ಶ್ರೀನಗರ: ಪ್ರಧಾನಿ ಮಂತ್ರಿ ಕಾರ್ಯಾಲಯದ(PMO) ಉನ್ನತ ಮಟ್ಟದ ಅಧಿಕಾರಿ ಎಂದು ಸುಳ್ಳು ಹೇಳಿಕೊಂಡು ಪಂಚತಾರಾ ಹೊಟೇಲ್‌ನಲ್ಲಿ ಆತಿಥ್ಯದ ಜತೆಗೆ ವಿಶೇಷ ಭದ್ರತೆ ಹಾಗು ಬುಲೆಟ್ ಪ್ರೂಫ್ ವಾಹನವನ್ನೂ ಪಡೆದ ಗಂಭೀರ ಆರೋಪದ ಮೇಲೆ ಗುಜರಾತ್ ಮೂಲದ ವ್ಯಕ್ತಿಯನ್ನು ಶ್ರೀನಗರ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಪಂಚತಾರಾ ಹೊಟೇಲ್‌ನಲ್ಲಿ ಆರೋಪಿ ಸಿಕ್ಕಿಬಿದ್ದಿದ್ದಾನೆ. ಕಿರಣ್ ಪಟೇಲ್ ಬಂಧಿತ ವ್ಯಕ್ತಿ. ಮೂಲಗಳ ಪ್ರಕಾರ, ಈತ ಕಾಶ್ಮೀರ ಕಣಿವೆಗೆ 3ನೇ ಭೇಟಿಯಲ್ಲಿದ್ದ. ಮಾರ್ಚ್ 3ರಂದು ಭದ್ರತಾ ಅಧಿಕಾರಿಗಳು ಬಂಧಿಸಿದ್ದಾರೆ.
ದಕ್ಷಿಣ ಕಾಶ್ಮೀರದಲ್ಲಿ ಸೇಬಿನ ತೋಟಗಳಿಗೆ ಖರೀದಿದಾರರನ್ನು ಗುರುತಿಸಲು ಕೇಂದ್ರ ಸರ್ಕಾರ ತನಗೆ ಆದೇಶ ನೀಡಿದೆ ಎಂದು ಪಟೇಲ್ ಹೇಳಿಕೊಂಡಿದ್ದಾನೆ. ರಾಷ್ಟ್ರ ರಾಜಧಾನಿಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ಮತ್ತು ರಾಜಕಾರಣಿಗಳ ಹೆಸರನ್ನೂ ಹೇಳಿಕೊಂಡು ಓಡಾಡುತ್ತಿದ್ದ. ಪೊಲೀಸ್ ಕಸ್ಟಡಿ ಅವಧಿ ವಿಸ್ತರಣೆಗಾಗಿ ನಿನ್ನೆ ಸಂಜೆ ಆರೋಪಿಯನ್ನು ಪೊಲೀಸರು ಇಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮಾರ್ಚ್ 2 ರಂದು ವಂಚನೆ ಮತ್ತು ಪೋರ್ಜರಿ ಸಂಬಂಧಿತ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಮರುದಿನ ಬಂಧಿಸಲಾಗಿತ್ತು.
2ನೇ ಭೇಟಿಯ ಸಮಯದಲ್ಲಿ ಆತ ಪ್ರವಾಸಿ ತಾಣವಾದ ಗುಲ್ಮಾರ್ಗ್‌ಗೆ ಭೇಟಿ ನೀಡಿದ್ದಾನೆ. ಈ ಪ್ರದೇಶದಲ್ಲಿ ಹೋಟೆಲ್ ಸೌಲಭ್ಯಗಳನ್ನು ಸುಧಾರಿಸಲು ಸರ್ಕಾರ ತನಗೆ ಕೆಲಸ ನೀಡಿದೆ ಎಂದು ಹೇಳಿಕೊಂಡಿದ್ದಾನೆ. ಮಾರ್ಚ್ 2 ರಂದು ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಯಾವುದೇ ವಿಐಪಿ ಭೇಟಿ ಬಗ್ಗೆ ಮಾಹಿತಿ ಇಲ್ಲದ ಕಾರಣ ಭದ್ರತಾ ಏಜೆನ್ಸಿಗಳಿಗೆ ಅನುಮಾನ ಮೂಡಿತ್ತು.
