ETV Bharat / bharat

ಕಳ್ಳ ಬೆಕ್ಕಿನಂತೆ ಬಂದು ಹಣ್ಣಿನ ಬಾಕ್ಸ್​ ಕದ್ದು ಪರಾರಿಯಾದ ಪೊಲೀಸಪ್ಪ.. ವಿಡಿಯೋ!

ರಕ್ಷಣೆ ಮಾಡಬೇಕಾದ ಪೊಲೀಸ್​ನೊಬ್ಬ ಭಕ್ಷಕನಾಗಿ ನಡೆದುಕೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

police constable stealing fruit box
police constable stealing fruit box
author img

By

Published : Apr 23, 2021, 6:48 PM IST

ಬಿಜ್ನೋರ್​(ಉತ್ತರ ಪ್ರದೇಶ): ಕಳ್ಳ ಬೆಕ್ಕಿನಂತೆ ಬಂದ ಪೊಲೀಸ್​ ಪೇದೆಯೊಬ್ಬ ಹಣ್ಣಿನ ಬಾಕ್ಸ್​ ಎತ್ತಿಕೊಂಡು ಹೋಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಇದರ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಹಣ್ಣಿನ ಬಾಕ್ಸ್​ ಕದ್ದ ಪೊಲೀಸ್ ಪೇದೆ

ಬಿಜ್ನೋರ್​​ ಹಣ್ಣಿನ ಮಾರುಕಟ್ಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್​ ಪೇದೆ ಸೇಬು ಹಣ್ಣಿನ ಪೆಟ್ಟಿಗೆ ಕದಿದ್ದು, ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಇದಾದ ಬಳಿಕ ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋ ವೈರಲ್​ ಆಗುತ್ತಿದ್ದಂತೆ ಆತನ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ: ಕೊರೊನಾ ಗೆದ್ದ ಸೋನು ಸೂದ್​: ಕೋವಿಡ್​ ಸೋಂಕಿತೆಯನ್ನು ನಾಗ್ಪುರ​ದಿಂದ ಹೈದರಾಬಾದ್​ಗೆ ಏರ್​ಲಿಫ್ಟ್ ಮಾಡಿಸಿದ ನಟ​!

ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಎಸ್​​ಪಿ ಧರ್ಮವೀರ್​ ಸಿಂಗ್​, ಹಣ್ಣಿನ ಮಾರುಕಟ್ಟೆಯಲ್ಲಿ ಅಂಗಡಿಯಿಂದ ಪೊಲೀಸ್​ ಪೇದೆ ಸೇಬು ಪೆಟ್ಟಿಗೆ ಹೊತ್ತೊಯ್ದಿದ್ದು, ಅದರ ವಿಡಿಯೋ ವೈರಲ್​​ ಆಗಿದೆ. ಕಳ್ಳತನದ ವಿಡಿಯೋ ನೋಡಿದ ನಂತರ ಅಂಗಡಿಯವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಅದರ ಅನ್ವಯ ಆರೋಪಿಯನ್ನ ಅಮಾನತುಗೊಳಿಸಲಾಗಿದೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.