ಫುಲ್ಬಾನಿ(ಒಡಿಶಾ): ಕೆಲ ದಿನಗಳ ಹಿಂದಷ್ಟೇ ಛತ್ತೀಸ್ಗಢದ ಬಿಜಾಪುರ ಗಡಿಯಲ್ಲಿ 22 ಯೋಧರ ಬಲಿ ಪಡೆದಿರುವ ನಕ್ಸಲರು ಒಡಿಶಾದ ಕಂದಮಲ್ ಜಿಲ್ಲೆಯಲ್ಲಿ ಇದೀಗ ಬಾಲ ಬಿಚ್ಚಿದ್ದಾರೆ.
ಇಲ್ಲಿನ ಗೊಚ್ಚಾಡ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲಂಪಾರಾ ಗ್ರಾಮದಲ್ಲಿ ನಕ್ಸಲ್ ನಿಗ್ರಹ ಪಡೆ, ನಕ್ಸಲರ ನೆಲೆಗಳ ಮೇಲೆ ದಾಳಿ ಮಾಡಿತು. ಈ ವೇಳೆ ನಕ್ಸಲ್ ನಿಗ್ರಹ ಪಡೆ ಮತ್ತು ನಕ್ಸಲರ ಮಧ್ಯ ಗುಂಡಿನ ಚಕಮಕಿ ನಡೆದಿದೆ.
ಘಟನೆಯಲ್ಲಿ ಯಾವುದೇ ಸಾವು ನೋವಿನ ವರದಿಯಾಗಿಲ್ಲ. ಆದರೆ ಮೋಯಿಸ್ಟ್ ಕ್ಯಾಂಪ್ನಿಂದ ಹಲವು ಸಾಮಗ್ರಿಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಖಚಿತ ಸುಳಿವಿನ ಮೇಲೆ ಈ ಭಾಗದಲ್ಲಿ ನಕ್ಸಲ್ ನಿಗ್ರಹ ಪಡೆ ಹಾಗೂ ಪೊಲೀಸರ ಜಂಟಿ ತಂಡ ಏಪ್ರಿಲ್ ನಾಲ್ಕರಿಂದಲೇ ಕಾರ್ಯಾಚರಣೆ ನಡೆಸುತ್ತಿತ್ತು ಎನ್ನಲಾಗಿದೆ. ಏಪ್ರಿಲ್ ಐದರಂದು ನಕ್ಸಲ್ ನಿಗ್ರಹ ಪಡೆ ಕಾರ್ಯಾಚರಣೆ ಮಾಡುತ್ತಿದ್ದಾಗ ನಕ್ಸಲರು ಗುಂಡಿನ ದಾಳಿ ನಡೆಸಿದ್ದರು. ನಕ್ಸಲರನ್ನು ಸುತ್ತುವರೆದ ಪೊಲೀಸ್ ಪಡೆ ಶರಣಾಗತಿ ಆಗುವಂತೆ ಮನವಿ ಮಾಡಿತ್ತು. ಆದರೆ, ಇದಕ್ಕೆ ಬಗ್ಗದ ಮಾವೋಯಿಸ್ಟ್ಗಳು ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಸ್ವಯಂ ರಕ್ಷಣೆ ಮಾಡಿಕೊಂಡರು.
ಈ ವೇಳೆ ನಕ್ಸಲರು ತಪ್ಪಿಸಿಕೊಂಡು ಕಣ್ಮರೆಯಾಗಿದ್ದಾರೆ. ಅವರಿಗಾಗಿ ಜಂಟಿ ಕಾರ್ಯಪಡೆ ಹುಟುಕಾಟ ನಡೆಸಿದೆ.