ETV Bharat / bharat

ಸೊಸೆ, ಮಗ, ತಂದೆಯಿಂದ ನಡೀತಿತ್ತು ಹೈಟೆಕ್​ ವೇಶ್ಯಾವಾಟಿಕೆ.. ದಂಧೆಗೆ ಬರುತ್ತಿದ್ದರು ಮಹಾರಾಷ್ಟ್ರ ಕಾಲ್​ ಗರ್ಲ್ಸ್​ - ಸೊಸೆ ಮಗ ತಂದೆಯಿಂದ ನಡೀತಿತ್ತು ಹೈಟೆಕ್​ ವೇಶ್ಯಾವಾಟಿಕೆ

ಮಧ್ಯಪ್ರದೇಶದಲ್ಲಿ ಹೈಟೆಕ್​ ವೇಶ್ಯಾವಾಟಿಕೆ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ವೇಶ್ಯಾವಾಟಿಕೆ ದಂಧೆ ಭೇದಿಸಿದ ಜಬಲ್‌ಪುರ ಪೊಲೀಸರು ತಂದೆ, ಮಗ, ಸೊಸೆ ಸೇರಿದಂತೆ 10 ಮಂದಿಯನ್ನು ಬಂಧಿಸಿದ್ದಾರೆ.

Jabalpur sex racket  Police exposed Jabalpur sex racket  Madhya Pradesh crime news  Madhya Pradesh Sex Racket exposes  ಮಧ್ಯಪ್ರದೇಶದಲ್ಲಿ ಹೈಟೆಕ್​ ವೇಶ್ಯಾವಾಟಿಕೆ ವಿರುದ್ಧ ಪೊಲೀಸರು ಕ್ರಮ  ದಂಧೆಗೆ ಬರುತ್ತಿದ್ದರು ಮಹಾರಾಷ್ಟ್ರ ಕಾಲ್​ ಗರ್ಲ್ಸ್  ಪೊಲೀಸರ ವಿಚಾರಣೆಯಲ್ಲಿ ಬಾಯ್ಬಿಟ್ಟ ಆರೋಪಿ  ಗೋರಖ್‌ಪುರ ಪೊಲೀಸ್​ ಅಧಿಕಾರಿ ಪ್ರತಿಷ್ಠಾ ರಾಥೋಡ್​ ಹೇಳಿಕೆ  ಹೈಟೆಕ್​ ವೇಶ್ಯಾವಾಟಿಕೆ ಭೇದಿಸಿದ ಪೊಲೀಸರು  ಸೊಸೆ ಮಗ ತಂದೆಯಿಂದ ನಡೀತಿತ್ತು ಹೈಟೆಕ್​ ವೇಶ್ಯಾವಾಟಿಕೆ  ವೇಶ್ಯಾವಾಟಿಕೆ ದಂಧೆ ಭೇದಿಸಿದ ಜಬಲ್‌ಪುರ ಪೊಲೀಸರು
ಸೊಸೆ ಮಗ ತಂದೆಯಿಂದ ನಡೀತಿತ್ತು ಹೈಟೆಕ್​ ವೇಶ್ಯಾವಾಟಿಕೆ
author img

