ETV Bharat / bharat

ಲೈವ್​ ವಿಡಿಯೋ: ಯುವತಿಯರಿಬ್ಬರ ಮೇಲೆ ಕಾರು ಹರಿಸಿದ ಇನ್ಸ್​​ಪೆಕ್ಟರ್​, ಒಬ್ಬಳ ಸಾವು - ಯುವತಿಯರ ಮೇಲೆ ಕಾರು ಹರಿಸಿದ ಇನ್ಸ್​ಪೆಕ್ಟರ್

ರಸ್ತೆ ದಾಟುತ್ತಿದ್ದ ಇಬ್ಬರು ಯುವತಿಯರ ಮೇಲೆ ಇನ್ಸ್​ಪೆಕ್ಟರ್ ಕಾರು ಹರಿದು ಹೋಗಿರುವ ಪರಿಣಾಮ ಓರ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಭೀಕರ ಘಟನೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ.

Police Officer Car Runs
Police Officer Car Runs
author img

By

Published : Oct 18, 2021, 5:38 PM IST

Updated : Oct 18, 2021, 8:08 PM IST

ಜಲಂಧರ್(ಪಂಜಾಬ್) : ರಸ್ತೆ ದಾಟಲು ಕಾಯುತ್ತಿದ್ದ ಸಂದರ್ಭದಲ್ಲಿ ಇಬ್ಬರು ಯುವತಿಯರ ಮೇಲೆ ಪೊಲೀಸ್​ ಇನ್ಸ್​​ಪೆಕ್ಟರ್​ ಕಾರು ಹರಿಸಿಕೊಂಡು ಹೋಗಿರುವ ಘಟನೆ ನಡೆದಿದ್ದು, ಇದರ ಸಂಪೂರ್ಣ ದೃಶ್ಯಾವಳಿ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಯುವತಿಯರಿಬ್ಬರ ಮೇಲೆ ಕಾರು ಹರಿಸಿದ ಇನ್ಸ್​​ಪೆಕ್ಟರ್

ಇದನ್ನೂ ಓದಿರಿ: ರಂಜಿತ್ ಸಿಂಗ್ ಕೊಲೆ ಪ್ರಕರಣ : ರಾಮ್​ ರಹೀಮ್​ ಸೇರಿ ಐವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಪಂಜಾಬ್​ನ ಜಲಂಧರ್​ನಲ್ಲಿ ಈ ಘಟನೆ ನಡೆದಿದ್ದು, ಘಟನೆಯಿಂದ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ರಸ್ತೆ ದಾಟಲು ಯುವತಿಯರಿಬ್ಬರು ರಸ್ತೆ ವಿಭಾಜಕದ ಪಕ್ಕದಲ್ಲಿ ನಿಂತುಕೊಂಡಿದ್ದರು.

ಈ ವೇಳೆ, ರಭಸವಾಗಿ ಕಾರು ಚಾಲನೆ ಮಾಡಿಕೊಂಡು ಬಂದಿರುವ ಇನ್ಸ್​​ಪೆಕ್ಟರ್​ ಅಮೃತ್ ಪಾಲ್​ ಸಿಂಗ್​, ಇಬ್ಬರು ಯುವತಿಯರಿಗೆ ಡಿಕ್ಕಿ ಹೊಡೆಸಿ ಅವರ ಮೇಲೆಯೇ ಚಲಾಯಿಸಿ ಪರಾರಿಯಾಗಿದ್ದಾನೆ. ಇದರ ವಿಡಿಯೋ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಇಂದು ಬೆಳಗ್ಗೆ 8:30ರ ಸುಮಾರಿಗೆ ಈ ಘಟನೆ ನಡೆದಿದೆ. ಯುವತಿಯರಿಗೆ ಕಾರು ಗುದ್ದಿಸಿರುವ ಇನ್ಸ್​ಪೆಕ್ಟರ್​ ತಂದನಂತರ ಕಾರು ನಿಲ್ಲಿಸದೇ ಸ್ಥಳದಿಂದ ಪರಾರಿಯಾಗಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಎಸಿಪಿ ಬಲವೀಂದರ್ ಸಿಂಗ್​​, ಈಗಾಗಲೇ ಆರೋಪಿಯ ಬಂಧನ ಮಾಡಲಾಗಿದ್ದು, ಕಾನೂನಿನ ಪ್ರಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

Last Updated : Oct 18, 2021, 8:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.