ETV Bharat / bharat

ಮೊಹರಂ ಮೆರವಣಿಗೆ ಚದುರಿಸಲು ಲಾಠಿ - ಅಶ್ರುವಾಯು ಪ್ರಯೋಗ: ಶ್ರೀನಗರದಲ್ಲಿ ಹಲವರು ವಶಕ್ಕೆ - ಶ್ರೀನಗರದಲ್ಲಿ ಶಿಯಾ ಮುಸ್ಲಿಮರು ವಶಕ್ಕೆ

ಮೊಹರಂ ನಿಮಿತ್ತ ಮೆರವಣಿಗೆ ನಡೆಸುತ್ತಿದ್ದ ಶಿಯಾ ಮುಸ್ಲಿಮರನ್ನು ಚದುರಿಸಲು ಕಾಶ್ಮೀರ ಪೊಲೀಸರು ಲಾಠಿ ಮತ್ತು ಅಶ್ರುವಾಯು ಪ್ರಯೋಗಿಸಿದ್ದಾರೆ.

Police used batons and tear gas to disperse the Moharram  procession in Srinagar
ಮೊಹರಂ ಮೆರವಣಿಗೆ ಚದುರಿಸಲು ಲಾಠಿ-ಅಶ್ರುವಾಯು ಪ್ರಯೋಗ
author img

By

Published : Aug 17, 2021, 7:41 PM IST

ಶ್ರೀನಗರ (ಜಮ್ಮು-ಕಾಶ್ಮೀರ): ಮೊಹರಂ ತಿಂಗಳು ಆರಂಭವಾಗಿದ್ದು, ಈ ಪ್ರಯುಕ್ತ ಮೆರವಣಿಗೆ ನಡೆಸುತ್ತಿದ್ದ ಶಿಯಾ ಮುಸ್ಲಿಮರನ್ನು ಚದುರಿಸಲು ಕಾಶ್ಮೀರ ಪೊಲೀಸರು ಲಾಠಿ ಮತ್ತು ಅಶ್ರುವಾಯು ಪ್ರಯೋಗಿಸಿದ್ದಾರೆ. ಅಲ್ಲದೇ ಈ ವೇಳೆ 10ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ.

ಕೋವಿಡ್​ನಿಂದಾಗಿ ಮೆರವಣಿಗೆಗಳನ್ನು ನಿಷೇಧಿಸಲಾಗಿದ್ದರೂ ನೂರಾರು ಮುಸ್ಲಿಮರು ಧಾರ್ಮಿಕ ಮತ್ತು ಸ್ವಾತಂತ್ರ್ಯ ಪರ ಘೋಷಣೆಗಳನ್ನು ಕೂಗುತ್ತಾ ಶ್ರೀನಗರದದಲ್ಲಿ ರಸ್ತೆಗಿಳಿದಿದ್ದರು. ಈ ಬಗ್ಗೆ ವರದಿ ಮಾಡುತ್ತಿದ್ದ ಪತ್ರಕರ್ತರಿಗೂ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ ಎಂದು ಹೇಳಲಾಗಿದೆ.

ಮೊಹರಂ ಮೆರವಣಿಗೆ ಚದುರಿಸಲು ಲಾಠಿ-ಅಶ್ರುವಾಯು ಪ್ರಯೋಗ

"ನಾವು ಎಲ್ಲರ ಧಾರ್ಮಿಕ ಭಾವನೆಗಳನ್ನು ಮತ್ತು ಆಚರಣೆಗಳನ್ನು ಗೌರವಿಸುತ್ತೇವೆ. ಆದರೆ, ಶಾಂತಿಯುತ ವಾತಾವರಣವನ್ನು ಕೆಡಿಸಲು ಪ್ರಯತ್ನಿಸುವವರನ್ನು ತಡೆಯುವುದು ಕೂಡ ನಮ್ಮ ಜವಾಬ್ದಾರಿಯಾಗಿದೆ" ಎಂದು ಕಾಶ್ಮೀರ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ವಿಜಯ್ ಕುಮಾರ್ ತಿಳಿಸಿದ್ದಾರೆ.

ಮೊಹರಂ, ಇದು ವಿಶ್ವದಾದ್ಯಂತ ಶಿಯಾ ಮುಸ್ಲಿಮರ ಪವಿತ್ರ ತಿಂಗಳುಗಳಲ್ಲಿ ಒಂದಾಗಿದೆ. ಪ್ರವಾದಿ ಮುಹಮ್ಮದ್ ಪೈಗಂಬರ್​ ಅವರ ಮೊಮ್ಮಗನ ಸಾವಿಗೆ ಸಂತಾಪ ಸೂಚಿಸಲು ಮುಸ್ಲಿಮರು ಈ ತಿಂಗಳಲ್ಲಿ ದೊಡ್ಡ ದೊಡ್ಡ ಮೆರವಣಿಗೆಗಳನ್ನು ನಡೆಸುತ್ತಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.