ETV Bharat / bharat

ಜೀವ ಪಣಕ್ಕಿಟ್ಟು ಮಗು ರಕ್ಷಿಸಿದ ಸಿಬ್ಬಂದಿ: ತನಗೆ ಸಿಕ್ಕ ಬಹುಮಾನದಲ್ಲಿ ಅರ್ಧ ಹಣ ಹಸುಳೆಗೆ! - ರೈಲ್ವೆ ಸಿಬ್ಬಂದಿ ವಂಗಾನಿ

ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ನಡೆದುಕೊಂಡು ಹೋಗ್ತಿದ್ದ ವೇಳೆ ಮಗುವೊಂದು ಹಳಿ ಮೇಲೆ ಬಿದ್ದಿದ್ದು, ಅದನ್ನ ದೇವರ ರೂಪದಲ್ಲಿ ಬಂದ ರೈಲ್ವೆ ಸಿಬ್ಬಂದಿಯೊಬ್ಬ ಕಾಪಾಡಿರುವ ಘಟನೆ ನಡೆದಿತ್ತು.

Pointsman
Pointsman
author img

By

Published : Apr 22, 2021, 9:17 PM IST

ಮುಂಬೈ: ರೈಲ್ವೆ ನಿಲ್ದಾಣದಲ್ಲಿ ಆಯತಪ್ಪಿ ಪ್ಲಾಟ್​ಫಾರ್ಮ್​​ನಿಂದ ಹಳಿ ಮೇಲೆ ಬಿದ್ದಿದ್ದ ಮಗುವೊಂದನ್ನ ರೈಲ್ವೆ ಸಿಬ್ಬಂದಿಯೊರ್ವ ಕಾಪಾಡಿ ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರರಾಗಿದ್ದರು. ಇವರ ಧೈರ್ಯ ಮೆಚ್ಚಿ ರೈಲ್ವೆ ಸಚಿವಾಲಯ 50 ಸಾವಿರ ರೂ. ನಗದು ಬಹುಮಾನ ಘೋಷಣೆ ಮಾಡಿತ್ತು.

ಇದೀಗ ತನಗೆ ನೀಡಿರುವ ಹಣದಲ್ಲಿ ಅರ್ಧದಷ್ಟು ಮಗುವಿನ ಕುಟುಂಬಕ್ಕೆ ನೀಡಲು ಆ ರೈಲ್ವೆ ಸಿಬ್ಬಂದಿ ಮುಂದಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಘೋಷಣೆ ಸಹ ಮಾಡಿದ್ದಾರೆ.

  • I'll give half of the amount, given to me as token of appreciation, for that child's welfare & education. I came to know that his family isn't financially strong. So I decided this: Mayur Shelkhe, pointsman who saved a child who fell on tracks at Vangani railway station on 17.04 pic.twitter.com/IWdacY0DFf

    — ANI (@ANI) April 22, 2021 " class="align-text-top noRightClick twitterSection" data=" ">

ಮುಂಬೈನ ವಂಗಾನಿ ರೈಲ್ವೆ ನಿಲ್ದಾಣದ ಎರಡನೇ ಪ್ಲಾಟ್​ಪಾರ್ಮ್​ನಲ್ಲಿ ಮಹಿಳೆ ಹಾಗೂ ಮಗು ನಡೆದುಕೊಂಡು ಹೋಗ್ತಿದ್ದ ವೇಳೆ ಆಯ ತಪ್ಪಿ ಮಗು ರೈಲ್ವೆ ಹಳಿ ಮೇಲೆ ಬಿದ್ದಿತ್ತು. ಈ ವೇಳೆ ಎದುರಿನಿಂದ ರೈಲು ಆಗಮಿಸುತ್ತಿತ್ತು. ಕೆಲವೇ ಕ್ಷಣಾರ್ಧದಲ್ಲಿ ರೈಲು ಮಗುವಿನ ಮೇಲೆ ಹಾಯ್ದುಹೋಗಬೇಕು ಎನ್ನುವಷ್ಟರಲ್ಲಿ ಮುಂಬೈ ವಿಭಾಗದ ರೈಲ್ವೆ ಸಿಬ್ಬಂದಿ(ಪಾಯಿಂಟ್​ಮ್ಯಾನ್​) ಮಯೂರ್​​ ಅದರ ರಕ್ಷಣೆ ಮಾಡಿ, ಮಗುವಿನ ಪಾಲಿಗೆ ದೇವರಾಗಿದ್ದರು. ಈ ವಿಡಿಯೋ ಎಲ್ಲಡೆ ವೈರಲ್​ ಕೂಡಾ ಆಗಿತ್ತು.

  • #WATCH | Maharashtra: A pointsman in Mumbai Division, Mayur Shelkhe saves life of a child who lost his balance while walking at platform 2 of Vangani railway station & fell on railway tracks, while a train was moving in his direction. (17.04.2021)

    (Video source: Central Railway) pic.twitter.com/6bVhTqZzJ4

    — ANI (@ANI) April 19, 2021 " class="align-text-top noRightClick twitterSection" data=" ">

ಇದನ್ನೂ ಓದಿ: ರೈಲ್ವೆ ಪ್ಲಾಟ್ ​​ಫಾರ್ಮ್​ನಿಂದ ಹಳಿ ಮೇಲೆ ಬಿದ್ದ ಮಗುವನ್ನ ದೇವರಂತೆ ಕಾಪಾಡಿದ ಸಿಬ್ಬಂದಿ!

ಇವರ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಕೇಂದ್ರ ರೈಲ್ವೆ ಇಲಾಖೆ 50 ಸಾವಿರ ರೂ. ನಗದು ಘೋಷಣೆ ಮಾಡಿತ್ತು. ಅದರಲ್ಲಿ ಅರ್ಧ ಹಣ ಮಗುವಿನ ಶಿಕ್ಷಣಕ್ಕೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇನ್ನು ಮಯೂರ್​ಗೆ ಮಹೀಂದ್ರಾ ಕಂಪನಿ ಜಾವಾ ಬೈಕ್​ ನೀಡುವುದಾಗಿ ಘೋಷಣೆ ಮಾಡಿದೆ. ಇನ್ನು ಲಭ್ಯವಾಗಿರುವ ಮಾಹಿತಿ ಪ್ರಕಾರ ತಾಯಿ ಕುರುಡಿಯಾಗಿದ್ದು, ಆಕೆಗೆ ರಕ್ಷಣೆ ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.