ETV Bharat / bharat

ಸಲಿಂಗಿ ಪ್ರೇಮಿಗಳ ಮದುವೆಗೆ ಪೊಲೀಸ್​ ಭದ್ರತೆ.. ಹೈಕೋರ್ಟ್​ ಈ ಆದೇಶ ನೀಡಲು ಕಾರಣವೂ ಇದೆ..

author img

By

Published : Dec 17, 2021, 11:26 AM IST

ಇಬ್ಬರು ಸಲಿಂಗ ಪ್ರೇಮಿ ಯುವಕರ ವಿವಾಹಕ್ಕೆ ಪೊಲೀಸ್ ರಕ್ಷಣೆ ನೀಡುವಂತೆ ಉಧಮ್ ಸಿಂಗ್ ನಗರ ಜಿಲ್ಲೆಯ ಎಸ್‌ಎಸ್‌ಪಿಗೆ ಉತ್ತರಾಖಂಡ ಹೈಕೋರ್ಟ್ ಆದೇಶ ನೀಡಿದೆ. ಪೊಲೀಸ್ ರಕ್ಷಣೆಗೆ ಆಗ್ರಹಿಸಿ ಯುವಕರು ಉತ್ತರಾಖಂಡ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು..

police-protection-for-two-gay-marriage
ಸಲಿಂಗಿ ಪ್ರೇಮಿಗಳ ಮದುವೆ

ನೈನಿತಾಲ್ : ಪೋಷಕರ ವಿರೋಧದ ನಡುವೆ ಮದುವೆಯಾಗಲು ಬಯಸಿದ ಉಧಮ್​ ಸಿಂಗ್​ನ​ ಸಲಿಂಗಿ ಪ್ರೇಮಿಗಳಿಬ್ಬರು ರಕ್ಷಣೆ ಕೋರಿ ಉತ್ತರಾಖಂಡ ಹೈಕೋರ್ಟ್​ ಮೇಟ್ಟಿಲೇರಿದ್ದಾರೆ. ಇಂದು ಈ ಪ್ರಕರಣದ ವಿಚಾರಣೆ ನಡೆಯಿತು.

ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಆರ್​.ಎಸ್​. ಚೌಹಾಣ್​ ಮತ್ತು ನ್ಯಾಯಮೂರ್ತಿ ಎನ್​. ಎಸ್​. ಧನಿಕ್​ ನೇತೃತ್ವದ ವಿಭಾಗೀಯ ಪೀಠ, ರಕ್ಷಣೆ ನೀಡುವಂತೆ ಉಧಮ್ ಸಿಂಗ್ ನಗರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಮತ್ತು ರುದ್ರಪುರದ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಹೆಚ್‌ಒ) ಆದೇಶ ನೀಡಿತು.

police protection for two gay marriage : ಇಬ್ಬರು ಯುವಕರು ಬಹಳ ಸಮಯದಿಂದ ಪರಸ್ಪರ ಪ್ರೀತಿಸುತ್ತಿದ್ದರು ಮತ್ತು ಮದುವೆಯಾಗಲು ಬಯಸಿದ್ದರು. ಆದರೆ, ಕುಟುಂಬ ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಸಲಿಂಗಿ ಜೋಡಿ ಪೊಲೀಸರ ರಕ್ಷಣೆ ಕೋರಿ ಕೋರ್ಟ್​​ಗೆ ಅರ್ಜಿ ಸಲ್ಲಿಸಿತ್ತು. ಇದು ಉತ್ತರಾಖಂಡ ಹೈಕೋರ್ಟ್‌ಗೆ ಬಂದ ಮೊದಲ ಪ್ರಕರಣ. 2017ರ ವರದಿಯನ್ನು ಆಧರಿಸಿ, 25 ದೇಶಗಳು ಸಲಿಂಗ ವಿವಾಹವನ್ನು ಗುರುತಿಸಿವೆ.

2013ರಲ್ಲಿ ದೆಹಲಿ ಹೈಕೋರ್ಟ್ ಸಲಿಂಗಿಗಳ ಮದುವೆಯನ್ನು ಅಪರಾಧ ಎಂದು ಪರಿಗಣಿಸಿತ್ತು. ಆದರೆ, ಸುಪ್ರೀಂಕೋರ್ಟ್ ಆದೇಶವನ್ನು ರದ್ದುಗೊಳಿಸಿತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯ ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿತ್ತು. ಮಾನವನ ಬದುಕುವ ಹಕ್ಕಿಗೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದು ತಿಳಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.