ETV Bharat / bharat

ಮತ್ತೊಂದು ದಾರುಣ... ಬರ್ತ್ ಡೇ ಪಾರ್ಟಿ ಬಳಿಕ ಅಪ್ತಾಪ್ತೆ ಮೇಲೆ ರೇಪ್ - ಅತ್ಯಾಚಾರ ಪ್ರಕರಣದಲ್ಲಿ ಶಾಸಕರ ಪುತ್ರ

ಜುಬ್ಲಿ ಹಿಲ್ಸ್​ ಅತ್ಯಾಚಾರ ಪ್ರಕರಣದಲ್ಲಿ ನಾಪತ್ತೆಯಾಗಿರುವ ಶಾಸಕನ ಪುತ್ರ ಇನ್ನೂ ತಲೆಮರೆಸಿಕೊಂಡಿದ್ದು, ಪೊಲೀಸರು ಪತ್ತೆ ಕಾರ್ಯ ಮುಂದುವರಿಸಿದ್ದಾರೆ. ಈ ಮಧ್ಯೆಯೇ ಇನ್ನೊಂದು ಅತ್ಯಾಚಾರ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ.

jubilee-hills-gang-rape
ನಕ್ಲೆಸ್​ ರೋಡ್​ನಲ್ಲಿ ಮತ್ತೊಂದು ಅತ್ಯಾಚಾರ ಕೇಸ್​ ಬೆಳಕಿಗೆ
author img

By

Published : Jun 7, 2022, 6:40 AM IST

ಹೈದರಾಬಾದ್​(ತೆಲಂಗಾಣ): ಹೈದರಾಬಾದ್​ನಲ್ಲಿ ಸರಣಿ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಕೆಲ ದಿನಗಳ ಹಿಂದೆ ಜುಬ್ಲಿ ಹಿಲ್ಸ್​ನಲ್ಲಿ ನಾಲ್ಕು ಯುವಕರು ಯುವತಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಘಟನೆ ಮಾಸುವ ಮುನ್ನವೇ ಅದೇ ಪ್ರದೇಶದಲ್ಲಿ ಮತ್ತೊಂದು ಯುವತಿ ಮೇಲೆ ರೇಪ್​ ನಡೆದಿತ್ತು. ಇದೀಗ ನಕ್ಲೆಸ್​ ರೋಡ್​ನಲ್ಲಿ 17 ವರ್ಷದ ಬಾಲಕಿ ಮೇಲೆ ಅತ್ಯಚಾರಾ ನಡೆದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಜುಬಿಲಿಹಿಲ್ಸ್ ಘಟನೆಗೂ ಮುನ್ನ ಕಾರಿನಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು 17 ವರ್ಷದ ಬಾಲಕಿ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣದಲ್ಲಿ ರಾಮ್ ಗೋಪಾಲಪೇಟೆ ಪೊಲೀಸರು ಸುರೇಶ್ ಎಂಬಾತನನ್ನು ಬಂಧಿಸಿದ್ದಾರೆ. ಘಟನೆ ಏಪ್ರಿಲ್ 20 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜೂನ್​ 4 ರಂದು ಬಾಲಕಿ ಪೊಲೀಸರಿಗೆ ದೂರು ನೀಡಿದ್ದಾಳೆ.

ಜನ್ಮದಿನ ಆಚರಣೆ ಬಳಿಕ ರೇಪ್​: ಆರೋಪಿ ಸುರೇಶ್​ ತನ್ನನ್ನು ಆತನ ಸ್ನೇಹಿತನ ಜನ್ಮದಿನದ ಪಾರ್ಟಿಗೆ ಕರೆದೊಯ್ದು ಬಳಿಕ ಕಾರಿನಲ್ಲಿ ಅತ್ಯಾಚಾರ ಮಾಡಿದ್ದಾನೆ. ನನ್ನ ಜೊತೆ ಸಂಪರ್ಕ ಬೆಳೆಸಿಕೊಂಡಿದ್ದ. ಮೊಬೈಲ್​ ಅನ್ನು ಗಿಫ್ಟ್​ ಆಗಿ ನೀಡಿದ್ದ. ತಾನು ಅನಾಥೆ ಎಂದು ಬಾಲಕಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಎಫ್​ಆರ್​ಐ ದಾಖಲಿಸಿರುವ ಪೊಲೀಸರು ಸುರೇಶ್​ನನ್ನು ಬಂಧಿಸಿದ್ದಾರೆ.

ಜುಬಿಲಿಹಿಲ್ಸ್​ ಆರೋಪಿ ಇನ್ನೂ ನಾಪತ್ತೆ: ಇನ್ನೊಂದೆಡೆ ಜುಬ್ಲಿ ಹಿಲ್ಸ್​​ನಲ್ಲಿ ನಡೆದ ಯುವತಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿರುವ ಶಾಸಕನ ಪುತ್ರ ಇನ್ನೂ ಪತ್ತೆಯಾಗಿಲ್ಲ. ಆರೋಪಿಯ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಓದಿ: ಆನ್​ಲೈನ್​ ರಮ್ಮಿ ಆಟದ ಗೀಳು.. ಎರಡು ಮಕ್ಕಳ ತಾಯಿ ನೇಣಿಗೆ ಶರಣು

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.