ETV Bharat / bharat

ಶಬರಿಮಲೆ ಯಾತ್ರೆ; ಭಕ್ತರ ಹಿತದೃಷ್ಟಿಯಿಂದ ಭಾರಿ ಪೊಲೀಸ್​ ಭದ್ರತೆ

Sabarimala yatra: ಶಬರಿಮಲೆಯಲ್ಲಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆಯಲು ಆಗಮಿಸುವ ಭಕ್ತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕೇರಳ ಪೊಲೀಸ್ ಇಲಾಖೆ ಹೆಚ್ಚಿನ ಭದ್ರತೆ ಕೈಗೊಂಡಿದೆ.

ಶಬರಿಮಲೆಯಲ್ಲಿ ಪೊಲೀಸ್​ ಭದ್ರತೆ ನಿಯೋಜನೆ
ಶಬರಿಮಲೆಯಲ್ಲಿ ಪೊಲೀಸ್​ ಭದ್ರತೆ ನಿಯೋಜನೆ
author img

By PTI

Published : Nov 16, 2023, 12:46 PM IST

Updated : Nov 16, 2023, 12:58 PM IST

ಪತ್ತನಂತಿಟ್ಟ(ಕೇರಳ) : ಎರಡು ತಿಂಗಳ ವಾರ್ಷಿಕ ಮಂಡಲಂ-ಮಕರವಿಳಕ್ಕು ತೀರ್ಥಯಾತ್ರೆಗಾಗಿ ದಕ್ಷಿಣ ಭಾರತ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾದ ಶಬರಿಮಲೆಯ ಶ್ರೀ ಅಯ್ಯಪ್ಪ ದೇವಾಲಯದ ಬಾಗಿಲು ಇಂದು ತೆರೆಯಲಿದೆ. ವೃಶ್ಚಿಕ ಮಾಸದ ಮೊದಲ ದಿನವಾದ ನಾಳೆ (ನ. 17) ಶಬರಿಮಲೆ ಯಾತ್ರೆ ಆರಂಭವಾಗಲಿದೆ. ಹೀಗಾಗಿ ಸ್ವಾಮಿ ಅಯ್ಯಪ್ಪನ ದರ್ಶನ ಪಡೆಯಲು ಬರುವ ಲಕ್ಷಾಂತರ ಭಕ್ತರಿಗೆ ಸುಗಮ, ಸುರಕ್ಷಿತ ಯಾತ್ರೆಗಾಗಿ ಪೊಲೀಸ್​ ಭದ್ರತೆ ನಿಯೋಜನೆ​ ಮಾಡಲಾಗಿದೆ ಎಂದು ಕೇರಳ ರಾಜ್ಯ ಪೊಲೀಸ್ ಮುಖ್ಯಸ್ಥ (ಎಸ್‌ಪಿಸಿ) ಶೇಕ್ ದರ್ವೇಶ್ ಸಾಹೇಬ್ ಅವರು ಮಾಧ್ಯಮಗೋಷ್ಟಿಯಲ್ಲಿ ಮಾಹಿತಿ ನೀಡಿದ್ದಾರೆ.

ಸಿಸಿಟಿವಿ, ಡ್ರೋನ್​ ಕ್ಯಾಮರಾ ಕಣ್ಗಾವಲು: ಒಟ್ಟು ಆರು ಹಂತಗಳಲ್ಲಿ ಸುಮಾರು 13 ಸಾವಿರ ಪೊಲೀಸ್​ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗುವುದು. ಇದರಲ್ಲಿ ವಿಶೇಷ ಸಂವಹನ ತಂಡಗಳು ಕಾರ್ಯ ನಿರ್ವಹಿಸಲಿವೆ. ಅಲ್ಲದೆ, ಎರಡು ತಿಂಗಳ ಕಾಲ ನಡೆಯುವ ತೀರ್ಥೋದ್ಭವದ ಸಂದರ್ಭದಲ್ಲಿ ಮೂರು ತಾತ್ಕಾಲಿಕ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ. ಪ್ರಮುಖ ಕಡೆಗಳಲ್ಲಿ 76 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಅಲ್ಲದೆ ಬೆಟ್ಟದ ಮೇಲಿನ ದೇಗುಲ ಮತ್ತು ಸುತ್ತಮುತ್ತಲಿನ ಭಾಗಗಳಲ್ಲಿ ಭದ್ರತೆಯನ್ನು ಬಲಪಡಿಸಲು ಡ್ರೋನ್‌ಗಳನ್ನು ಹಾರಿಸಲಾಗುವುದು ಎಂದು ಎಸ್‌ಪಿಸಿ ತಿಳಿಸಿದ್ದಾರೆ.

