ETV Bharat / bharat

ವಿಮಾನದಲ್ಲಿ ಮೊಬೈಲ್, ಸ್ಮಾರ್ಟ್‌ವಾಚ್, ಏರ್‌ಪಾಟ್ ಕದ್ದ ಸಿಬ್ಬಂದಿ - ಕಾರ್ಗೋ ವಿಮಾನದಲ್ಲಿ ನಡೆದ ಕಳ್ಳತನ

ದೆಹಲಿ - ಮುಂಬೈ ನಡುವಿನ ಕಾರ್ಗೋ ವಿಮಾನದಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

police-arrested-two-accused-in-delhi-mumbai-flight-theft-case
ವಿಮಾನದಲ್ಲಿ ಮೊಬೈಲ್, ಸ್ಮಾರ್ಟ್‌ವಾಚ್, ಏರ್‌ಪಾಟ್ ಕದ್ದ ಸಿಬ್ಬಂದಿ
author img

By

Published : Mar 31, 2023, 4:55 PM IST

ನವದೆಹಲಿ: ಇತ್ತೀಚೆಗೆ ವಿಮಾನದಲ್ಲಿ ವಿಚಿತ್ರ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಕೆಲ ದಿನಗಳ ಹಿಂದೆ ಪ್ರಯಾಣಿಕರ ಮೇಲೆ ಸಹ ಪ್ರಯಾಣಿಕರೇ ಮೂತ್ರ ವಿರ್ಸಜನೆ ಮಾಡಿರುವ ಮತ್ತು ಕುಡಿದು ಗಲಾಟೆ ಮಾಡಿದಂತಹ ದುರ್ವರ್ತನೆಗಳು ವರದಿಯಾಗಿದ್ದವು. ಅಲ್ಲದೇ, ವಿಮಾನಯಾನ ಸಿಬ್ಬಂದಿಯೇ ಚಿನ್ನ, ಮಾದಕ ವಸ್ತು ಸಾಗಾಟದಲ್ಲಿ ಸಿಕ್ಕಿಬಿದ್ದ ಘಟನೆಗಳು ನಡೆದಿದ್ದವು. ಇದೀಗ ಕಾರ್ಗೋ ವಿಮಾನದಲ್ಲಿ ನಡೆದ ಕಳ್ಳತನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಘಟನೆ ಸಂಬಂಧ ಇಬ್ಬರು ನೌಕರರನ್ನು ರಾಷ್ಟ್ರ ರಾಜಧಾನಿ ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಹೌದು, ದೆಹಲಿ-ಮುಂಬೈ ನಡುವಿನ ಸರಕು ವಿಮಾನದಲ್ಲಿ ಮೊಬೈಲ್​, ಸ್ಮಾರ್ಟ್‌ವಾಚ್​, ಇಯರ್‌ಫೋನ್‌ ಸೇರಿದಂತೆ ಇತರ ಎಲೆಕ್ಟ್ರಾನಿಕ್ ಉಪಕರಣಗಳು ಕಳವು ಮಾಡಿರುವುದು ಪತ್ತೆಯಾಗಿದೆ. ಇಲ್ಲಿನ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈಗೆ ಹೋಗುತ್ತಿದ್ದ QO321 ವಿಮಾನದಲ್ಲಿ ಈ ಕಳ್ಳತನ ನಡೆದಿದೆ. ಈ ಕುರಿತು ಮಾರ್ಚ್ 30ರಂದು ವಿಮಾನಯಾನ ಕಂಪನಿಯವರು ವಿಮಾನ ನಿಲ್ದಾಣದ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ.

