ETV Bharat / bharat

ಜೈಲಿನ ಗೋಡೆ ಒಡೆದು ಪರಾರಿಯಾಗಿದ್ದ ನಕ್ಸಲ್​ ಕಮಾಂಡರ್​ ಬಂಧನ - Delhi

ಈತ ತನ್ನ ಗ್ರಾಮದ ಕೆಲ ಜನರೊಂದಿಗೆ ದ್ವೇಷ ಹೊಂದಿದ್ದ ಹಿನ್ನೆಲೆ ಅವರ ಮೇಲೂ ಗುಂಡು ಹಾರಿಸಿದ್ದಾನೆ. ನಂತರ 26 ಫೆಬ್ರವರಿ 2013 ರಂದು ತನ್ನ ಸಹಚರರೊಂದಿಗೆ ಉದ್ಯಮಿಯೊಬ್ಬರ ಮನೆಗೆ ನುಗ್ಗಿ ಬಂದೂಕು ತೋರಿಸಿ 2 ಲಕ್ಷ ರೂ.ವಸೂಲಿ ಮಾಡಿದ್ದ..

ಜೈಲಿನ ಗೋಡೆ ಹೊಡೆದು ಪರಾರಿಯಾಗಿದ್ದ ನಕ್ಸಲ್​ ಕಮಾಂಡರ್​ ಬಂಧನ

author img

By

Published : Oct 31, 2021, 7:38 PM IST

ನವದೆಹಲಿ : ಪೀಪಲ್ಸ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾ (ಪಿಎಲ್‌ಎಫ್‌ಐ) ಕಮಾಂಡರ್‌ನನ್ನು ದೆಹಲಿಯ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಜಾರ್ಖಂಡ್ ಮತ್ತು ಛತ್ತೀಸ್​​ಗಢದಲ್ಲಿ ನಕ್ಸಲ್ ಸಂಘಟನೆ ಸಕ್ರಿಯವಾಗಿದೆ. ಇದರಲ್ಲಿ ಭಾಗಿಯಾಗಿದ್ದ ಈತ ಕಳೆದ ಏಳು ವರ್ಷಗಳಿಂದ ದೆಹಲಿ, ಪಂಜಾಬ್ ಮತ್ತು ಹರಿಯಾಣದಲ್ಲಿ ತಲೆಮರೆಸಿಕೊಂಡಿದ್ದ. ಅನುರಾಗ್ ರಾಮ್ ಅಲಿಯಾಸ್ ದಲ್ಬೀರ್ ಅಲಿಯಾಸ್ ಕುಂದನ್ ಬಂಧಿತ ಕಮಾಂಡರ್‌.

2014ರಲ್ಲಿ ಜೈಲಿನ ಗೋಡೆಗಳನ್ನು ಭೇದಿಸಿ ಪರಾರಿಯಾಗಿದ್ದ ನಕ್ಸಲ್ ಕಮಾಂಡರ್‌ಗಾಗಿ ಹಲವು ರಾಜ್ಯಗಳ ಪೊಲೀಸರು ಈವರೆಗೂ ತೀವ್ರ ಶೋಧ ನಡೆಸುತ್ತಿದ್ದರು. ಅಕ್ಟೋಬರ್ 29ರಂದು ಸುಳಿವು ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿ ಇನ್ಸ್‌ಪೆಕ್ಟರ್ ನರೇಶ್ ಸೋಲಂಕಿ ನೇತೃತ್ವದಲ್ಲಿ ಈತನನ್ನು ಬಂಧಿಸಿದ್ದಾರೆ.

ಆರೋಪಿ ಅನುರಾಗ್ ವಿಚಾರಣೆ ವೇಳೆ ನಮ್ಮ ಕೃತ್ಯದ ಬಗ್ಗೆ ಬಾಯಿಬಿಟ್ಟಿದ್ದಾನೆ. 2012ರಲ್ಲಿ ನಕ್ಸಲೀಯರ ಗುಂಪಿನ ಪಿಎಲ್‌ಎಫ್‌ಐ ಸದಸ್ಯರೊಂದಿಗೆ ಸಂಪರ್ಕಕ್ಕೆ ಬಂದಿದ್ದು, ಅಲ್ಲಿಂದ ಆಯುಧಗಳನ್ನು ಪಡೆದು ಜನರಿಂದ ಸುಲಿಗೆ ಹಣ ಸಂಗ್ರಹಿಸಲು ಆರಂಭಿಸಿದ್ದಾಗಿ ತಿಳಿಸಿದ್ದಾನೆ.

ಈತ ತನ್ನ ಗ್ರಾಮದ ಕೆಲ ಜನರೊಂದಿಗೆ ದ್ವೇಷ ಹೊಂದಿದ್ದ ಹಿನ್ನೆಲೆ ಅವರ ಮೇಲೂ ಗುಂಡು ಹಾರಿಸಿದ್ದಾನೆ. ನಂತರ 26 ಫೆಬ್ರವರಿ 2013 ರಂದು ತನ್ನ ಸಹಚರರೊಂದಿಗೆ ಉದ್ಯಮಿಯೊಬ್ಬರ ಮನೆಗೆ ನುಗ್ಗಿ ಬಂದೂಕು ತೋರಿಸಿ 2 ಲಕ್ಷ ರೂ.ವಸೂಲಿ ಮಾಡಿದ್ದ.

ಮೇ 25, 2014ರಂದು ಗುಮ್ಲಾದ ರೈದಿಹ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ನಂತರ ಜಾರ್ಖಂಡ್ ಪೊಲೀಸರು 2014ರಲ್ಲಿ ಆತನನ್ನು ಬಂಧಿಸಿದ್ದರು. ನಂತರ ಆತನನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ 2014ರ ಮೇ 26ರಂದು ಛತ್ತೀಸ್‌ಗಢಕ್ಕೆ ಕರೆತರಲಾಯಿತು. ಅಲ್ಲಿನ ಜೈಲಿನ ಗೋಡೆಗಳನ್ನೇ ಒಡೆದು ಅಲ್ಲಿಂದ ಪರಾರಿಯಾಗಿದ್ದ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.