ಪೂಂಚ್(ಜಮ್ಮು ಕಾಶ್ಮೀರ್): ಅಜಾಗರೂಕತೆಯಿಂದ ಗಡಿ ದಾಟಿದ್ದ ಇಬ್ಬರು ಪಾಕ್ ಆಕ್ರಮಿತ ಕಾಶ್ಮೀರದ ಬಾಲಕಿಯರನ್ನು ಇಂದು ವಾಪಸ್ ಕಳುಹಿಸಲಾಯಿತು.
ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಆಕಸ್ಮಿಕವಾಗಿ ಗಡಿ ದಾಟಿದ ಪಿಒಕೆ ಮೂಲದ ಇಬ್ಬರು ಬಾಲಕಿಯರನ್ನು ಭಾರತೀಯ ಸೇನೆ ವಶಕ್ಕೆ ಪಡೆದಿತ್ತು. ಪಾಕ್ ಆಕ್ರಮಿತ ಕಾಶ್ಮೀರದ ಇಬ್ಬರು ಬಾಲಕಿಯರು ಗಡಿ ದಾಟಿ ಭಾರತದೊಳಗೆ ಬಂದಿದ್ದರು. ಅಜಾಗರೂಕತೆಯಿಂದ ಗಡಿ ದಾಟಿದ್ದರೆನ್ನಲಾದ ಈ ಇಬ್ಬರನ್ನು ಸೇನೆ ಬಂಧಿಸಿತ್ತು.
ಇದನ್ನೂ ಓದಿ: ಗಡಿ ದಾಟಿ ಬಂದಿದ್ದ ಇಬ್ಬರು ಪಾಕಿಸ್ತಾನಿ ಬಾಲಕಿಯರನ್ನು ಬಂಧಿಸಿದ ಸೇನೆ
ಪಾಕ್ ಆಕ್ರಮಿತ ಕಾಶ್ಮೀರದ ಗಡಿ ಸಮೀಪದ ಅಬ್ಬಾಸ್ ಪುರ್ ಗ್ರಾಮದ ಲೈಬಾ ಜಬೈರ್(17) ಮತ್ತು ಸನಾ ಜಬೈರ್(13) ಎಂಬ ಬಾಲಕಿಯರು ಪೂಂಚ್ ಸೆಕ್ಟರ್ನಲ್ಲಿ ಭಾರತದ ಗಡಿ ಪ್ರವೇಶಿಸಿದ್ದರು.
ಈ ಇಬ್ಬರು ಹುಡುಗಿಯರನ್ನು ಇಂದು ಮರಳಿ ಅವರ ಸ್ವಗ್ರಾಮಕ್ಕೆ ಕಳುಹಿಸಲಾಗಿದೆ. ಚಕ್ ಡಾ ಬಾಗ್ ಕ್ರಾಸಿಂಗ್ ಮೂಲಕ ವಾಪಸ್ ಕಳುಹಿಸಲಾಯಿತು.