ತಪ್ಪೊಪ್ಪಿಕೊಂಡ ಆರೋಪಿಗಳು: ಎಲೆಕ್ಟ್ರಾನಿಕ್ ವಸ್ತುಗಳ ಕಳ್ಳತನ ಬೆಳಕಿಗೆ ಬರುತ್ತಿದ್ದಂತೆ ವಿಮಾನಯಾನ ಕಂಪನಿಯವರು ತಮ್ಮದೇ ಆದ ಮಟ್ಟದಲ್ಲಿ ಮೊದಲಿಗೆ ತನಿಖೆ ನಡೆಸಿದ್ದಾರೆ. ಈ ಘಟನೆ ನಡೆದ ದಿನ ವಿಮಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರರನ್ನು ವಿಚಾರಿಸಿದ್ದಾರೆ. ಆಗ ಪ್ರದೀಪ್ ಎಂಬ ಉದ್ಯೋಗಿ ಕಳ್ಳತನವನ್ನು ಒಪ್ಪಿಕೊಂಡಿದ್ದಾನೆ. ಹೀಗಾಗಿ ನಂತರದಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಇಂಡಿಗೋ ವಿಮಾನದಲ್ಲಿ ಸಿಗರೇಟ್ ಸೇದಿ ಆತಂಕ ತಂದೊಡ್ಡಿದ ಯುವತಿ ಪೊಲೀಸ್​ ವಶಕ್ಕೆ

ಈ ಪ್ರಕರಣದ ಗಂಭೀರತೆ ಅರಿತ ಪೊಲೀಸರು ತಕ್ಷಣವೇ ಪ್ರದೀಪ್​ನನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ಪ್ರಾರಂಭಿಸಿದ್ದಾರೆ. ಆಗ ಈ ಕಳ್ಳತನದಲ್ಲಿ ತನ್ನೊಂದಿಗೆ ಮತ್ತೊಬ್ಬ ನೌಕರ ಮೋಹನ್ ಕುಮಾರ್ ಎಂಬಾತ ಭಾಗಿಯಾಗಿದ್ದಾನೆ ಎಂಬುವುದನ್ನು ಆರೋಪಿ ಪ್ರದೀಪ್ ಬಾಯ್ಬಿಟಿದ್ದಾನೆ. ಶುಕ್ರವಾರ ಬಂಧಿತ ಆರೋಪಿಗಳಿಂದ ಕಳ್ಳತನವಾದ ಫೈರ್ ಬೋಲ್ಟ್​ಗಳು, ಸ್ಮಾರ್ಟ್‌ವಾಚ್​, ಬೋಟ್‌ ಏರ್‌ಪಾಟ್, ರೆಡ್‌ಮಿ 10 ಸ್ಮಾರ್ಟ್ ಫೋನ್​ ಮತ್ತು ಸೋನಿ ಇಯರ್‌ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: "ಕೈ" ಕೊಟ್ಟ ಏರ್​ ಇಂಡಿಯಾ ವಿಮಾನ ಸಿಬ್ಬಂದಿ ಚಿನ್ನಸಾಗಣೆ ಕಳ್ಳಾಟ: 8 ಕೆಜಿ ಬಂಗಾರ ವಶ

ಈ ಘಟನೆ ಬಗ್ಗೆ ಪೊಲೀಸ್ ಉಪ ಆಯುಕ್ತ (ವಿಮಾನ ನಿಲ್ದಾಣ) ದೇವೇಶ್ ಕುಮಾರ್ ಮಹ್ಲಾ ಪ್ರತಿಕ್ರಿಯಿಸಿದ್ದು, ವಿಮಾನಯಾನ ಕಂಪನಿ ನೀಡಿದ ದೂರಿನ ಮೇರೆಗೆ ಕಳ್ಳತನ ನಡೆದ ವಿಮಾನದಲ್ಲಿ ಕರ್ತವ್ಯದಲ್ಲಿದ್ದ ಪ್ರದೀಪ್ ಮತ್ತು ಮೋಹನ್ ಕುಮಾರ್​ ಎಂಬುವವರನ್ನು ಬಂಧಿಸಲಾಗಿದೆ. ಈ ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್ 379ರ ಅಡಿಯಲ್ಲಿ ಪ್ರಕರಣ ದಾಖಸಿಕೊಳ್ಳಲಾಗಿದೆ. ಅಲ್ಲದೇ, ಈ ಹಿಂದೆಯೂ ಆರೋಪಿಗಳು ಇಂತಹ ಘಟನೆಗಳಲ್ಲಿ ತೊಡಗಿದ್ದರಾ ಎಂಬ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ವಿಮಾನಕ್ಕೆ ಡಿಕ್ಕಿಯಾದ ಹಕ್ಕಿ.. ಬಹರೇನ್​​ನಿಂದ ಮಂಗಳೂರು ತಲುಪಲು ಬೇಕಾಯಿತು 2 ದಿನ, ಪ್ರಯಾಣಿಕರು ಹೈರಾಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.