ETV Bharat / bharat

ನಟಿ ಬಗ್ಗೆ​ ಅವಹೇಳನಕಾರಿ ಪೋಸ್ಟ್​.. ಯುವಕ ಅರೆಸ್ಟ್​ - Actress Manju Warrier

ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್​ಗಳು ಮತ್ತು ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದಕ್ಕಾಗಿ ಯುವಕನೋರ್ವನ ವಿರುದ್ಧ ನಟಿ ಮಂಜು ವಾರಿಯರ್​ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.

Actress Manju Warrier
ನಟಿ ಮಂಜು ವಾರಿಯರ್​
author img

By

Published : May 5, 2022, 2:28 PM IST

ಎರ್ನಾಕುಲಂ(ಕೇರಳ): ನಟಿ ಮಂಜು ವಾರಿಯರ್ ದೂರಿನ ಮೇರೆಗೆ ಯುವಕನೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮಂಜು ವಾರಿಯರ್‌ಗೆ ಅವಹೇಳನಕಾರಿ ಪೋಸ್ಟ್‌ಗಳು ಮತ್ತು ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದಕ್ಕಾಗಿ ಯುವಕನ ವಿರುದ್ಧ ಕೊಚ್ಚಿ ಎಳಮಕ್ಕರ್​ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಆರೋಪಿ ಯುವಕನ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ. ದೂರು ದಾಖಲಾದ ನಂತರ ಪೊಲೀಸರು ಮಂಜು ವಾರಿಯರ್ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಐಟಿ ಕಾಯ್ದೆಯಡಿ ಸಾಮಾಜಿಕ ಜಾಲತಾಣಗಳ ಮೂಲಕ ಮಾನನಷ್ಟ ಮತ್ತು ಬೆದರಿಕೆ ಹಾಕಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ. ಆ ಯುವಕ ಹಲವು ದಿನಗಳಿಂದ ತನಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಮಂಜು ವಾರಿಯರ್ ದೂರಿನಲ್ಲಿ ಆರೋಪಿಸಿದ್ದಾರೆ.

ಆರೋಪಿಯು ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಯುವ ನಿರ್ದೇಶಕನಾಗಿರುವ ಸೂಚನೆಯಿದೆ. ನಟಿಯ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ದೇವರ​​ ದರ್ಶನಕ್ಕೆ ಹೋಗ್ತಿದ್ದ ತನುಶ್ರೀ ದತ್ತಾ ಕಾರು ಅಪಘಾತ.. ಗಾಯದ ಫೋಟೋ ಹಂಚಿಕೊಂಡ ನಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.