ETV Bharat / bharat

ದುಷ್ಟರಿಂದ ಪಿಒಕೆ ಜನರ ರಕ್ಷಣೆಗೆ ಭಾರತ ಸದಾ ಬದ್ಧ: ರಾಜನಾಥ್​ ಸಿಂಗ್​ - ETV bharat kannada news

ಕಾರ್ಗಿಲ್​ ವಿಜಯ ದಿನದ ಅಂಗವಾಗಿ ವೀರ ಯೋಧರಿಗೆ ಸ್ಮರಣಾಂಜಲಿ ಸಲ್ಲಿಸಲಾಯಿತು. ರಕ್ಷಣಾ ಸಚಿವ ರಾಜನಾಥ್​ ಸಿಂಗ್ ಸೇರಿದಂತೆ ಸಶಸ್ತ್ರ ಪಡೆಗಳ ಯೋಧರು ಇದ್ದರು.

Rajnath Singh
ರಾಜನಾಥ್​ ಸಿಂಗ್​
author img

By

Published : Jul 25, 2022, 7:47 AM IST

ಜಮ್ಮು: ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ) ಭಾರತದ ಅವಿಭಾಜ್ಯ ಅಂಗವಾಗಿದೆ. ಅಲ್ಲಿನ ಜನರನ್ನು ರಕ್ಷಣೆ ಮಾಡಲು ಎಂತಹ ದುಷ್ಟ ಶಕ್ತಿಯನ್ನೂ ಎದುರಿಸಲು ಭಾರತ ಸಿದ್ಧವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಹೇಳಿದರು. ಈ ಮೂಲಕ ಪಾಕಿಸ್ತಾನಕ್ಕೆ ಸ್ಪಷ್ಟ ಎಚ್ಚರಿಕೆ ನೀಡಿದರು.

ಜಮ್ಮುವಿನಲ್ಲಿ ನಿನ್ನೆ ನಡೆದ 'ಕಾರ್ಗಿಲ್ ವಿಜಯ ದಿನದ' ಅಂಗವಾಗಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಪಿಒಕೆ ಕುರಿತು ಸಂಸತ್ತಿನಲ್ಲಿ ನಿರ್ಣಯವನ್ನು ಅಂಗೀಕರಿಸಲಾಗಿದೆ. ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಕಾಶ್ಮೀರ ಭಾರತದ ಭಾಗವಾಗಿವೆ. ಶಿವನ ರೂಪದಲ್ಲಿ ಅಮರನಾಥ ನಮ್ಮೊಂದಿಗಿದ್ದರೆ, ತಾಯಿ ಶಾರದೆಯ ಶಕ್ತಿ ಗಡಿ ನಿಯಂತ್ರಣ ರೇಖೆಯ ಇನ್ನೊಂದು ಬದಿಯಲ್ಲಿದೆ ಎಂದು ಬಣ್ಣಿಸಿದರು.

  • PoK भारत का हिस्सा है, हम यह मानते हैं। संसद में इस बारे में सर्वसम्मत प्रस्ताव भी पारित है।

    यह कैसे हो सकता है कि शिव के स्वरूप बाबा अमरनाथ हमारे पास हों, पर शक्ति स्वरूपा शारदा जी का धाम LoC के उस पार रहे… pic.twitter.com/4ha4qJMBeD

    — Rajnath Singh (@rajnathsingh) July 24, 2022 " class="align-text-top noRightClick twitterSection" data=" ">

1962 ರಲ್ಲಿ ಪಂಡಿತ್ ಜವಾಹರ್​ಲಾಲ್​ ನೆಹರು ಅವರು ಪ್ರಧಾನಿಯಾಗಿದ್ದಾಗ ಲಡಾಖ್‌ನಲ್ಲಿ ಚೀನಾ ನಮ್ಮ ಪ್ರದೇಶವನ್ನು ವಶಪಡಿಸಿಕೊಂಡಿತು. ಅಂದು ದೇಶ ನಡೆದುಕೊಂಡ ರೀತಿಯನ್ನು ಪ್ರಶ್ನಿಸುವುದಿಲ್ಲ. ಆದರೆ, ಇಂದು ಭಾರತ ಬದಲಾಗಿದೆ. ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳಲ್ಲಿ ನಾವು ಕೂಡ ಇದ್ದೇವೆ ಎಂದು ಹೇಳಿದರು.

ಥಿಯೇಟರ್​ ಕಮಾಂಡ್​ ರಚನೆ: ಸಶಸ್ತ್ರ ಪಡೆಗಳ ನಡುವೆ ಸಮನ್ವಯವನ್ನು ಸಾಧಿಸಲು ಮೂರು ಸೇವೆಗಳ ಜಂಟಿ 'ಥಿಯೇಟರ್ ಕಮಾಂಡ್‌'ಗಳನ್ನು ರಚಿಸುವುದಾಗಿ ರಕ್ಷಣಾ ಸಚಿವರು ಘೋಷಿಸಿದರು. ಇದರಿಂದ ಸ್ವಾವಲಂಬನೆ, ರಕ್ಷಣಾ ಪಡೆಗಳ ಬಲವರ್ಧನೆಗೆ ಸಹಕಾರಿಯಾಗಲಿದೆ. ಕಾರ್ಗಿಲ್​ ಯುದ್ಧದ ಬಳಿಕ ಇದರ ಅಗತ್ಯತೆ ಕಂಡು ಬಂತು ಎಂದು ಇದೇ ವೇಳೆ ಹೇಳಿದರು.

1948, 1962, 1965, 1971 ಮತ್ತು 1999 ರ ಯುದ್ಧಗಳಲ್ಲಿ ಚೀನಾ ಮತ್ತು ಪಾಕಿಸ್ತಾನ ಪಡೆಗಳ ದುಷ್ಟ ಪ್ರಯತ್ನದಿಂದ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನ ಪ್ರದೇಶಗಳು 'ಯುದ್ಧ ಭೂಮಿ'ಯಾದವು. ಆದರೆ ಆ ದೇಶಗಳ ವಿರುದ್ಧ ಭಾರತದ ಯೋಧರು ಸಶಕ್ತವಾಗಿ ಹೋರಾಡಿದ್ದಾರೆ ಎಂದರು.

1965 ಮತ್ತು 1971 ರ ನೇರ ಯುದ್ಧಗಳಲ್ಲಿ ಸೋಲು ಅನುಭವಿಸಿದ ಪಾಕಿಸ್ತಾನ ಬಳಿಕ, ಯುದ್ಧ ತಂತ್ರವನ್ನು ಬದಲಿಸಿಕೊಂಡಿದೆ. 2 ದಶಕಗಳಿಂದ ದೇಶವನ್ನು ಸಾವಿರ ಹೋಳು ಮಾಡಲು ಯತ್ನಿಸುತ್ತಲೇ ಇದೆ. ಆದರೆ, ಭಾರತದ ಏಕತೆ, ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ತರಲು ಯಾರಿಂದಲೂ ಸಾಧ್ಯವಿಲ್ಲ ಎಂಬುದನ್ನು ವೀರ ಸೈನಿಕರು ಸಾಬೀತು ಮಾಡಿದ್ದಾರೆ ಎಂದು ಹೊಗಳಿದರು.

ಇದನ್ನೂ ಓದಿ: ದೇಶದ 'ಅತಿ ಹೆಚ್ಚು ತೆರಿಗೆ ಪಾವತಿದಾರ'ನೆಂಬ ಕೀರ್ತಿಗೆ ಭಾಜನರಾದ ನಟ ಅಕ್ಷಯ್ ಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.