ETV Bharat / bharat

ಇಡಿಎಫ್​ಸಿಯ ನ್ಯೂ ಭೌಪುರ್- ನ್ಯೂ ಖುರ್ಜಾಗೆ ಪ್ರಧಾನಿ ಮೋದಿ ಚಾಲನೆ

ಇಡಿಎಫ್​ಸಿಯ ನ್ಯೂ ಭೌಪುರ್- ನ್ಯೂ ಖುರ್ಜಾ ರೈಲ್ವೆ ವಿಭಾಗಕ್ಕೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ.

author img

By

Published : Dec 29, 2020, 4:35 AM IST

pm modi
ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಡಿಎಫ್​ಸಿ (ಈಸ್ಟರ್ನ್​ ಡೆಡಿಕೇಟೆಡ್​ ಫ್ರೈಟ್​ ಕಾರಿಡಾರ್​)ನ ನ್ಯೂ ಭೌಪುರ್- ನ್ಯೂ ಖುರ್ಜಾ ರೈಲ್ವೆ ವಿಭಾಗಕ್ಕೆ ಇಂದು ಚಾಲನೆ ನೀಡಲಿದ್ದಾರೆ.

ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಪ್ರಧಾನಿ ಮೋದಿ ಈ ರೈಲ್ವೆ ವಿಭಾಗಕ್ಕೆ ಚಾಲನೆ ನೀಡಲಿದ್ದು, ಪ್ರಧಾನ ಮಂತ್ರಿಗಳ ಕಚೇರಿಯ ಮಾಹಿತಿಯಂತೆ ಪ್ರಯಾಗರಾಜ್​ನಲ್ಲಿ ಇಡಿಎಫ್​ಸಿಯ ಆಪರೇಷನ್​ ಕಂಟ್ರೋಲ್ ರೂಂ ಅನ್ನು ಕೂಡಾ ಉದ್ಘಾಟನೆ ಮಾಡಲಿದ್ದಾರೆ.

ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ಸಚಿವ ಪಿಯೂಷ್ ಗೋಯಲ್ ಉಪಸ್ಥಿತಿ ವಹಿಸಲಿದ್ದಾರೆ.

ಇದನ್ನೂ ಓದಿ: 100ನೇ 'ಕಿಸಾನ್ ರೈಲಿ'ಗೆ ಪ್ರಧಾನಿ ಮೋದಿ ಹಸಿರು ನಿಶಾನೆ

ಇಡಿಎಫ್‌ಸಿಯ 351 ಕಿ.ಮೀ ನ್ಯೂ ಭೌಪುರ್ - ಹೊಸ ಖುರ್ಜಾ ವಿಭಾಗವು ಉತ್ತರ ಪ್ರದೇಶದಲ್ಲಿದೆ ಮತ್ತು ಈ ಯೋಜನೆಗೆ 5,750 ಕೋಟಿ ರೂಪಾಯಿಯನ್ನು ವೆಚ್ಚ ಮಾಡಲಾಗಿದೆ.

ಏನಿದು ಇಡಿಎಫ್​ಸಿ.?

ಇಡಿಎಫ್​ಸಿ ಸರಕು ಸೇವೆಗಳ ಸಾಗಣೆಗೆಂದೇ ಮೀಸಲಿಟ್ಟು ರೂಪಿಸಲಾದ ಯೋಜನೆಯಾಗಿದ್ದು, ಪಂಜಾಬ್​ನ ಲುದಿಯಾನಾ ಸಮೀಪದ ಸಹ್ನೇವಾಲ್​ ಬಳಿ ಆರಂಭವಾಗಿ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳನ್ನು ದಾಟಿ ಪಶ್ಚಿಮ ಬಂಗಾಳದ ದಂಗುಣಿ ಸಮೀಪ ಕೊನೆಗೊಳ್ಳುತ್ತದೆ.

ಒಟ್ಟು 1856 ಕಿಲೋಮೀಟರ್ ದೂರದ ಪ್ರದೇಶಗಳನ್ನು ಈ ಮಾರ್ಗ ಸಂಪರ್ಕಿಸಲಿದ್ದು, ಈ ಮಾರ್ಗದಲ್ಲಿ ಬರುವ ಕೈಗಾರಿಕೆಗಳ ಅಭಿವೃದ್ದಿಗೆ ವರದಾನವಾಗಲಿದೆ. ಈಗ ಸದ್ಯಕ್ಕೆ ಉತ್ತರ ಪ್ರದೇಶದಲ್ಲಿರುವ ನ್ಯೂ ಭೌಪುರ್- ನ್ಯೂ ಖುರ್ಜಾ ರೈಲ್ವೆ ವಿಭಾಗಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.