ETV Bharat / bharat

ಭದ್ರತಾ ಲೋಪದ ತನಿಖೆ: ಪಂಜಾಬ್ ಡಿಜಿಪಿ ಸೇರಿ ಉನ್ನತಾಧಿಕಾರಿಗಳಿಗೆ ನೋಟಿಸ್ - MHA summoned Punjab DGP

ಕಳೆದ ಮೂರು ದಿನಗಳ ಹಿಂದೆ ಪಂಜಾಬ್​ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಭದ್ರತಾ ಲೋಪ ಅನುಭವಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ತನಿಖೆ ಆರಂಭಿಸಿದೆ.

PM's security breach: MHA panel in Ferozepur  summons DGP Siddharth Chattopadhyay

author img

By

Published : Jan 7, 2022, 5:59 PM IST

Updated : Jan 7, 2022, 6:09 PM IST

ಫಿರೋಜ್​ಪುರ್​(ಪಂಜಾಬ್​): ಪ್ರಧಾನಿ ನರೇಂದ್ರ ಮೋದಿ ಎದುರಿಸಿದ ಭದ್ರತಾ ಲೋಪವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಗೃಹ ಸಚಿವಾಲಯ ಈಗಾಗಲೇ ತನಿಖೆಗೆ ಆದೇಶ ನೀಡಿದ್ದು, ಇದರ ಬೆನ್ನಲ್ಲೇ ಪಂಜಾಬ್​ ಡಿಜಿಪಿ ಸೇರಿದಂತೆ 14 ಉನ್ನತಾಧಿಕಾರಿಗಳಿಗೆ ನೋಟಿಸ್​​ ಜಾರಿ ಮಾಡಿದೆ. ಮುಂದಿನ 24 ಗಂಟೆಯೊಳಗೆ ಉತ್ತರ ನೀಡುವಂತೆ ಸೂಚನೆ ನೀಡಲಾಗಿದೆ.

ಫಿರೋಜ್​ಪುರ್​​ನಲ್ಲಿ ಪ್ರಧಾನಿ ಮೋದಿ ಎದುರಿಸಿರುವ ಭದ್ರತಾ ಲೋಪದ ಬಗ್ಗೆ ತನಿಖೆ ನಡೆಸುತ್ತಿರುವ ಕೇಂದ್ರ ತಂಡ ಪಂಜಾಬ್​ ಡಿಜಿಪಿ ಸಿದ್ಧಾರ್ಥ್​​ ಚಟ್ಟೋಪಾಧ್ಯಾಯ ಸೇರಿ ಐದು ಜಿಲ್ಲೆಯ 13 ಉನ್ನತ ಅಧಿಕಾರಿಗಳಿಗೆ ನೋಟಿಸ್​ ಜಾರಿ ಮಾಡಿದೆ. ಜೊತೆಗೆ ಫ್ಲೈ ಓವರ್​​ನಲ್ಲಿ ಪ್ರಧಾನಿ ಮೋದಿ ತೆರಳುತ್ತಿದ್ದ ರಸ್ತೆಗೆ ಅಡ್ಡಿಪಡಿಸಿರುವ 150 ಅಪರಿಚಿತರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದೆ.

ಇದನ್ನೂ ಓದಿ: 'ಕೇಂದ್ರದ ಗಿಣಿ': ಕ್ಯಾ.ಅಮರೀಂದರ್‌ ವಿರುದ್ಧ ಸಿಧು ವಾಗ್ದಾಳಿ

ಘಟನೆಗೆ ಸಂಬಂಧಿಸಿದಂತೆ ಫಿರೋಜ್​ಪುರ್​​ ಸಮೀಪದ ಕುಲ್​ಗರ್ಹಿ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದ್ದು, ಈಗಾಗಲೇ ಕೇಂದ್ರದ ತ್ರಿಸದಸ್ಯ ಸಮಿತಿಯಿಂದ ತನಿಖೆ ಆರಂಭಗೊಂಡಿದೆ. ಕೇಂದ್ರ ಸಂಪುಟ ಸಚಿವಾಲಯದ ಕಾರ್ಯದರ್ಶಿ ಸುಧೀರ್​ ಕುಮಾರ್ ಸಕ್ಸೇನಾ ನೇತೃತ್ವದ ಸಮಿತಿಯಲ್ಲಿ ಗುಪ್ತಚರ ಇಲಾಖೆ​ ಜಂಟಿ ನಿರ್ದೇಶಕ ಬಲ್ಬೀರ್​ ಸಿಂಗ್​ ಹಾಗೂ ವಿಶೇಷ ರಕ್ಷಣೆ ಐಜಿ ಎಸ್​ ಸುರೇಶ್​ ಇದರಲ್ಲಿ ಇದ್ದಾರೆ.

ರಾಜ್ಯ ಸರ್ಕಾರದಿಂದಲೂ ತನಿಖೆ ನಡೆಯುತ್ತಿದ್ದು, ಈಗಾಗಲೇ ಪ್ರಾಥಮಿಕ ವರದಿ ಕೇಂದ್ರಕ್ಕೆ ಸಲ್ಲಿಕೆ ಮಾಡಲಾಗಿದೆ. ಸುಪ್ರೀಂಕೋರ್ಟ್​​ನಲ್ಲೂ ಇದರ ವಿಚಾರಣೆ ಆರಂಭಗೊಂಡಿದ್ದು, ಪ್ರಕರಣ ಸೋಮವಾರಕ್ಕೆ ಮುಂದೂಡಿಕೆ ಮಾಡಲಾಗಿದೆ.

ಕಳೆದ ಎರಡು ದಿನಗಳ ಹಿಂದೆ ಪಂಜಾಬ್​ನ ಹುಸೇನಿವಾಲಾದಲ್ಲಿನ ರಾಷ್ಟ್ರೀಯ ಹುತಾತ್ಮರ ಸ್ಮಾರಕದಿಂದ ಫಿರೋಜ್‌ಪುರಕ್ಕೆ ಪ್ರಧಾನಿ ರಸ್ತೆ ಮಾರ್ಗವಾಗಿ ಸಂಚರಿಸುತ್ತಿದ್ದರು. ಈ ವೇಳೆ ಬೆಂಗಾವಲು ಪಡೆಯೊಂದಿಗೆ ಮೋದಿ ಫ್ಲೈಓವರ್‌ವೊಂದರಲ್ಲೇ ಸುಮಾರು 20 ನಿಮಿಷಗಳ ಕಾಲ ಕಳೆಯಬೇಕಾಯಿತು. ಪ್ರತಿಭಟನಾಕಾರರು ರಸ್ತೆಯಲ್ಲಿ ಅಡಚಣೆ ಉಂಟು ಮಾಡಿದ್ದೇ ಇದಕ್ಕೆ ಕಾರಣ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದರ ಬೆನ್ನಲ್ಲೇ ರ್‍ಯಾಲಿ ರದ್ದುಗೊಳಿಸಲಾಗಿತ್ತು. ಈ ಪ್ರಕರಣ ಇದೀಗ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.

Last Updated : Jan 7, 2022, 6:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.