ETV Bharat / bharat

ಬಸ್​ನಲ್ಲಿ ಅನುಚಿತ ವರ್ತನೆ: ಅಟ್ಟಿಸಿಕೊಂಡು ಹೋಗಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಯುವತಿ! - police arrested accused who harassed women in the bus at Kerala

ಕಣ್ಣೂರಿನಿಂದ ಕಾನ್ಹಂಗಡ್​ ಪ್ರದೇಶಕ್ಕೆ ಕೆಎಸ್​ಆರ್​ಟಿಸಿ ಬಸ್ ಮೂಲಕ ಕಣ್ಣೂರಿನ ಕರಿವೇಲೂರು ಮೂಲದ ಯುವತಿ ಪ್ರಯಾಣ ಮಾಡುತ್ತಿದ್ದರು. ಕೇಂದ್ರ ಸರ್ಕಾರದ ಕಾರ್ಮಿಕ ನೀತಿಗಳನ್ನು ವಿರೋಧಿಸಿ ಕೇರಳದ ಖಾಸಗಿ ಬಸ್​ಗಳು ಪ್ರತಿಭಟನೆ​ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಬಸ್ ಜನರಿಂದ ತುಂಬಿ ತುಳುಕುತ್ತಿತ್ತು. ಈ ವೇಳೆ ವ್ಯಕ್ತಿಯೊಬ್ಬ ಯುವತಿ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದ.

ಬಸ್​ನಲ್ಲಿ ಅನುಚಿತ ವರ್ತನೆ
ಬಸ್​ನಲ್ಲಿ ಅನುಚಿತ ವರ್ತನೆ
author img

By

Published : Mar 31, 2022, 10:48 PM IST

Updated : Apr 1, 2022, 12:52 PM IST

ಕೇರಳ: ಬಸ್​ನಲ್ಲಿ ಅನುಚಿತವಾಗಿ ವರ್ತಿಸಿದ ವ್ಯಕ್ತಿಯೊಬ್ಬನನ್ನು ಯುವತಿ ಅಟ್ಟಿಸಿಕೊಂಡು ಹೋಗಿ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಕೇರಳದ ಕರಿವೆಲ್ಲೂರಿನಲ್ಲಿ ನಡೆದಿದೆ. ಕಣ್ಣೂರಿನಿಂದ ಕಾನ್ಹಂಗಡ್​ ಪ್ರದೇಶಕ್ಕೆ ಕೆಎಸ್​ಆರ್​ಟಿಸಿ ಬಸ್ ಮೂಲಕ ಕಣ್ಣೂರಿನ ಯುವತಿ ಪ್ರಯಾಣ ಮಾಡುತ್ತಿದ್ದರು.

ಕೇಂದ್ರ ಸರ್ಕಾರದ ಕಾರ್ಮಿಕ ನೀತಿಗಳನ್ನು ವಿರೋಧಿಸಿ ಕೇರಳದ ಖಾಸಗಿ ಬಸ್​ಗಳು ಮುಷ್ಕರ​ ನಡೆಸುತ್ತಿದ್ದ ಕಾರಣ ಸರ್ಕಾರಿ ಬಸ್ ಪ್ರಯಾಣಿಕರಿಂದ ತುಂಬಿ ತುಳುಕುತ್ತಿತ್ತು. ಈ ವೇಳೆ ವ್ಯಕ್ತಿಯೊಬ್ಬ ಯುವತಿ ಜತೆ ಅಸಭ್ಯವಾಗಿ ನಡೆದುಕೊಂಡಿದ್ದ. ಆರೋಪಿಯನ್ನು ರಾಜೀವ್​ (52) ಎಂದು ಗುರುತಿಸಲಾಗಿದೆ. ಬಸ್​ ನೀಲೇಶ್ವರಮ್​ಗೆ ತೆರಳುತ್ತಿದ್ದಂತೆ ಆಕೆಯ ಜತೆ ಆತ ಅನುಚಿತ ವರ್ತನೆ ತೋರಿದ್ದಾನೆ.

ಅಟ್ಟಿಸಿಕೊಂಡು ಹೋಗಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಯುವತಿ!

ಅನೇಕ ಬಾರಿ ಆತನಿಗೆ ಯುವತಿ ಎಚ್ಚರಿಕೆ ನೀಡಿದರೂ ಕ್ಯಾರೆನ್ನದೆ ಆರೋಪಿ ತನ್ನ ಕುಕೃತ್ಯ ಮುಂದುವರೆಸಿದ್ದಾನೆ. ಬಸ್​ನಲ್ಲಿ ಯುವತಿಗೆ ಕಿರುಕುಳ ನೀಡುತ್ತಿದ್ದರೂ ಬಸ್ಸಿನಲ್ಲಿದ್ದ ಸಹಪ್ರಯಾಣಿಕರಲ್ಲಿ ಯಾರೊಬ್ಬರೂ ಕೂಡ ಆಕೆಗೆ ಸಹಾಯ ಮಾಡಲಿಲ್ಲ ಎಂದು ತಿಳಿದುಬಂದಿದೆ. ಇದಾದ ಬಳಿಕ ಯುವತಿ ಪಿಂಕ್​ ಪೊಲೀಸರಿಗೆ ಕರೆ​ ಮಾಡಿ ಮಾಹಿತಿ ನೀಡಿದ್ದಾರೆ.

ವಿಚಾರ ಗೊತ್ತಾಗಿ, ಬಸ್ ಕಾನ್ಹಂಗಡ್​ ನಿಲ್ದಾಣದಲ್ಲಿ ನಿಲ್ಲುತ್ತಿದ್ದಂತೆ ಬಸ್​ನಿಂದ ಇಳಿದು ಆರೋಪಿ ಪರಾರಿಯಾಗುತ್ತಾನೆ. ಆತನನ್ನು ಯಾವುದೇ ಕಾರಣಕ್ಕೂ ಬಿಡಲೇಬಾರದು ಎಂದು ನಿರ್ಧಾರಕ್ಕೆ ಬರುವ ಯುವತಿ, ಆತನನ್ನು ಅಟ್ಟಿಸಿಕೊಂಡು ಹೋಗುತ್ತಾರೆ. ಅಲ್ಲದೆ, ಆರೋಪಿಯು ಮಿಸ್​ ಆಗಬಾರದು ಅಂತಾ ಆತನ ಫೋಟೋವನ್ನು ತನ್ನ ಮೊಬೈಲ್​ನಲ್ಲಿ ಸೆರೆ ಹಿಡಿದುಕೊಳ್ಳುತ್ತಾರೆ.

ರಾಜೀವ್​ ಲಾಟರಿ ಕೊಳ್ಳುವ ಗ್ರಾಹಕನಂತೆ ನಾಟಕವಾಡಿ, ಅಂಗಡಿಯೊಳಗೆ ಹೋದಾಗ ಸ್ಥಳೀಯರ ನೆರವಿನಿಂದ ಆತನನ್ನು ಯುವತಿ ಹಿಡಿದಿದ್ದಾರೆ. ನಂತರ ಆತನನ್ನು ಕಾನ್ಹಂಗಡ​ ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವತಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಅಪರಾಧಿಗೆ ದಂಡಸಹಿತ 20 ವರ್ಷ ಜೈಲುಶಿಕ್ಷೆ

Last Updated : Apr 1, 2022, 12:52 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.