By

Published : Aug 18, 2022, 10:40 AM IST

ಜಬಲ್ಪುರ, ಮಧ್ಯಪ್ರದೇಶ: ಜಸುಜಾ ನಗರದ ಧನ್ವಂತ್ರಿ ನಗರದ ಮನೆಯೊಂದರ ಮೇಲೆ ಮಂಗಳವಾರ ರಾತ್ರಿ ದಾಳಿ ನಡೆಸಿ ಸಂಜೀವನಿ ನಗರ ಠಾಣೆಯ ಪೊಲೀಸರು ವೇಶ್ಯಾವಾಟಿಕೆ ದಂಧೆ ಭೇದಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ, ಮಗ, ಸೊಸೆ ಸೇರಿದಂತೆ ಒಟ್ಟು 10 ಮಂದಿಯನ್ನು ಪೊಲೀಸರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸೊಸೆ ಮಗ ತಂದೆಯಿಂದ ನಡೀತಿತ್ತು ಹೈಟೆಕ್​ ವೇಶ್ಯಾವಾಟಿಕೆ: ಗೋರಖ್‌ಪುರ ಪೊಲೀಸ್​ ಅಧಿಕಾರಿ ಪ್ರತಿಷ್ಠಾ ರಾಥೋಡ್​ ಹೇಳಿಕೆ ಪ್ರಕಾರ, ಧನ್ವಂತ್ರಿ ನಗರದ ಜಸುಜಾ ಸಿಟಿಯ ಮನೆಯೊಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವುದರ ಬಗ್ಗೆ ನಮಗೆ ಮಾಹಿತಿ ಬಂದಿತ್ತು. ಈ ಪ್ರಕರಣ ಭೇದಿಸಲು ನಾವು ನಮ್ಮ ಪೊಲೀಸ್​ ಸಿಬ್ಬಂದಿಯೊಬ್ಬರನ್ನು ಗ್ರಾಹಕರನ್ನಾಗಿ ಕಳುಹಿಸಿದ್ದೆವು. ಈ ವೇಳೆ, ಪೊಲೀಸ್​ ಸಿಬ್ಬಂದಿ ಮನೆಯೊಳಗೆ ಹೋದಾಗ, ಹಾಸಿಗೆಯಲ್ಲಿ ಆರೋಪಿ ಕೃಷ್ಣ ಕುಮಾರ್ ದುಬೆ, ಅವರ ಮಗ ಸುನೀಲ್ ಕುಮಾರ್ ದುಬೆ, ಸೊಸೆ ಮತ್ತು ಇತರ ಮೂವರು ಅವರೊಂದಿಗೆ ಕುಳಿತಿದ್ದರು ಎಂದರು.

ಸಾವಿರ ರೂಪಾಯಿಗೆ ಯುವತಿ ಫಿಕ್ಸ್​: ಕೃಷ್ಣ ಕುಮಾರ್​ ದುಬೆ ಜೊತೆ ಪೊಲೀಸ್​ ಸಿಬ್ಬಂದಿ ವ್ಯವಹಾರ ಕುದಿಸಿದ್ದಾರೆ. ಸಾವಿರ ರೂಪಾಯಿಗೆ ಯುವತಿ ಫಿಕ್ಸ್​ ಆಗಿದ್ದಳು. ಬಳಿಕ ಪೊಲೀಸ್​ ಸಿಬ್ಬಂದಿಗೆ ಕೋಣೆಯೊಳಗೆ ಹೋಗುವಂತೆ ಸೂಚಿಸಿದ್ದಾರೆ. ಯೋಜನೆ ಪ್ರಕಾರ ಪೊಲೀಸ್​ ಸಿಬ್ಬಂದಿ ರೂಂನೊಳಗೆ ಹೋದಾಗ ತಮ್ಮ ಜೊತೆಗೆ ಬಂದಿದ್ದ ಪೊಲೀಸ್​ ತಂಡಕ್ಕೆ ಕರೆ ಮಾಡಿದ್ದಾರೆ. ಸುದ್ದಿ ತಿಳಿದ ತಂಡವು ತಕ್ಷಣವೇ ದಾಳಿ ಮಾಡಿದೆ. ಈ ವೇಳೆ ಇಬ್ಬರು ಹುಡುಗಿಯರು ಮತ್ತು ಇಬ್ಬರು ಯುವಕರು ವಿವಿಧ ಕೊಠಡಿಗಳಲ್ಲಿ ಆಕ್ಷೇಪಾರ್ಹ ಸ್ಥಿತಿಯಲ್ಲಿ ಕಂಡು ಬಂದಿದ್ದು, ಅವರನ್ನು ವಶಕ್ಕೆ ಪಡೆಯಲಾಗಿದೆ.

