ETV Bharat / bharat

ಪಂಚತಾರಾ ಹೋಟೆಲ್​​ ನಾಚಿಸುವಂತಿರುವ ಪೊಲೀಸ್​ ಠಾಣೆ: ಇರೋದೆಲ್ಲಿ ಗೊತ್ತೇ? - ಪೊಲೀಸ್​ ಠಾಣೆಗೆ ಪಂಚತಾರಾ ಹೋಟೆಲ್​ ಟಚ್

ಕೇರಳದ ಕಾಸರಗೋಡು ಜಿಲ್ಲೆಯ ಬೇಕಲ್ ಪೊಲೀಸ್ ಠಾಣೆಗೆ ಪಂಚತಾರಾ ಹೋಟೆಲ್​ನ ಟಚ್​ ನೀಡಲಾಗಿದೆ. ಈ ನವೀಕರಣ ಕಾಮಗಾರಿ 21 ದಿನಗಳಲ್ಲಿ ಪೂರ್ಣಗೊಂಡಿದೆ. ಸರ್ಕಾರಿ ನಿದಿಯಷ್ಟೇ ಅಲ್ಲ, ಪೊಲೀಸರೇ ಹಣ ಹಾಕಿ ಪೊಲೀಸ್​ ಠಾಣೆಗೆ ಹೊಸ ಟಚ್​ ನೀಡಿದ್ದಾರೆ.

Police Station at Bekal, Kasaragod, looks like a five star hotel reception
ಪೊಲೀಸ್​ ಠಾಣೆಗೆ ಪಂಚತಾರಾ ಹೋಟೆಲ್​ ಟಚ್
author img

By

Published : Nov 19, 2020, 10:40 AM IST

ಕಾಸರಗೋಡು: ಕೇರಳದ ಕಾಸರಗೋಡು ಜಿಲ್ಲೆಯ ಬೇಕಲ್ ಪೊಲೀಸ್ ಠಾಣೆ ಭಾರಿ ಬದಲಾವಣೆ ಹೊಂದಿದೆ. ಈ ಠಾಣೆಗೆ ಪಂಚತಾರಾ ಹೋಟೆಲ್​ನ ಕಳೆ ಬಂದಿದೆ. ಇಲ್ಲಿಗೆ ಯಾರಾದರೂ ಭೇಟಿ ನೀಡಿದರೆ, ಅಚ್ಚರಿಗೊಳಗಾಗುವುದರ ಜತೆ ಹಾದಿ ತಪ್ಪಿ ಬಂದಿದೆವಾ ಎಂಬ ಅನುಮಾನ ಕಾಡದಿರದು. ಹಾಗೆ ಬದಲಾಗಿದೆ ಬೇಕಲ್​ ಪೊಲೀಸ್​ ಠಾಣೆ.

ಪೊಲೀಸ್​ ಠಾಣೆಗೆ ಪಂಚತಾರಾ ಹೋಟೆಲ್​ ಟಚ್

ಎಲ್ಲ ರೀತಿಯಿಂದಲೂ ಈ ಠಾಣೆ ಐಶಾರಾಮಿ ಆಗಿ ಕಂಗೊಳಿಸುತ್ತಿದೆ. ಸುಮಾರು 10 ಲಕ್ಷ ರೂ ವೆಚ್ಚದಲ್ಲಿ ಈ ಠಾಣೆಯನ್ನ ಪುನರ್​​ ನಿರ್ಮಾಣ ಮಾಡಲಾಗಿದೆ. ಇಲ್ಲವೇ ಹೊಸ ಟಚ್​ ನೀಡಲಾಗಿದೆ. ಕಾಸರಗೂಡಿನ ತ್ರಿಕ್ಕನತ್ತು ಬೆಸೆಯುವ ರಾಜ್ಯ ಹೆದ್ದಾರಿಯಲ್ಲಿ ಈ ಪೊಲೀಸ್​ ಠಾಣೆ ಇದೆ. ಹೇಗೆಲ್ಲ ಠಾಣೆಗೆ ಹೊಸ ಕಳೆ ತುಂಬಲಾಗಿದೆ ಎಂದರೆ, ಪ್ರವೇಶದ್ವಾರದಿಂದ ಹಿಡಿದು ರೆಸ್ಟ್​ ರೂಂವರೆಗೂ ಮಾರ್ಪಾಡುಗಳಾಗಿವೆ.

ಪೀಠೋಪಕರಣಗಳು, ದೀಪಗಳನ್ನು ಅಲಂಕರಿಸುವ ಮೂಲಕ ಹೊಸ ರೂಪ ನೀಡಲಾಗಿದೆ. ತಮ್ಮ ದೂರುಗಳನ್ನು ಸಲ್ಲಿಸಲು ಪೊಲೀಸ್​ ಠಾಣೆಗೆ ಬರುವ ದೂರುದಾರರಿಗೆ ಕುಳಿತುಕೊಳ್ಳಲು ವ್ಯವಸ್ಥಿತ ಲಾಂಜ್​ಗಳನ್ನ ನಿರ್ಮಾಣ ಮಾಡಲಾಗಿದೆ. ಈ ನವೀಕರಣ ಕಾಮಗಾರಿ 21 ದಿನಗಳಲ್ಲಿ ಪೂರ್ಣಗೊಂಡಿದೆ. ಸರ್ಕಾರಿ ನಿದಿಯಷ್ಟೇ ಅಲ್ಲ, ಪೊಲೀಸರೇ ಹಣ ಹಾಕಿ ಪೊಲೀಸ್​ ಠಾಣೆಗೆ ಹೊಸ ಟಚ್​ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.