ಇದನ್ನೂ ಓದಿ : ಶಬರಿಮಲೆ ಪ್ರಧಾನ ಅರ್ಚಕರ ಆಯ್ಕೆ ಸಿಂಧು: 'ಲಕ್ಕಿ ಡ್ರಾ' ಆಯ್ಕೆ ರದ್ಧತಿ ಕೋರಿ ಸಲ್ಲಿಸಿದ ಅರ್ಜಿ ವಜಾ

ವರ್ಚುವಲ್ ಕ್ಯೂ ವ್ಯವಸ್ಥೆಯಡಿ 15 ಕೌಂಟರ್‌ಗಳಿದ್ದು, ಅಗತ್ಯವಿದ್ದಲ್ಲಿ ವೃದ್ಧರು, ಮಹಿಳೆಯರು ಮತ್ತು ಮಕ್ಕಳಿಗೆ ಮೀಸಲು ಕೌಂಟರ್‌ಗಳನ್ನು ಸ್ಥಾಪಿಸಲಾಗುವುದು. ಮಕ್ಕಳ ರಕ್ಷಣೆಗಾಗಿ 'ಆರ್ಮ್-ಬ್ಯಾಂಡ್ ಯೋಜನೆ'ಯನ್ನು ಸಹ ಜಾರಿಗೊಳಿಸಲಾಗಿದೆ. ಭಕ್ತರು ಸುಗಮ, ಸುರಕ್ಷಿತ ಮತ್ತು ತ್ವರಿತವಾಗಿ ಅಯ್ಯಪ್ಪನ ದರ್ಶನ ಪಡೆದು ಹಿಂತಿರುಗಲಿ ಎಂಬುದು ಈ ವ್ಯವಸ್ಥೆಯ ಉದ್ದೇಶವಾಗಿದೆ. ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ನಾವು ಈಗಾಗಲೇ ಮಾಡಿಕೊಂಡಿದ್ದೇವೆ ಎಂದು ಎಸ್​ಪಿಸಿ ಅವರು ವಿವರಿಸಿದ್ದಾರೆ.

ವಾಹನಗಳಿಗೆ ಅಲಂಕಾರ ಬೇಡ- ಎಸ್​ಪಿಸಿ; ತೀರ್ಥಯಾತ್ರೆಯ ಮಾರ್ಗದ ಉದ್ದಕ್ಕೂ ಇರುವ ವಿಶ್ರಾಂತಿ ಸ್ಥಳಗಳಲ್ಲಿ ಭಕ್ತಾದಿಗಳಿಗೆ ಪಾರ್ಕಿಂಗ್ ಮತ್ತು ಇತರ ಸೌಲಭ್ಯಗಳನ್ನು ಉಲ್ಲೇಖಿಸಿದ ಎಸ್​ಪಿಸಿ, ಫಾಸ್ಟ್‌ಟ್ಯಾಗ್‌ಗಳನ್ನು ಹೊಂದಿರುವ ಮತ್ತು ಹೆಚ್ಚು ಅಲಂಕರಿಸದ ವಾಹನಗಳಲ್ಲಿ ಭಕ್ತರು ಬರಲು ಮನವಿ ಮಾಡಿದ್ದಾರೆ. ಭಾರಿ ಅಲಂಕೃತ ವಾಹನಗಳ ಸಂಚಾರವನ್ನು ಕೇರಳ ಹೈಕೋರ್ಟ್ ನಿಷೇಧಿಸಿದೆ ಮತ್ತು ತಿರುವಾಂಕೂರು ದೇವಸ್ವಂ ಮಂಡಳಿಯು ಫಾಸ್ಟ್‌ಟ್ಯಾಗ್‌ಗಳನ್ನು ಬಳಸುವ ಪಾರ್ಕಿಂಗ್ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ ಎಂದು ಕೇರಳ ರಾಜ್ಯ ಪೊಲೀಸ್ ಮುಖ್ಯಸ್ಥರು ಹೇಳಿದ್ದಾರೆ.

ಇದನ್ನೂ ಓದಿ : ಶಬರಿಮಲೆ ಯಾತ್ರಾರ್ಥಿಗಳಿಗಾಗಿ 'ಅಯ್ಯನ್​' ಮಾರ್ಗಸೂಚಿ ಆ್ಯಪ್ ಅಭಿವೃದ್ಧಿ: ಕನ್ನಡ ಸೇರಿ ಐದು ಭಾಷೆಗಳಲ್ಲಿ ಲಭ್ಯ

Last Updated : Nov 16, 2023, 12:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.