ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಬಿರುಸಾಗಿ ಸಾಗಿದೆ ಎನ್‌ಡಿಎ ಹಾಗೂ ಮಹಾಘಟಬಂಧನ್ ನಡುವೆ ಅಧಿಕಾರಕ್ಕಾಗಿ ತುರುಸಿನ ಸ್ಪರ್ಧೆ ನಡೆಯುತ್ತಿದೆ. ರಾಜ್ಯದ 243 ವಿಧಾನಸಭಾ ಸ್ಥಾನಗಳಲ್ಲಿ ಮೂರು ಹಂತಗಳಲ್ಲಿ ಮತದಾನ ನಡೆದಿದ್ದು, ಇಂದು 3,755 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಅಲ್ಲದೆ, ಯಾವ ಪಕ್ಷದಿಂದ ಸರ್ಕಾರ ರಚನೆಯಾಗುತ್ತದೆ ಎಂದು ಇಂದು ಖಚಿತವಾಗುತ್ತಿದೆ.
ಫಲಿತಾಂಶ ಕುರಿತು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಪ್ರತಿಕ್ರಿಯಿಸಿದ್ದಾರೆ. ಬಿಜೆಪಿ ನಾಯಕ ಮನೋಜ್ ತಿವಾರಿ, ಪ್ರತಿಕ್ರಿಯಿಸಿದ್ದು "ಜನರು ತಮ್ಮ ಮತ ಚಲಾಯಿಸುವ ಮೂಲಕ ಎನ್‌ಡಿಎಗೆ ಮತ್ತೊಂದು ಅವಕಾಶ ನೀಡುತ್ತಾರೆ ಎಂದು ನನಗೆ ಖಾತ್ರಿಯಿದೆ. ಎನ್‌ಡಿಎ ಮತದಾರರು ಸದ್ದಿಲ್ಲದೇ ಕಮಲದ ಗುರುತಿಗೆ ಮತ ಹಾಕಿ ಬಹುಮತದಿಂದ ಗೆಲ್ಲುಸುತ್ತಾರೆ ಎನ್ನುವ ನಂಬಿಕೆ ನಮಗಿದೆ ಎಂದರು".
ಇನ್ನೂ ಜೆಡಿಯು ನಾಯಕ ಸಂಜಯ್ ಸಿಂಗ್ ಪ್ರತಿಕ್ರಿಯಿಸಿದ್ದು "ಬಿಹಾರದ 12 ಕೋಟಿ ಜನರು ಇಂದು ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನರು ಮಾಲೀಕರು. ನಿತೀಶ್ ಕುಮಾರ್ ಅವರ ಅಭಿವೃದ್ಧಿಗೆ ಮುದ್ರೆ ಹಾಕುವ ಕೆಲಸವನ್ನು ಜನರು ಮಾಡಿದ್ದಾರೆ ಎಂದು ನಾವು ನಂಬುತ್ತೇವೆ. ಇಂದು ಎನ್‌ಡಿಎ ಸರ್ಕಾರ ಮತ್ತೆ ರಚನೆಯಾಗುತ್ತದೆ ಎಂದರು".
"ಆರ್‌ಜೆಡಿ ಮತ್ತು ಕಾಂಗ್ರೆಸ್ ಜನರು ಸಂತೋಷವಾಗಿರಲಿ, ಆದರೆ ಎನ್‌ಡಿಎ ಗೆಲುವು ನಿಶ್ಚಿತ. ನಿತೀಶ್ ಕುಮಾರ್ ಅವರ ನೇತೃತ್ವದಲ್ಲಿ ಬಿಹಾರದ ಜನರು ಮತ್ತೆ ಎನ್‌ಡಿಎ ಸರ್ಕಾರ ರಚಿಸಲಿದ್ದಾರೆ. ಕೊನೆಯ ನಿರ್ಗಮನ ಸಮೀಕ್ಷೆಯನ್ನು ನೋಡಿ ಗ್ರ್ಯಾಂಡ್ ಅಲೈಯನ್ಸ್ ನಾಯಕರು ಸಂತೋಷಗೊಂಡಿದ್ದಾರೆ. ಎನ್‌ಡಿಎ ಗೆಲ್ಲುತ್ತದೆ ಎಂದು ಬಿಜೆಪಿ ನಾಯಕ ಶಹನವಾಜ್ ಹುಸೇನ್ ಹೇಳಿದ್ದಾರೆ.