ನಾಗೌರ್: ರೈಲ್ವೇ ನಿಲ್ದಾಣದಲ್ಲಿ ಇಬ್ಬರು ವೃದ್ಧ ಭಿಕ್ಷುಕರನ್ನು ಪೊಲೀಸ್ ಪೇದೆಯೊಬ್ಬರು ಕೆಟ್ಟದಾಗಿ ಬೈದು ಥಳಿಸಿರುವ ಘಟನೆಯ ವಿಡಿಯೋ ವೈರಲ್ ಆಗಿದೆ.
ರಾಜಸ್ಥಾನದ ನಾಗೌರ್ ಜಿಲ್ಲೆಯ ಮಕ್ರಾನಾ ರೈಲು ನಿಲ್ದಾಣದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಪೊಲೀಸ್ ಅಧಿಕಾರಿಯನ್ನು ರೈಲ್ವೇಸ್‌ನ ಆರ್‌ಪಿಎಫ್‌ನ ಕಾನ್‌ಸ್ಟೇಬಲ್ ಎಂದು ಗುರುತಿಸಲಾಗಿದೆ.
ಈ ವಿಡಿಯೋ ಸುಮಾರು ಎರಡರಿಂದ ಮೂರು ದಿನಗಳ ಹಳೆಯದಾಗಿದ್ದು, ರೈಲ್ವೇ ನಿಲ್ದಾಣದಲ್ಲಿ ಸಹ ಪ್ರಯಾಣಿಕರು ಚಿತ್ರೀಕರಿಸಿದ್ದಾರೆ.
ವಿಡಿಯೋಗೆ ಪ್ರತಿಕ್ರಿಯಿಸಿದ ಜಿಆರ್‌ಪಿ ಔಟ್‌ಪೋಸ್ಟ್ ಇನ್‌ಚಾರ್ಜ್ ಲಾಲ್‌ಚಂದ್ ಪರೇವಾ, ಭಿಕ್ಷುಕರು ರೈಲ್ವೆ ನಿಲ್ದಾಣದ ಪ್ರಯಾಣಿಕರ ಆಹಾರದ ವಿಷಯದಲ್ಲಿ ತೊಂದರೆ ಉಂಟುಮಾಡುತ್ತಿದ್ದರು ಎಂದಿದ್ದಾರೆ.
ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