ಭೋಪಾಲ್( ಮಧ್ಯಪ್ರದೇಶ): ಗಲಾಟೆಯನ್ನು ಪ್ರಶ್ನಿಸಿದಕ್ಕೆ ಪೊಲೀಸನನ್ನೇ ಕಲ್ಲಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ದಾಮೋಹ್ ನಗರದ ಬಜಾರಿಯಾ ವಾರ್ಡ್‌ನ ಕಸಾಪ ಮಂಡಿ ಬಡಾವಣೆಯಲ್ಲಿ ನಡೆದಿದೆ.
ಶುಕ್ರವಾರ ತಡರಾತ್ರಿ ಕರ್ತವ್ಯಕ್ಕೆ ನಿಯೋಜಿಸಲಾದ ಎಸ್‌ಎಎಫ್ ಜವಾನ್ ಸುರೇಂದ್ರ ಸಿಂಗ್ ಅವರು ಊಟ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಪೋಸ್ಟ್‌ನ ಹೊರಗೆ ಕೆಲ ಕಿಡಿಗೇಡಿ ಯುವಕರು ಗಲಾಟೆ ಮಾಡಲು ಪ್ರಾರಂಭಿಸಿದರು. ಹೀಗಾಗಿ ಪೊಲೀಸ್ ಸುರೇಂದ್ರ ಸಿಂಗ್ ಯವಕರಿಗೆ ಗಲಾಟೆ ಮಾಡದಂತೆ ಎಚ್ಚರಿಕೆ ನೀಡಿದ್ದರು. ಇದರಿಂದ ಕೋಪಗೊಂಡ ದುಷ್ಕರ್ಮಿಗಳು ಪೊಲೀಸ್ ಮೇಲೆಯೇ ಕಲ್ಲಿನಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ.
![The miscreants who killed the police](https://etvbharatimages.akamaized.net/etvbharat/prod-images/17297607_thum-mp.jpg)
ಈ ಗಲಾಟೆಯ ಶಬ್ದ ಕೇಳಿದ ಪುರಸಭಾ ಸದಸ್ಯೆ ಕವಿತಾ ರೈ ಹಾಗೂ ಹೊರಠಾಣೆ ಬಳಿ ವಾಸವಿದ್ದ ಇತರ ಜವಾನರು ಬಂದು ನೋಡಿದಾಗ ಸುರೇಂದ್ರ ಸಿಂಗ್ ಗಂಭೀರವಾಗಿ ಗಾಯಗೊಂಡಿರುವುದು ಕಂಡಿದೆ. ತಕ್ಷಣವೇ ಅವರನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಅತಿಯಾದ ರಕ್ತಸ್ರಾವದಿಂದ ಪೊಲೀಸ್ ಮೃತಪಟ್ಟಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಪೊಲೀಸ್ ವರಿಷ್ಠಾಧಿಕಾರಿ ಡಿ.ಆರ್. ತೆನಿವಾರ್ ಈಗಾಗಲೇ ಘಟನಾ ಸ್ಥಳದಲ್ಲಿ ಉದ್ವಿಗ್ನ ವಾತಾವರಣದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇನ್ನು ಪೊಲೀಸ್ ಸುರೇಂದ್ರ ಸಿಂಗ್ ಯುವಕರಿಗೆ ಗಲಾಟೆ ಮಾಡದಂತೆ ನಿರ್ಬಂಧ ಹೇರಿದ ಕಾರಣಕ್ಕೆ ಆರೋಪಿಗಳು ಹಲ್ಲೆ ಮಾಡಿದ್ದಾರೆ. ಸದ್ಯ ಆರೋಪಿಗಳೆಲ್ಲರೂ ತಲೆಮರೆಸಿಕೊಂಡಿದ್ದಾರೆ, ಅವರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದರು.
ದಾಮೋಹ್ನಲ್ಲಿ ಕಾನೂನು ಸುವ್ಯವಸ್ಥೆ ವೈಫಲ್ಯ: ಈ ಭಾಗದ ಪಾಲಿಕೆ ಸದಸ್ಯೆ ಹಾಗೂ ಪ್ರತ್ಯಕ್ಷದರ್ಶಿ ಕವಿತಾ ರೈ ಮಾತನಾಡಿ, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಚೂರಿ ಇರಿತ, ಗುಂಡಿನ ದಾಳಿ ಮತ್ತಿತರ ಘಟನೆಗಳು ಪ್ರತಿದಿನ ನಡೆಯುತ್ತಿವೆ. ಅಪರಾಧ ಎಸಗುವ ಜನರ ಮನಸಲ್ಲಿ ಪೊಲೀಸರ ಬಗ್ಗೆ ಯಾಗಲಿ ಕಾನೂನಿನ ಕುರಿತಾಗಲಿ ಕಿಂಚಿತ್ತು ಭಯವಿಲ್ಲ. ನಮಗೆ ರಕ್ಷಣೆ ಕೊಡಬೇಕಾದ ಪೊಲೀಸ್ರನ್ನೆ ಸಾರ್ವಜನಿಕವಾಗಿ ಕೊಲ್ಲುತ್ತಾರೆ ಎನ್ನುವುದಾದರೆ ಇನ್ನು ನಮ್ಮಂತಹ ಶ್ರೀಸಾಮಾನ್ಯನ ಗತಿಯೇನು ಎಂದು ಸುವ್ಯವಸ್ಥೆ ಕುರಿತು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದ ಅಬ್ರಹಾರ್ ಗ್ಯಾಂಗ್ ಮತ್ತೆ ಆ್ಯಕ್ವಿವ್