ETV Bharat / bharat

ಹೊಸ ವರ್ಷದ ಮೊದಲ ದಿನ ಪ್ರಧಾನಿಯಿಂದ ಲೈಟ್ ಹೌಸ್ ಪ್ರಾಜೆಕ್ಟ್​ನ ಕಾಮಗಾರಿ ಉದ್ಘಾಟನೆ​ - ರಾಜಕೋಟ್​​ನಲ್ಲಿ ಲೈಟ್ ಹೌಸ್ ಪ್ರಾಜೆಕ್ಟ್

ಆರ್ಥಿಕವಾಗಿ ಹಿಂದುಳಿದವರಿಗಾಗಿ ಕೇಂದ್ರ ಸರ್ಕಾರ ಲೈಟ್ ಹೌಸ್ ಪ್ರಾಜೆಕ್ಟ್ ಹಮ್ಮಿಕೊಂಡಿದ್ದು, ಈ ಯೋಜನೆಯ ಕಾಮಗಾರಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

pm modi
ಪ್ರಧಾನಿ ಮೋದಿ
author img

By

Published : Jan 1, 2021, 12:02 AM IST

Updated : Jan 1, 2021, 12:44 AM IST

ಅಹಮದಾಬಾದ್ (ಗುಜರಾತ್​): ಕೇಂದ್ರ ಸರ್ಕಾರದ ಲೈಟ್ ಹೌಸ್ ಪ್ರಾಜೆಕ್ಟ್ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ನಿರ್ಮಿಸಲಾಗುವ 1,144 ಮನೆಗಳ ಕಾಮಗಾರಿಗೆ ಪ್ರಧಾನಿ ಮೋದಿ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ವಿಡಿಯೋ ಕಾನ್ಫರೆನ್ಸ್​​ ಮೂಲಕ ಪ್ರಧಾನಿ ನರೇಂದ್ರ ಮೋದಿ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಗುಜರಾತ್ ಸರ್ಕಾರ ಮಾಹಿತಿ ನೀಡಿದ್ದು ಮಾತ್ರವಲ್ಲದೇ ಸ್ವತಃ ಪ್ರಧಾನ ಮಂತ್ರಿಗಳೇ ತಮ್ಮ ಟ್ವಿಟರ್​ ಖಾತೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: 'ಕೊರೊನಾ ವಾರಿಯರ್​​ಗಳನ್ನ ನೆನೆಯುವ ವರ್ಷದ ಕೊನೆ ದಿನ': ಏಮ್ಸ್ ಶಂಕುಸ್ಥಾಪನೆ ಬಳಿಕ ಮೋದಿ ಮಾತು

2021ರ ಮೊದಲ ದಿನ, ನಗರ ಯೋಜನೆಯ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಲಿದ್ದು, ಲೈಟ್ ಹೌಸ್ ಪ್ರಾಜೆಕ್ಟ್‌ಗಳಿಗೆ ಶಂಕು ಸ್ಥಾಪನೆ ಮತ್ತು ಪಿಎಂಎವೈ (ನಗರ) ಮತ್ತು ಆಶಾ-ಇಂಡಿಯಾ ಪ್ರಶಸ್ತಿಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಟ್ವಿಟರ್​ನಲ್ಲಿ ಮಾಹಿತಿ ನೀಡಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಹಾಜರಾಗಲಿದ್ದಾರೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.

ಎಲ್‌ಎಚ್‌ಪಿ ಯೋಜನೆಯಡಿ ಕೇಂದ್ರ ಸರ್ಕಾರವು ಇಂಧೋರ್​, ಚೆನ್ನೈ, ರಾಂಚಿ, ಅಗರ್ತಲಾ, ಲಕ್ನೋ ಮತ್ತು ರಾಜ್‌ಕೋಟ್ ನಗರಗಳಲ್ಲಿ ತಲಾ 1,000 ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಿದೆ. ಇವುಗಳನ್ನು ಆರ್ಥಿಕವಾಗಿ ಹಿಂದುಳಿದವರರಿಗೆ ವಿತರಣೆ ಮಾಡಲಾಗುತ್ತದೆ.

Last Updated : Jan 1, 2021, 12:44 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.