ನವದೆಹಲಿ : ಬರೋಬ್ಬರಿ 11 ಸಲ ಕೋವಿಡ್ ಲಸಿಕೆ ತೆಗೆದುಕೊಂಡ ಬಿಹಾರದ 84 ವರ್ಷದ ವೃದ್ಧನ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಬಿಹಾರದ ಮಾಧೇಪುರ ಜಿಲ್ಲೆಯ ಉದಕಿಶುಂಗಂಜ್ನ ಓರೈ ಗ್ರಾಮದಲ್ಲಿ ವಾಸವಾಗಿರುವ ಬ್ರಹ್ಮದೇವ್ ಮಂಡಲ್ ಎಂಬುವರು 11 ಸಲ ಕೋವಿಡ್ ವ್ಯಾಕ್ಸಿನ್ ಪಡೆದಿದ್ದಾರೆ. 12ನೇ ಸಲ ವ್ಯಾಕ್ಸಿನ್ ಪಡೆದುಕೊಳ್ಳಲು ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ.
ಇದಕ್ಕೆ ಸಂಬಂಧ ಪಟ್ಟಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿ ಪುರೈನಿ ಎಂಬುವರು ದೂರು ನೀಡಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
-
Bihar | Police lodged an FIR against Brahamdev Mandal for claiming that he has taken 11 doses of the Covid vaccine. Primary Health Care (PHC) Puraini had registered a complaint against Brahamdev Mandal. The investigation is underway: Puraini SHO https://t.co/sEL3ol2FPW
— ANI (@ANI) January 9, 2022 " class="align-text-top noRightClick twitterSection" data="
">Bihar | Police lodged an FIR against Brahamdev Mandal for claiming that he has taken 11 doses of the Covid vaccine. Primary Health Care (PHC) Puraini had registered a complaint against Brahamdev Mandal. The investigation is underway: Puraini SHO https://t.co/sEL3ol2FPW
— ANI (@ANI) January 9, 2022Bihar | Police lodged an FIR against Brahamdev Mandal for claiming that he has taken 11 doses of the Covid vaccine. Primary Health Care (PHC) Puraini had registered a complaint against Brahamdev Mandal. The investigation is underway: Puraini SHO https://t.co/sEL3ol2FPW
— ANI (@ANI) January 9, 2022
ಬ್ರಹ್ಮದೇವ್ ಅವರು ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. ಕಳೆದ ಫೆಬ್ರವರಿ 13ರಂದು ಮೊದಲ ಡೋಸ್ ವ್ಯಾಕ್ಸಿನ್ ಪಡೆದಿರುವ ಇವರು, ತದನಂತರ ಡಿಸೆಂಬರ್ 30ರವರೆಗೆ ಬೇರೆ ಬೇರೆ ಸ್ಥಳಗಳಲ್ಲಿ ಒಟ್ಟು 11 ಸಲ ವ್ಯಾಕ್ಸಿನ್ ಡೋಸ್ ಪಡೆದುಕೊಂಡಿದ್ದಾರೆ.
ಪ್ರತಿ ಸಲ ವ್ಯಾಕ್ಸಿನ್ ಪಡೆದುಕೊಂಡಿರುವ ದಿನಾಂಕವನ್ನು ಕಾಗದದಲ್ಲಿ ಬರೆದಿಟ್ಟಿದ್ದಾರೆ. ವ್ಯಾಕ್ಸಿನ್ ತೆಗೆದುಕೊಂಡ ನಂತರ ತಮಗೆ ಸಾಕಷ್ಟು ಲಾಭವಾಗಿದೆ ಎಂದು ಹೇಳುವ ಅವರು, ಇದೇ ಕಾರಣಕ್ಕಾಗಿ ಇಷ್ಟೊಂದು ಸಲ ವ್ಯಾಕ್ಸಿನ್ ಪಡೆದುಕೊಂಡೆ ಎಂದಿದ್ದಾರೆ.