂದಿದ್ದಾರೆ. ಮತ ನೀಡದೇ ಹೋದಲ್ಲಿ ಮಾತ್ರ ಅಂಥವರಿಗೆ ದಂಡ ಶತಃಸಿದ್ಧ.

ಮತದಾನದಿಂದ ತಪ್ಪಿಸಿಕೊಂಡ ವ್ಯಕ್ತಿ ಯಾಕಾಗಿ ತಾನು ಮತದಾನದಲ್ಲಿ ಪಾಲ್ಗೊಂಡಿಲ್ಲ ಎಂಬುದನ್ನು ಗ್ರಾಮಾಭಿವೃದ್ಧಿ ಸಮಿತಿ ಮುಂದೆ ಕಾರಣ ಸಹಿತ ಹಾಜರಾಗಬೇಕು. ನಿಯಮ ಉಲ್ಲಂಘನೆ ಕಂಡುಬಂದಲ್ಲಿ 51 ರೂಪಾಯಿಗಳ ದಂಡವನ್ನು ಕಟ್ಟಬೇಕಾಗುತ್ತದೆ. ಹೀಗಾಗಿ ಗ್ರಾಮದಲ್ಲಿ ಪ್ರತಿ ಚುನಾವಣೆಯಲ್ಲಿ ಶೇ 100 ರಷ್ಟು ಮತದಾನವಾಗುತ್ತದೆ.

ಮತ ಹಾಕದಿದ್ದರೆ ಕಾರಣ ಕೊಡಬೇಕು: ಗ್ರಾಮದಲ್ಲಿ ರಾಜಕೀಯ ಪಕ್ಷಗಳಿಗೆ ಪ್ರಚಾರಕ್ಕೆ ಅವಕಾಶ ನೀಡಬಾರದು ಎಂಬ ನಿಯಮವನ್ನು 1983 ರಿಂದಲೂ ಪಾಲಿಸಿಕೊಂಡು ಬರಲಾಗಿದೆ. ಪಕ್ಷಗಳ ಪ್ರಚಾರಕ್ಕೆ ಅವಕಾಶ ನೀಡಿದರೆ, ಭವಿಷ್ಯಕ್ಕೆ ಧಕ್ಕೆಯಾಗುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ. ಜನರು ಕಡ್ಡಾಯವಾಗಿ ಮತದಾನ ಮಾಡಬೇಕು. ಇಲ್ಲವಾದಲ್ಲಿ 51 ರೂಪಾಯಿ ದಂಡ ವಿಧಿಸಲಾಗುತ್ತದೆ. ಮತದಾನದಲ್ಲಿ ಪಾಲ್ಗೊಳ್ಳದಿದ್ದರೆ ಸೂಕ್ತ ಕಾರಣ ನೀಡಿ ಅನುಮತಿ ಪಡೆಯಬೇಕಾಗುತ್ತದೆ ಎಂದು ಗ್ರಾಮದ ಸರಪಂಚ್​ ವಿವರಿಸುತ್ತಾರೆ.

ಗುಜರಾತ್​ನ 182 ವಿಧಾನಸಭಾ ಕ್ಷೇತ್ರಗಳಿಗೆ ಡಿಸೆಂಬರ್ 1 ಮತ್ತು 5 ರಂದು 2 ಹಂತಗಳಲ್ಲಿ ಮತದಾನ ನಡೆಯಲಿದೆ. ಡಿಸೆಂಬರ್ 8 ರಂದು ಮತಗಳ ಎಣಿಕೆ ನಡೆಯಲಿದೆ.

ಓದಿ: EWS ಸುಪ್ರೀಂಕೋರ್ಟ್ ತೀರ್ಪು ಮರುಪರಿಶೀಲನೆಗೆ ಕಾಂಗ್ರೆಸ್​ನಿಂದ ಅರ್ಜಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.