ETV Bharat / bharat

30 ಅಡಿ ಎತ್ತರದ ಅಲ್ಲೂರಿ ಸೀತಾರಾಮರಾಜು ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ - legendary freedom fighter Alluri Sitarama

ಕಾಡಿನ ವೀರ ಎಂದೇ ಖ್ಯಾತಿಯಾಗಿದ್ದ ಆಂಧ್ರಪ್ರದೇಶದ ಭೀಮಾವರಂನ ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸೀತಾರಾಮರಾಜು ಅವರ 30 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಂದು ಅನಾವರಣಗೊಳಿಸಿದರು.

30 ಅಡಿ ಉದ್ದದ ಅಲ್ಲೂರಿ ಸೀತಾರಾಮರಾಜು ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ

author img

By

Published : Jul 4, 2022, 12:31 PM IST

ಭೀಮಾವರಂ (ಆಂಧ್ರಪ್ರದೇಶ): ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸೀತಾರಾಮ ರಾಜು ಅವರ 125 ನೇ ಜಯಂತಿಯಂದು ಅವರ 30 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಇಲ್ಲಿ ಅನಾವರಣಗೊಳಿಸಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಭೀಮಾವರಂನ ಎಎಸ್‌ಆರ್ ನಗರದ ಮುನ್ಸಿಪಲ್ ಪಾರ್ಕ್‌ನಲ್ಲಿ ಕ್ಷತ್ರಿಯ ಸೇವಾ ಸಮಿತಿಯಿಂದ 3 ಕೋಟಿ ರೂಪಾಯಿ ವೆಚ್ಚದಲ್ಲಿ 15 ಟನ್ ತೂಕದ 30 ಅಡಿ ಎತ್ತರದ ಪ್ರತಿಮೆಯನ್ನು ನಿರ್ಮಿಸಲಾಗಿದೆ.

ಅನಾವರಣ ಕಾರ್ಯಕ್ರಮದ ಸಂದರ್ಭದಲ್ಲಿ ಆಂಧ್ರಪ್ರದೇಶದ ರಾಜ್ಯಪಾಲ ಬಿಸ್ವ ಭೂಷಣ ಹರಿಚಂದನ್, ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜಿ.ಕಿಶನ್ ರೆಡ್ಡಿ, ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ, ನಟ ಚಿರಂಜೀವಿ ಮತ್ತಿತರರು ಉಪಸ್ಥಿತರಿದ್ದರು.

ಬಳಿಕ ಮಾತನಾಡಿದ ಪ್ರಧಾನಿ ಮೋದಿ, "ಅಲ್ಲೂರಿ ಸೀತಾರಾಮ ರಾಜು ಅವರ 125 ನೇ ಜಯಂತಿ ಮತ್ತು ರಂಪ ಕ್ರಾಂತಿಯ 100 ನೇ ವಾರ್ಷಿಕೋತ್ಸವವನ್ನು ವರ್ಷವಿಡೀ ಆಚರಿಸಲಾಗುವುದು. ದೇಶವು ಸ್ವಾತಂತ್ರ್ಯದ 75 ವರ್ಷಗಳ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವುದರ ಜೊತೆಗೆ, ಅಲ್ಲೂರಿ ಸೀತಾರಾಮ ರಾಜು ಅವರ 125 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದೇವೆ. ಅದರೊಂದಿಗೆ ಸ್ವಾತಂತ್ರ್ಯಕ್ಕಾಗಿ ನಡೆದ 'ರಂಪ ಕ್ರಾಂತಿ' ಕೂಡ 100 ವರ್ಷಗಳ ಸಂಭ್ರಮದಲ್ಲಿದೆ" ಎಂದರು.

ಇದನ್ನೂ ಓದಿ: 'ಅಗ್ನಿಪಥ' ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಪಿಐಎಲ್​: ಮುಂದಿನ ವಾರ ವಿಚಾರಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.