ವಿಮಾನ ನಿಲ್ದಾಣದಲ್ಲಿ ಆರೋಪಿಯನ್ನು ತಡೆಯಲು ಪೊಲೀಸರು ಪ್ರಯತ್ನಿಸಿದ್ದಾರೆ. ಆದರೆ ಆತ ಹೋಟೆಲ್‌ಗೆ ಹೋಗುವ ಮಾರ್ಗದಲ್ಲಿ ಬುಲೆಟ್ ಪ್ರೂಫ್ ಕಾರು ಏರಿದ್ದರಿಂದ ಆ ಪ್ರಯತ್ನ ಯಶಸ್ವಿಯಾಗಿರಲಿಲ್ಲ. ಇದಾದ ಬಳಿಕ ನಡೆದ ವಿಚಾರಣೆ ಮತ್ತು ಬಂಧನದ ನಂತರ ಭದ್ರತಾ ಅಧಿಕಾರಿಗಳು ನಕಲಿ ಗುರುತಿನ ಚೀಟಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
-
॥ जय हिन्द ॥ pic.twitter.com/WCEZxlDHId
— Dr. Kiran J Patel (@bansijpatel) February 27, 2023 " class="align-text-top noRightClick twitterSection" data="
">॥ जय हिन्द ॥ pic.twitter.com/WCEZxlDHId
— Dr. Kiran J Patel (@bansijpatel) February 27, 2023॥ जय हिन्द ॥ pic.twitter.com/WCEZxlDHId
— Dr. Kiran J Patel (@bansijpatel) February 27, 2023
ಟ್ವಿಟರ್ ಖಾತೆ ಹೊಂದಿದ್ದ ಆರೋಪಿ: ಪರಿಶೀಲಿಸಿದ(Verified) ಟ್ವಿಟರ್ ಖಾತೆ ಹೊಂದಿರುವ ಪಟೇಲ್ ಕಾಶ್ಮೀರದ ಗುಲ್ಮಾರ್ಗ್, ದೂಧಪತ್ರಿ ಮುಂತಾದ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿದ ವಿಡಿಯೋ ಮತ್ತು ಫೋಟೋಗಳನ್ನು ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾನೆ. ಅಲ್ಲದೇ ಪ್ರಸಿದ್ಧ ಲಾಲ್‌ಚೌಕ್ ಮತ್ತು ಗಡಿ ನಿಯಂತ್ರಣ ರೇಖೆ(ಎಲ್‌ಒಸಿ) ಬಳಿಯ ಚಿತ್ರಗಳನ್ನು ಹಂಚಿಕೊಂಡಿದ್ದಾನೆ. ಅಲ್ಲಿ ಆತನಿಗೆ ಪೊಲೀಸ್ ಮತ್ತು ಸಿಆರ್‌ಪಿಎಫ್‌ನಿಂದ ವಿಶೇಷ ಭದ್ರತೆ ನೀಡಲಾಗಿದೆ. ಕಾಶ್ಮೀರದಲ್ಲಿ ಇಬ್ಬರು ಡೆಪ್ಯುಟಿ ಕಮಿಷನರ್‌ಗಳನ್ನು ಭೇಟಿ ಮಾಡಿ ಮಾತುಕತೆಯನ್ನೂ ನಡೆಸಿದ್ದಾನೆ ಎನ್ನಲಾಗಿದೆ.