ಓದಿ: ಮಂಗಳೂರಿನಲ್ಲಿ ಹೈಟೆಕ್​ ವೇಶ್ಯಾವಾಟಿಕೆ ದಂಧೆ: ಕಾಲೇಜು ವಿದ್ಯಾರ್ಥಿನಿಯರು ಸೇರಿ ನಾಲ್ವರು ಯುವತಿಯರ ರಕ್ಷಣೆ

ವೇಶ್ಯಾವಾಟಿಕೆ ದಂಧೆಗೆ ಬರುತ್ತಿದ್ದರು ಮಹಾರಾಷ್ಟ್ರ ಕಾಲ್​ ಗರ್ಲ್ಸ್​​: ದಾಳಿ ವೇಳೆ ವಶಕ್ಕೆ ಪಡೆದ ಯುವತಿಯರು ಮಹಾರಾಷ್ಟ್ರದ ಮುಂಬೈ ಮತ್ತು ನಾಗ್ಪುರ ನಿವಾಸಿಗಳಾಗಿದ್ದಾರೆ. ಅವರನ್ನು ವೇಶ್ಯಾವಾಟಿಕೆಗಾಗಿ ಮಹಾರಾಷ್ಟ್ರದಿಂದ ಜಬಲ್ಪುರಕ್ಕೆ ಕರೆಸಲಾಗಿತ್ತು. ದಾಳಿ ಬಳಿಕೆ ಪೊಲೀಸರು ಇಡೀ ಮನೆಯನ್ನು ಪರಿಶೀಲನೆ ನಡೆಸಿದರು. ಆರೋಪಿಗಳಿಗೆ ಹುಡುಕಾಟ ನಡೆಸುತ್ತಿರುವಾಗ ಎರಡು ಸಾವಿರ ರೂಪಾಯಿ ನಗದು ಸಿಕ್ಕಿದ್ದು, ಅದರಲ್ಲಿ ತಲಾ ಐದು ನೂರರ ಎರಡು ಸಹಿ ಇರುವ ನೋಟುಗಳು ಪತ್ತೆಯಾಗಿವೆ.

ಪೊಲೀಸರ ವಿಚಾರಣೆಯಲ್ಲಿ ಬಾಯ್ಬಿಟ್ಟ ಆರೋಪಿ ಸೊಸೆ: ಆರೋಪಿ ಸೊಸೆ ಗ್ರಾಹಕರಿಂದ ಆನ್‌ಲೈನ್ ಪಾವತಿ ತೆಗೆದುಕೊಳ್ಳುತ್ತಿದ್ದರು. ಸದ್ಯ ಪೊಲೀಸರು ಸೊಸೆಯ ಮೊಬೈಲ್ ಜಪ್ತಿ ಮಾಡಿದ್ದು, ಆನ್ ಲೈನ್ ಪಾವತಿ ದಾಖಲೆಗಳ ಮೂಲಕ ಇತರ ಗ್ರಾಹಕರನ್ನು ತಲುಪಲು ಯತ್ನಿಸುತ್ತಿದ್ದಾರೆ. ಪೊಲೀಸರು ಎಲ್ಲ ಆರೋಪಿಗಳ ವಿರುದ್ಧ ಅನೈತಿಕ ವೇಶ್ಯಾವಾಟಿಕೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ಈ ವೇಶ್ಯಾವಾಟಿಕೆ ದಂಧೆ ಪ್ರಕರಣ ಸಂಜೀವನಿ ನಗರ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

ಓದಿ: ಕುಡಿದ ಮತ್ತಿನಲ್ಲಿ ಮಹಿಳೆಯರ ಕಿತ್ತಾಟ, ವೇಶ್ಯಾವಾಟಿಕೆ ವಿಚಾರಕ್ಕೆ ಜಗಳ ಶಂಕೆ.. ವಿಡಿಯೋ ವೈರಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.