ಟ್ವಿಟರ್‌ನಲ್ಲಿ ಪಟೇಲ್‌ನನ್ನು ಬಿಜೆಪಿ ಗುಜರಾತ್ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಸಿನ್ಹ್ ವಘೇಲಾ ಫಾಲೋ ಮಾಡುತ್ತಿದ್ದಾರೆ!. ಆರೋಪಿ ತನ್ನ ಟ್ವಿಟ್ಟರ್ ಬಯೋದಲ್ಲಿ, ವರ್ಜೀನಿಯಾದ ಕಾಮನ್‌ವೆಲ್ತ್ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ, ಐಐಎಂ ತಿರುಚ್ಚಿಯಲ್ಲಿ ಎಂಬಿಎ, ಹಾಗೆಯೇ ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಟೆಕ್ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್‌ನಲ್ಲಿ ಬಿಇ ಪಡೆದಿರುವುದಾಗಿ ಹೇಳಿಕೊಂಡಿದ್ದಾನೆ.
ಭಯೋತ್ಪಾದಕನ ಸಹಚರ ಅರೆಸ್ಟ್: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಲಷ್ಕರ್-ಎ-ತೊಯ್ಬಾದ (ಎಲ್‌ಇಟಿ) ಉಪ ಸಂಘಟನೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ನ ಶಂಕಿತ ಉಗ್ರಗಾಮಿ ಸಹಚರನನ್ನು ಭದ್ರತಾ ಪಡೆಗಳು ಬಂಧಿಸಿವೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಬಾರಾಮುಲ್ಲಾ ಪೊಲೀಸ್, ಸೇನೆಯ 29 ಆರ್‌ಆರ್ ಮತ್ತು 2 ಬಿಎನ್ ಎಸ್‌ಎಸ್‌ಬಿ ಜಂಟಿ ಪಡೆಗಳು ಸಿಂಗ್ ಪೋರಾ ಪಟ್ಟಣದಲ್ಲಿ ನಾಕಾ ತಪಾಸಣೆಯ ವೇಳೆ ಶಂಕಿತನ ಸೆರೆಸಿಕ್ಕಿದ್ದಾನೆ. "ಮತಿಪೋರಾ ಕಡೆಯಿಂದ ಫೆರಾನ್ (ಗೌನ್) ಧರಿಸಿದ್ದ ವ್ಯಕ್ತಿಯೊಬ್ಬ ನಾಕಾ ತಂಡವನ್ನು ನೋಡಿ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದ. ಈ ಸಂದರ್ಭದಲ್ಲಿ ಎಚ್ಚೆತ್ತ ತಂಡ ಹಿಂಬಾಲಿಸಿ ಜಾಣ್ಮೆಯಿಂದ ಬಂಧಿಸಿತು" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕಾಶ್ಮೀರ: ಎಲ್ಇಟಿ ಭಯೋತ್ಪಾದಕನ ಸಹಚರ ಅರೆಸ್ಟ್
ರೈಫಲ್ ಹಿಡಿದು ಫೋಟೋಗೆ ಪೋಸ್ ಕೊಟ್ಟ ಬಿಜೆಪಿ ನಾಯಕಿ: ಮಾಜಿ ಮಿಸೆಸ್ ಇಂಡಿಯಾ ಮತ್ತು ಬಿಜೆಪಿ ಮೇಯರ್ ಅಭ್ಯರ್ಥಿ ಶ್ವೇತಾ ಝಾ ಅವರು ರೈಫಲ್ ಹಿಡಿದು ಪೋಸ್ ನೀಡಿದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವಿವಾದದಲ್ಲಿ ಸಿಲುಕಿದ್ದಾರೆ. ಝಾ ಒಂದು ಛಾಯಾಚಿತ್ರದಲ್ಲಿ AK-47 ರೈಫಲ್ ಹಾಗೂ ಇನ್ನೊಂದರಲ್ಲಿ INSAS ರೈಫಲ್ ಹಿಡಿದಿದ್ದರು.
ಇದನ್ನೂ ಓದಿ: ಎಕೆ 47 ರೈಫಲ್ ಹಿಡಿದು ಫೋಟೋಗೆ ಪೋಸ್ ಕೊಟ್ಟ ಬಿಜೆಪಿ ನಾಯಕಿ, ಮಾಜಿ ಮಿಸೆಸ್ ಇಂಡಿಯಾ!